Home / ರಾಜ್ಯ (page 918)

ರಾಜ್ಯ

ಭೂ ಹಗರಣ ಪ್ರಕರಣ: ಸಂಜಯ್ ರಾವತ್ ಇ.ಡಿ ಕಸ್ಟಡಿ ಆಗಸ್ಟ್ 8ರವರೆಗೆ ವಿಸ್ತರಣೆ

ಮುಂಬೈ: ಪಟ್ರಾ ಚಾವ್ಲ್ ಭೂ ಪುನರ್ ಅಭಿವೃದ್ಧಿ ಪ್ರಕರಣ ಮತ್ತು ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಶಿವಸೇನಾ ಹಿರಿಯ ಮುಖಂಡ ಸಂಜಯ್ ರಾವತ್ ಬಂಧನದ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದೆ.   ಇಂದು ರಾವತ್ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನಂತರ ಸಂಜಯ್ ರಾವತ್ ಅವರನ್ನು ಆಗಸ್ಟ್ 8ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ ಎಂದು ವರದಿ ತಿಳಿಸಿದೆ. ಭೂ ಹಗರಣಕ್ಕೆ …

Read More »

: ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಲಿ ಎಂದ ಅಶ್ವತ್ಥ ನಾರಾಯಣ .

ಬೆಳಗಾವಿ: ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ಆಗ್ರಹಿಸಿದರು. ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ರಾಜಕೀಯ ನಿವೃತ್ತಿ ಪಡೆಯಬೇಕು. ಔಟ್‌ಡೇಟೆಡ್‌ ಮಾಡಲ್‌ಗ‌ಳು ಎಲ್ಲ ಆಯ್ತು. ಐದು ವರ್ಷ ಜನ ಭಾರ ಹೊತ್ತುಕೊಂಡಿದ್ದರು. ಇನ್ನು ಯಾರು ಭಾರ ಹೊರುವವರು ಎಂದು ಟೀಕಿಸಿದರು. ಜತೆಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನೂ ತಿಳಿಸಿದರು. ರಾಜಕೀಯ ಪಕ್ಷದ ನಾಯಕನ ಯಾವುದೇ ಕಾರ್ಯಕ್ರಮ …

Read More »

ಮುಂದಿನ 6 ತಿಂಗಳಲ್ಲಿ ಫಾಸ್ಟಾಗ್‌ ವ್ಯವಸ್ಥೆ ಕೊನೆಯಾಗಲಿದೆಯೇ?

ನವದೆಹಲಿ: ಮುಂದಿನ 6 ತಿಂಗಳಲ್ಲಿ ಫಾಸ್ಟಾಗ್‌ ವ್ಯವಸ್ಥೆ ಕೊನೆಯಾಗಲಿದೆಯೇ? ರಾಜ್ಯಸಭೆಯಲ್ಲಿ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಆಡಿರುವ ಮಾತು ಇಂಥದ್ದೊಂದು ಸುಳಿವು ನೀಡಿದೆ. ನಾವು ಫಾಸ್ಟ್ಯಾಗ್ ಬದಲು ಜಿಪಿಎಸ್‌ ವ್ಯವಸ್ಥೆ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದೇವೆ. ನಮ್ಮ ಮುಂದೆ 2 ಆಯ್ಕೆಗಳಿವೆ. ಒಂದನೆಯದು, ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ. ಇಲ್ಲಿ ಕಾರಿನಲ್ಲೇ ಜಿಪಿಎಸ್‌ ಅಳವಡಿಸಲಾಗುತ್ತದೆ. ಕಾರು ಟೋಲ್‌ ಪ್ಲಾಜಾ ದಾಟಿದ ತಕ್ಷಣ ಬ್ಯಾಂಕ್‌ ಖಾತೆಯಿಂದ ಟೋಲ್‌ ಮೊತ್ತ ಕಡಿತಗೊಳ್ಳುತ್ತದೆ. ಇನ್ನೊಂದು, …

Read More »

ರಾಜ್ಯ ರಾಜಕೀಯ ಇತಿಹಾಸದಲ್ಲಿಯೇ ಅತಿಹೆಚ್ಚು ಜನ ಸೇರಿದ ಕಾರ್ಯಕ್ರಮ ‘ಸಿದ್ದರಾಮಯ್ಯ ಅಮೃತ ಮಹೋತ್ಸ’ವ

