Breaking News
Home / ರಾಜ್ಯ (page 974)

ರಾಜ್ಯ

ತಪ್ಪಿನ ಅರಿವಾಗಿ ಮತ್ತೆ ಮೂರು ಮಕ್ಕಳೊಂದಿಗೆ ಗರ್ಭಿಣಿ ಪತ್ನಿಯನ್ನು ಮನೆತುಂಬಿಸಿಕೊಂಡ ಪತಿ…

ಮನೆಯವರ ವಿರೋಧ ಕಟ್ಟಿಕೊಂಡು ಪ್ರೇಮವಿವಾಹವಾದ ಬಳಿಕ ೩ ಮಕ್ಕಳ ಗರ್ಭವತಿ ಅನುಭವಿಸಿದ್ದು ಅಷ್ಟೀಷ್ಟಲ್ಲ. ಕೊನೆಗೂ ಆಕೆಯ ಗಂಡನನ್ನು ಹುಡುಕಿ ಆ ಪ್ರೇಮಿಗಳನ್ನು ಒಂದು ಮಾಡಲಾಗಿದೆ. ಅಷ್ಟಕ್ಕೂ ಆ ದಂಪತಿಗಳಾರು … ಅವರನ್ನು ಒಂದುಗೂಡಿಸಿದ್ದಾದರೂ ಯಾರು??? ಅಂತೀರಾ. ಹಾಗಾದ್ರೇ ನೋಡಿ ಈ ಇಂಟರೆಸ್ಟಿಂಗ್ ಸ್ಟೋರಿ. ಗಿಡಗಂಟಿಗಳಲ್ಲಿ ವಾಸಿಸುತ್ತಿರುವ ಮಹಿಳೆ… ಹಸಿವು-ನೀರಡಿಕೆಯಿಂದ ಪರಿತಪಿಸುತ್ತಿರುವ ಗರ್ಭಿಣಿಯ ಮೂರು ಮಕ್ಕಳು… ಗಿಡಗಂಟಿಯಲ್ಲಿ ಪತಿಯಿಲ್ಲದೇ ಪರಿತಪಿಸುತ್ತಿದ್ದ ಅಬಲೆಗೆ ಸಹಾಯ ಮಾಡಿದ ಫೌಂಡೇಶನ್… ಹೌದು, ೮ ವರ್ಷದ ಹಿಂದೆ …

Read More »

