Breaking News

ಈ ‘ಮೇಕೆ’ ಬೆಲೆ ಬರೋಬ್ಬರಿ 77 ಲಕ್ಷ ರೂಪಾಯಿ.. ವಿಶೇಷತೆ ಏನು ಗೊತ್ತಾ!?

Spread the love

ರಾಯ್ಪುರ್​(ಛತ್ತೀಸ್​​ಗಢ): ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್​​ ಆಚರಣೆಗೆ ದಿನಗಣನೇ ಆರಂಭಗೊಂಡಿದೆ.

ಇದರ ಬೆನ್ನಲ್ಲೇ ಮೇಕೆಗಳ ವ್ಯಾಪಾರ ಬಲು ಜೋರಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಶೇಷತೆ ಹೊಂದಿರುವ ಮೇಕೆಗಳನ್ನ ಖರೀದಿ ಮಾಡಲಾಗುತ್ತಿದೆ. ಇದರ ಮಧ್ಯೆ ಕೆಲವೊಂದು ಮಾರುಕಟ್ಟೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೇಕೆಗಳು ಜನರ ಗಮನ ಸೆಳೆಯುತ್ತಿವೆ.

 ಮಾರುಕಟ್ಟೆಗಳಲ್ಲಿ ಮೇಕೆಗಳಿಗೆ ಇನ್ನಿಲ್ಲದ ಬೇಡಿಕೆಸದ್ಯ ಛತ್ತೀಸ್​​ಗಢದ ರಾಯ್ಪುರ್​​ ಬಕ್ರಿ ಮಂಡಿ ಮಾರುಕಟ್ಟೆಯಲ್ಲಿ ಬರೋಬ್ಬರಿ 70 ಲಕ್ಷ ರೂಪಾಯಿ ಮೇಕೆ ಎಲ್ಲರ ಗಮನ ಸೆಳೆಯುತ್ತಿದೆ. ಮಧ್ಯಪ್ರದೇಶದ ಅನುಪ್ಪೂರ್​ನ ದೇಶಿ ಮೇಕೆ ಇದಾಗಿದೆ. ಇದರ ದೇಹದ ಮೇಲೆ ಉರ್ದು ಭಾಷೆಯಲ್ಲಿ ಅಲ್ಲಾ ಮತ್ತು ಮೊಹಮ್ಮದ್ ಎಂದು ಬರೆಯಲಾಗಿದ್ದು, ಹೀಗಾಗಿ, ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಮಾಲೀಕ ವಾಹಿದ್ ಹುಸೇನ್​.

 

ಈ ಮೇಕೆಗೆ ಈಗಾಗಲೇ ನಾಗ್ಪುರದಿಂದ 22 ಲಕ್ಷ ರೂಪಾಯಿ ಆಫರ್ ಬಂದಿದೆ. ಆದರೆ, ನಾನು ಮಾರಾಟ ಮಾಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಡಿನ ಚಿತ್ರ ಪೋಸ್ಟ್ ಮಾಡಿ, ನನ್ನ ನಂಬರ್ ಹಂಚಿಕೊಂಡಿದ್ದೇನೆ ಎಂದಿದ್ದಾರೆ ವ್ಯಾಪಾರಿ. ಇನ್ನು ಮಾಳವದಲ್ಲಿ 11 ಲಕ್ಷ ಮೌಲ್ಯದ ಮೇಕೆ ಮಾರಾಟವಾಗಿದ್ದು, ರಾಜಸ್ಥಾನದ ಜೈಪುರ್​ದಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಮೇಕೆ ಮಾರಾಟ ಮಾಡಲಾಗಿದೆ.


Spread the love

About Laxminews 24x7

Check Also

ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ!

Spread the love ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ! • …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