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಜನ್ಮ ದಿನದ ಅಮೃತ ಮಹೋತ್ಸವಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು ಎನ್ನಲಾಗಿದೆ. ಬಹುಶ: ದೇಶದಲ್ಲಿಯೇ ಯಾವ ನಾಯಕನ ಹುಟ್ಟುಹಬ್ಬ ಇಷ್ಟೊಂದು ಅದ್ದೂರಿಯಾಗಿ ಆಚರಿಸಿರಲಿಲ್ಲ ಎಂದು ಹೇಳಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ದಾವಣಗೆರೆಗೆ ಜನಸಾಗರ ಹರಿದು ಬಂದಿತ್ತು. ಕಿಲೋಮೀಟರುಗಟ್ಟಲೇ ಜನ ಸೇರಿದ್ದು, ಈ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನರು ಸೇರಿದ ಕಾರ್ಯಕ್ರಮ ಇದಾಗಿದೆ ಎನ್ನುವ ಹೆಗ್ಗಳಿಕೆಗೆ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಾಕ್ಷಿಯಾಗಿದೆ. …

Read More »

ಸಾಲಗಾರರಿಗೆ ಮತ್ತೆ ಬಿಗ್ ಶಾಕ್: ರೆಪೊ ದರ ಹೆಚ್ಚಳದೊಂದಿಗೆ ಲೋನ್ ದುಬಾರಿ

ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಆರ್‌.ಬಿ.ಐ. ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬುಧವಾರದಿಂದ ಆರ್.ಬಿ.ಐ. ದ್ವೈಮಾಸಿಕ ಆರ್ಥಿಕ ಪರಾಮರ್ಶೆ ಸಭೆ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಸಭೆಯಲ್ಲಿ ರೆಪೊ ದರವನ್ನು ಶೇಕಡ 0.35 ರಷ್ಟು ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ಆಗಸ್ಟ್ 5 ರಂದು ರೆಪೊ ದರ ಹೆಚ್ಚಳದ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಸಾಲ ಮತ್ತೆ ದುಬಾರಿಯಾಗಲಿದೆ. ಎಲ್ಲಾ ಸಾಲಗಳ ಮೇಲಿನ …

Read More »

ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿತ

ಆಸ್ತಿ ವಿಚಾರವಾಗಿ ಮಾತನಾಡುವುದಿದೆ ಬಾ ಎಂದು ಕರೆದು ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆ ಬೆಳಗಾವಿಯ ಅಂಕಲಗಿ ಮದುವಾಲ್‍ನಲ್ಲಿ ನಡೆದಿದೆ. ಅಂಕಲಿಗಿಯ ಮದುವಾಲ್ ಗ್ರಾಮದಲ್ಲಿ ಜಮೀನು ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳಲ್ಲಿ ವಿವಾದ ಉಂಟಾಗಿದೆ. ಈ ವೇಳೆ ಹಿರಿಯರು ಕೂಡಿದ್ದಾರೆ ಬಾ ಎಂದು ಕರೆದು ಸವಿತಾ ಹಾಗೂ ಬಸಣ್ಣಿ ಸುತಗಟ್ಟಿ ಎಂಬ ದಂಪತಿಗಳನ್ನು ಹಿರಿಯರ ಸಮ್ಮುಖದಲ್ಲಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಾಳು ಸವಿತಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ …

Read More »

ಮೈ ಮೇಲೆ ಶಾಲೆಯ ಯೂನಿಫಾರ್ಮ್. ಶಾಲೆಯ ಬ್ಯಾಗ್ ಹಾಕಿಕೊಂಡು ವಿದ್ಯಾರ್ಥಿಗಳ ಬಡಿದಾಟ

ಶಾಲಾ ಕಾಲೇಜಿನ ಮಕ್ಕಳು ಶಾಲೆ ಕಾಲೇಜು ಬಿಟ್ಟ ತಕ್ಷಣ ಟ್ಯೂಶನ್ ಕಂಪ್ಯೂಟರ್ ಕ್ಲಾಸ್ ಎಂದೆಲ್ಲ ಬೇರೆ ಕಡೆ ಹೋಗುತ್ತಾರೆ. ಆದರೆ ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದಿನ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಏನು ಮಾಡಿದ್ದಾರೆ ಎನ್ನುವುದನ್ನು ನೀವೇ ನೋಡಿ. ಮೈ ಮೇಲೆ ಶಾಲೆಯ ಯೂನಿಫಾರ್ಮ್. ಬೆನ್ನ ಮೇಲೆ ಶಾಲೆಯ ಬ್ಯಾಗ್ ಹಾಕಿಕೊಂಡು ಈ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದಾರೆ. ಬಡಿದಾಡಿಕೊಳ್ಳುತ್ತಿದ್ದಾರೆ. ಇನ್ನು ತಾವು ನಿಂತಿರೋದು ಬಸ್ ನಿಲ್ದಾಣದಲ್ಲಿ. ಇದರಿಂದ ಇನ್ನೊಬ್ಬರಿಗೆ ತೊಂದರೆಯಾಗುತ್ತೆ …