ನಗರದ ಸಮಾದೇವಿಗಲ್ಲಿಯಲ್ಲಿರುವ ಪಟ್ಟಣಶೆಟ್ಟಿ ಸ್ಯ್ಕಾನಿಂಗ್ ಸೆಂಟರ್ ಸೇರಿದಂತೆ ತಾಲೂಕಿನಾದ್ಯಂತ ಸ್ಕ್ಯಾನಿಂಗ್ ಸೆಂಟರ್ ಗಳ‌ ಮೇಲೆ‌ ಬೆಳಗಾವಿ ಟಿಎಚ್ಒ ಡಾ.ಶಿವಾನಂದ ಮಾಸ್ತಿಹೊಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಸ್ಕ್ಯಾನಿಂಗ್ ಸೆಂಟರ್ ನಡೆಸಲು ಅನುಮತಿ ಪಡೆದಿದೆಯೋ? ಇಲ್ಲವೋ? ಎಂಬ ಬಗ್ಗೆ ಮಾಹಿತಿ, ಗರ್ಭಿಣಿಯ ಮಾಹಿತಿ ಒಳಗೊಂಡಿರುವ ದಾಖಲೆ ಪತ್ರಗಳ ಪರಿಶೀಲನೆ, ಜೊತೆಗೆ ಭ್ರೂಣ ಪತ್ತೆ ಅಪರಾಧ ಎಂಬ ಭಿತ್ತಿ ಪತ್ರ ಅಂಟಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.ದಾಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಟಿಎಚ್ಒ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾರ್ಗದರ್ಶನದಲ್ಲಿ ಬೆಳಗಾವಿ ತಾಲೂಕಿನ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದೇವೆ. ದಾಖಲೆಗಳು ಸರಿ ಇದೆಯೋ ಇಲ್ಲವೋ ಅನ್ನೋದನ್ನು ಪರಿಶೀಲನೆ ಮಾಡಿದ್ದೇವೆ. ರಿಜಿಸ್ಟರ್ ಬುಕ್, ಎಫ್ ಫಾರ್ಮೆಟ್, ಗರ್ಭಿಣಿ ತಪಾಸಣೆ ಮಾಡುವಾಗ ಮಷಿನ್ ರಿಜಿಸ್ಟರ್ ಇದ್ದ ಬಗ್ಗೆ, ಎಪ್ ಫಾರ್ಮೆಟ್ ಸರಿಯಾಗಿ ಸಲ್ಲಿಕೆ ಬಗ್ಗೆ ಇದರ ಜೊತೆಗೆ ಯಾವುದೇ ಕಾರಣಕ್ಕೆ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಬಾರದು. ತಾಯಿ‌ ಮತ್ತು ಮಗುವಿನ ಆರೋಗ್ಯವನ್ನ ಮಾತ್ರ ತಪಾಸಣೆ ಮಾಡಬೇಕು. ಐದು ತಂಡದಲ್ಲಿ 120ಕ್ಕೂ ಅಧಿಕ ಸೆಂಟರ್ ಗಳಲ್ಲಿ ತಪಾಸಣೆ ಮಾಡುತ್ತೇವೆ. ಇಲ್ಲಿಯವರೆಗೆ ಬೆಳಗಾವಿ ತಾಲೂಕಿನ ಅಂತಹ ಸ್ಕ್ಯಾನಿಂಗ್ ಸೆಂಟರ್ ಕಂಡುಬಂದಿಲ್ಲ. ತಾಲೂಕಿನಲ್ಲಿ ಎಲ್ಲ ರೀತಿಯಲ್ಲಿ ವ್ಯವಸ್ಥಿತವಾಗಿ ಸ್ಕ್ಯಾನಿಂಗ್ ಸೆಂಟರ್ ಕಾರ್ಯ ನಡೆಸುತ್ತಿವೆ ಎಂದು ಹೇಳಿದರು.

ಬೆಳಗಾವಿ: ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಲ್ಲಿರುವ 100ಕ್ಕೂ ಅಧಿಕ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ತಾಲೂಕಾ ವೈದ್ಯಾಧಿಕಾರಿ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಗಿದೆ‌. ಮೂಡಲಗಿ ಪಟ್ಟಣದಲ್ಲಿ ಭ್ರೂಣಗಳು ಪತ್ತೆಯಾಗಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯ ಎಲ್ಲ ತಾಲೂಕಿನ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ನಗರದ ಸಮಾದೇವಿಗಲ್ಲಿಯಲ್ಲಿರುವ ಪಟ್ಟಣಶೆಟ್ಟಿ ಸ್ಯ್ಕಾನಿಂಗ್ ಸೆಂಟರ್ ಸೇರಿದಂತೆ ತಾಲೂಕಿನಾದ್ಯಂತ ಸ್ಕ್ಯಾನಿಂಗ್ ಸೆಂಟರ್ ಗಳ‌ ಮೇಲೆ‌ …

Read More »

ನಾಳೆಯಿಂದ `SSLC’ ಪೂರಕ ಪರೀಕ್ಷೆ

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ( Coronavirus ) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ . ಈ ನಡುವೆಯೂ ದಿನಾಂಕ 27-06-2022 ರಿಂದ 04-07-2022 ರವರೆಗೆ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ( SSLC Supplementary Exam ) ನಿಗದಿ ಪಡಿಸಲಾಗಿದೆ . ಕೋವಿಡ್ ನಡುವೆಯೂ ನಡೆಯಲಿರುವಂತ ಪೂರಕ ಪರೀಕ್ಷೆಗೆ ಶಿಕ್ಷಣ ಇಲಾಖೆಯಿಂದ ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ . ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು ಇದೇ ಜೂನ್ 27, 2022ರಿಂದ ದಿನಾಂಕ 04-07-2022ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ 94649 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ …

