Breaking News

ಸುಷ್ಮಿತಾ ಸೇನ್ ಕನ್ನಡಕ ‌ʼಝೂಮ್ʼ ಮಾಡಿದಾಗ ಕಂಡಿದ್ದೇನು

Spread the love

ಉದ್ಯಮಿ‌ ಲಲಿತ್ ಮೋದಿ ಜೊತೆಗಿನ ಒಡನಾಟದಿಂದ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಈಗ ಹೆಚ್ಚು ಪ್ರಚಲಿತದಲ್ಲಿದ್ದಾರೆ.ಲಲಿತ್ ಮೋದಿ ಜೊತೆಗೆ ಡೇಟಿಂಗ್ ಇಳಿದಿದ್ದಕ್ಕೆ ಆಕೆಯನ್ನು ‘ಗೋಲ್ಡ್ ಡಿಗ್ಗರ್’ ಎಂದು ಕರೆಯುವುದರಿಂದ ಹಿಡಿದು ಮೀಮ್‌ಗಳನ್ನು ರಚಿಸುವವರೆಗೆ ಸಾಮಾಜಿಕ ಜಾಲತಾಣದಲ್ಲಿ ಗೋಳಾಡಿಸಿದ್ದಾರೆ.

ಈಗ ಹೊಸ ವಿಷಯದ ಮೂಲಕ‌ ಪುನಃ ಆಕೆಯನ್ನು ಎಳೆದುತಂದಿದ್ದಾರೆ.

ಆಕೆ ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣದ ಪ್ರೊಫೈಲ್‌ನಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಆ ಫೋಟೋ ಸಾಮಾನ್ಯ ಸೆಲ್ಫಿಯಂತೆ ಕಂಡುಬಂದಿದೆ.

ಆದರೆ ಜಾಲತಾಣಿಗರು ಅದರಲ್ಲೊಂದು ಸ್ವಾರಸ್ಯ ಕಂಡುಕೊಂಡಿದ್ದಾರೆ. ಆಕೆ ಧರಿಸಿದ್ದ ಚೌಕಾಕಾರದ ಸನ್ ಗ್ಲಾಸ್‌ನ ಭಾಗ ಜೂಮ್ ಮಾಡುವ ಮೂಲಕ ಸ್ವಾರಸ್ಯ ಹೆಕ್ಕಿ ತೆಗೆದಿದ್ದಾರೆ. ಆ ಝೂಮ್ ಮಾಡಲಾದ ಭಾಗವನ್ನು ತಮ್ಮ ಪ್ರೊಫೈಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಆಕೆಯ ಎದುರಿಗೆ ಮದ್ಯದ ಬಾಟಲಿಗಳಿದ್ದು, ಆಕೆಯ ಫೋಟೋದಲ್ಲಿ ಅದು ಕಾಣಿಸಿದೆ. ಫೋಟೋ ಝೂಮ್ ಮಾಡಿದಾಗ ಕನ್ನಡಕದಲ್ಲಿ ಅದು ಪ್ರತಿಫಲಿಸುತ್ತದೆ. ನೆಟ್ಟಿಗರು ಅದರಲ್ಲಿ ಮದ್ಯವಿದೆ ಎಂದು ಊಹಿಸಿ ಟ್ರೋಲ್ ಮಾಡಲು ಮುಂದಾದರು. ಇನ್ನು‌ ಕೆಲವರು ಆಕೆಯ ಪರ ನಿಂತರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