Read More »

ಕುಂದಾನಗರಿಯಲ್ಲಿ ಮಳೆಯ ಆರ್ಭಟ

ಕುಂದಾನಗರಿ ಬೆಳಗಾವಿಯಲ್ಲಿ ಇಂದು ಸಾಯಂಕಾಲ ಮಳೆಯ ಆರ್ಭಟ ಜೋರಾಗಿದ್ದು. ಸತತ ಎರಡು ಘಂಟೆಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನ ಹೈರಾಣಾದರು. ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ತೆಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಏಕಾಏಕಿ ಮಳೆಯ ಆರ್ಭಟಕ್ಕೆ ಕುಂದಾನಗರಿ ಜನತೆ ಬೆಚ್ಚಿ ಬಿದ್ದರು. ಸತತ ಎರಡು ಗಂಟೆಗಳಿಂದ ನಿರಂತರ ಮಳೆ ಆದರಿಂದ ಕುಂದಾನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಯ್ತು. ಇನ್ನು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಡೇಬಜಾರ್‍ಗೆ ಹೋಗುವ ರಸ್ತೆ ಮೇಲೆ …

Read More »

ಕುಡಿದ ಅಮಲಿನಲಿ ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಕುಡಿದ ಅಮಲಿನಲ್ಲಿ ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ಪಟ್ಟಣದ ಹಾಲಟ್ಟಿಯಲ್ಲಿ ನಡೆದಿದೆ… ಗೌಸಮೋದಿನ ಮುಸ್ತಫಾ ಜಮಾದಾರ (35) ಆತ್ಮಹತ್ಯೆಯನ್ನು ಮಾಡಿಕೊಂಡ ಯುವಕ.ಕುಡಿದ ಅಮಲಿನಲ್ಲಿ ನಿನ್ನೆ ರಾತ್ರಿ ಮನೆಯಲ್ಲಿ ಜಗಳವಾಡಿ ಮನೆಯಿಂದ ಹೋರಗೆ ಹೋಗಿ,ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಯನ್ನು ‌ಮಾಡಿಕೊಂಡಿದ್ದಾನೆ.ಯುವಕ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಾತ್ರಿಯಿಂದ ಅಗ್ನಿಶಾಮಕದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು.ಇವತ್ತು ಬೆಳಗ್ಗೆಯಿಂದ ಪುರಸಭೆ ಪೌರಕಾರ್ಮಿಕರು ಹಾಗೂ ಅಗ್ನಿಶಾಮಕದಳದಿಂದ …

Read More »

ಹಿಂದೂ, ಮುಸ್ಲೀಂ ಯುವಕರ ಹತ್ಯೆ ಎಂದು ತಾರತಮ್ಯವಿಲ್ಲದೇ ಪರಿಹಾರ ನೀಡಿ – ಮಂತ್ರಾಲಯ ಶ್ರೀ

ರಾಯಚೂರು: ರಾಜ್ಯ ಸರ್ಕಾರದಿಂದ ಹಿಂದೂ ಯುವಕರ ಹತ್ಯೆಗೆ ಮಾತ್ರವೇ ಪರಿಹಾರ ನೀಡಿ, ಮುಸ್ಲೀಂ ಯುವಕರ ಹತ್ಯೆಯಂತಹ ಸಂದರ್ಭದಲ್ಲಿ ಪರಿಹಾರವನ್ನು ವಿತರಿಸುತ್ತಿಲ್ಲ. ಆದ್ರೇ ಈ ತಾರತಮ್ಯ ಸರಿಯಲ್ಲ. ಯಾವುದೇ ತಾರತಮ್ಯ ಮಾಡದೇ ಹತ್ಯೆಯಂತ ಸಂದರ್ಭದಲ್ಲಿ ಪರಿಹಾರ ನೀಡುವಂತೆ ಮಂತ್ರಾಲಯದ ಶ್ರೀಗಳು ಹೇಳಿದ್ದಾರೆ.     ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಪರಿಹಾರ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಪ್ರಾಣ ಕಳೆದುಕೊಂಡವರೆಲ್ಲರೂ ಸಮಾನರು, …

Read More »