Read More »

ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರದಾಳಿ

ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿರುವ ನಡುವೆಯೇ ಪುಣೆಯಲ್ಲಿ ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿರುವ ಘಟನೆ ಶನಿವಾರ (ಜೂನ್ 25) ನಡೆದಿದೆ.   ಈ ಹಿನ್ನೆಲೆಯಲ್ಲಿ ನಗರದಲ್ಲಿರು ಶಿವಸೇನಾ ಮುಖಂಡರ ಕಚೇರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಪುಣೆ ಪೊಲೀಸ್ವರಿಷ್ಠಾಧಿಕಾರಿ ಎಲ್ಲಾ ಪೊಲೀಸ್ ಠಾಣೆಗೆಳಿಗೆ ಸಂದೇಶವನ್ನು ರವಾನಿಸಿದ್ದಾರೆ. ಎಲ್ಲಾ ದ್ರೋಹಿಗಳಿಗೂ ಮತ್ತು ನಮ್ಮ ವರಿಷ್ಠ ಉದ್ಧವ್ ಠಾಕ್ರೆಗೆ ಕಿರುಕುಳ ನೀಡಿದ …

Read More »

ಬೆಳಗಾವಿ ಜನಪ್ರಿಯ ಶಾಸಕ ಅನಿಲ್ ಬೆನಕೆ ಫೌಂಡೇಶನ್ ವತಿಯಿಂದ ಉತ್ತರ ಕ್ಷೇತ್ರ ಗಳಲ್ಲಿ ಫ್ರಿ ಹೆಲ್ತ್ ಕ್ಯಾಂಪ್

ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಬೆಳಗಾವಿ: ಕೆ ಎಲ್ ಇ ಸಂಶೋಧನಾ ಕೇಂದ್ರ, ಜೆ ಎನ್ ಮೇಡಿಕಲ್ ಕಾಲೇಜು ಹಾಗೂ ಅನಿಲ ಬೆನಕೆ ಫೌಂಡೇಶನ್ ಹಾಗೂ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿತ್ತು. ಶನಿವಾರ ರುಕ್ಮಿಣಿ ನಗರದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ …

Read More »

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಕ್ರಯ ಪತ್ರ ಹಸ್ತಾಂತರಿಸಿದ C.M. ಬೊಮ್ಮಾಯಿ

ಬೆಂಗಳೂರು: ಸುಮಾರು 8000 ಕ್ಕೂ ಹೆಚ್ಚು ಮರಗಳಿಗೆ ತಾಯಿ ಸ್ವರೂಪವಾಗಿರುವ ಸಾಲುಮರದ ತಿಮ್ಮಕ್ಕಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನ ಮಂಜೂರು ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಮ್ಮಕ್ಕಗೆ ನಿವೇಶನ ಕ್ರಯಪತ್ರವನ್ನು ಹಂಚಿಕೆ ಮಾಡಿದರು.   ಕೆಲ ದಿನಗಳ ಹಿಂದಷ್ಟೇ ಸಿಎಂ ಬೊಮ್ಮಾಯಿ ಅವರನ್ನು ತಿಮ್ಮಕ್ಕ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಸಿಎಂ ಸೂಚನೆ ಮೇರೆಗೆ ಬಿಡಿಎ, ನಿವೇಶನ ಹಂಚಿಕೆ ಪತ್ರವನ್ನು ತಿಮ್ಮಕ್ಕಳಿಗೆ ನೀಡಿತ್ತು. ಇಂದು (ಜೂನ್​ …

Read More »

ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ಜೀರ್ಲಿ ವಕೀಲರು ಹೇಕಿದ್ದೆಕ್ಕೆ ಗೊತ್ತಾ?

ಜೂನ್ 25 1975ರಲ್ಲಿ ಇಂಧಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದಲ್ಲಿ ಹೇರಿದ್ದ ತುರ್ತು ಪರೀಸ್ಥಿತಿಯ ಕರಾಳ ಸತ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂಬಿ ಜಿರಲಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎಂ.ಬಿ ಜಿರಲಿ ರವರು, 1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರೀಸ್ಥಿತಿಯನ್ನು ಕುರಿತಂತೆ ಬೇಸರ ವ್ಯಕ್ತಪಡಿಸಿದರು. ಜೂನ್ 25, 1975ರಲ್ಲಿ …

Read More »

ವಿದ್ಯಾರ್ಥಿಗಳು ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್‍ನಿಂದ ದೂರವಿರಬೇಕು: ವಿದ್ಯಾರ್ಥಿಗಳು ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್‍ನಿಂದ ದೂರವಿರಬೇಕು

ಗುರಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ, ವಿದ್ಯಾರ್ಥಿಗಳು ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್‍ನಿಂದ ದೂರವಿರಬೇಕು. ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಲು ಮುಂದಾಗಬೇಕು ಎಂದು ಮಾಜಿ ವಿಧಾನಪರಿಷತ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು. ಚಿಕ್ಕೋಡಿಯ ಕೆಎಲ್‍ಇ ಇಂಜನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅವರು ಇಡೀ ದೇಶಕ್ಕೆ ಸಿಇಟಿ ಪರಿಚಯಿಸಿದ ಹೆಮ್ಮೆ ನಮ್ಮ ರಾಜ್ಯಕ್ಕೆ ಸಲ್ಲುತ್ತೆ.ವಿಧ್ಯಾರ್ಥಿಗಳು ನಿರಂತರವಾಗಿ …

Read More »

ಗ್ರೇಡ್ 1 ಮತ್ತು ಗ್ರೇಡ್ 2 ತಹಸಿಲ್ದಾರ ವರ್ಗಾವಣೆಗೊಳಿಸಿ ಸರಕಾರ ಆದೇಶ

, ಬೆಂಗಳೂರು – ಬೆಳಗಾವಿ ಜಿಲ್ಲೆಯ ಕೆಲವರು ಸೇರಿದಂತೆ ಒಟ್ಟೂ 39 ತಹಸಿಲ್ದಾರರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಇವರಲ್ಲಿ ಮೂವರನ್ನು ಸಾರ್ವಜನಿಕರ ದೂರಿನ ಮೇರೆಗೆ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಗ್ರೇಡ್ 1 ಮತ್ತು ಗ್ರೇಡ್ 2 ತಹಸಿಲ್ದಾರರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆಗೊಳಿಸಿ ಶುಕ್ರವಾರ ಸರಕಾರ ಆದೇಶ ಹೊರಡಿಸಿದೆ. ರಾಮದುರ್ಗ ತಹಸಿಲ್ದಾರ ರುಕ್ಮಿಣಿ ದಂಡೇಕರ್, ಕಲಬುರಗಿ ಜಿಲ್ಲೆ ಕಾಳಗಿ ತಹಸಿಲ್ದಾರ ರಾಜಕುಮಾರ ಜಾಧವ ಹಾಗೂ ರಾಯಚೂರು …

Read More »

ರಾಜ್ಯದ 56 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ

ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣ ಎಕ್ಕುಂಡಿ ಸೇರಿದಂತೆ ರಾಜ್ಯದ 56 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆ ಮಾಡಲಾಗಿದ್ದು, ಶಿಕ್ಷಣಾಧಿಕಾರಿ ಇಲ್ಲವೇ ತತ್ಸಮಾನ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗಿದೆ.     ಖಾನಾಪುರ ಬಿಇಒ ಲಕ್ಷ್ಮಣ ಎಕ್ಕುಂಡಿ ಅವರನ್ನು ಮುನಿರಾಬಾದ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕರನ್ನಾಗಿ ವರ್ಗಾಯಿಸಲಾಗಿದೆ. ಚಿಕ್ಕೋಡಿಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ದೀಪಕ್ ಕುಲಕರ್ಣಿ ಅವರನ್ನು ಧಾರವಾಡ …

Read More »