Home / ರಾಜ್ಯ (page 911)

ರಾಜ್ಯ

ಬೆಳಗಾವಿ: ಈ 22 ಶಾಲೆಗಳಿಗೆ ಬುಧವಾರವೂ ರಜೆ: B.E.O.ರವಿ ಭಜಂತ್ರಿ 

ಬೆಳಗಾವಿ – ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಶಾಲೆಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಜಾಧವ ನಗರದಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಸಿಕ್ಕದ ಕಾರಣ ಸುತ್ತಲಿನ 22 ಶಾಲೆಗಳಿಗೆ ರಜೆ ನೀಡಲಾಗಿದೆ. ಕಳೆದ ರಾತ್ರಿ ಗಾಲ್ಫ್ ಮೈದ0ಾನದಲ್ಲಿ ಕ್ಯಾಮರಾದಲ್ಲಿ ಸೆೆರೆಸಿಕ್ಕ ಚಿರತೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ಮುಂದುವರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ಮತ್ತು ನಗರ ಬಿಇಒ ರವಿ ಭಜಂತ್ರಿ  ತಿಳಿಸಿದ್ದಾರೆ. …

Read More »

ಹೆಸರಿಗೆ ಮಾತ್ರ ಹಾಲಿನ ವ್ಯಾಪಾರ, ಆದ್ರೆ ಮಾಡೋದು ಬೇರೆನೇ ಕೆಲಸ

ಇವರೆಲ್ಲಾ ಮಾಡುತ್ತಿದ್ದದ್ದು ಹಾಲಿನ ವ್ಯಾಪಾರ (Milk Business). ಆದ್ರೆ ಒಳಗೆ ನಡೀತಾ ಇದ್ದಿದ್ದು ಮಾತ್ರ ಬೇರೆನೇ ಕೆಲಸ. ಹೌದು, ಹುಬ್ಬಳ್ಳಿಯಲ್ಲಿ ನಕಲಿ ನೋಟು (Fake Note) ಚಲಾವಣೆ ಗ್ಯಾಂಗ್​ನ್ನು (Gang) ಪೊಲೀಸರು ಭೇದಿಸಿದ್ದಾರೆ. ಈ ಕೇಸ್​ನಲ್ಲಿ ತಗ್ಲಾಕೊಂಡ ವ್ಯಕ್ತಿಯ ಹಿನ್ನೆಲೆ ಕೇಳಿದ್ರೆ ಇನ್ನೂ ಶಾಕ್ ಆಗ್ತೀರಾ. ಯಾಕೆಂದರೆ ಆತ ಸ್ಥಳೀಯ ಬಿಜೆಪಿ ಮುಖಂಡ (BJP Leader). ಹೊರಗೆ ಈತ ಸೇರಿ ಉಳಿದ ಆರೋಪಿಗಳು (Accused) ನಡೆಸ್ತಿದ್ದದ್ದು ಹಾಲಿನ ವ್ಯಾಪಾರ. ಆದರೆ …

Read More »

ನಂದು ಇನ್ನೊಂದು ವಿಡಿಯೋ ಇದೆ; ಅದ್ಯಾವಾಗ ಬಿಡ್ತಾನೋ ಗೊತ್ತಿಲ್ಲ-ಸೋನು ಗೌಡ

ಟಿಕ್​ ಟಾಕ್​ ಹಾಗೂ ರೀಲ್ಸ್​ ಮೂಲಕ ಫೇಮಸ್​ ಆಗಿರೋ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಈಗ ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ (Bigg Boss House) ಸ್ಪರ್ಧಿಗಳು ತಮ್ಮ ಖಾಸಗಿ ಬದುಕಿನ ಅನೇಕ ವಿವರಗಳನ್ನು ತೆರೆದಿಡುತ್ತಿದ್ದಾರೆ. ಸೋನು ಶ್ರೀನಿವಾಸ್​​ ಗೌಡ ಅವರ ಖಾಸಗಿ ವಿಡಿಯೋ (Sonu Srinivas Gowda Viral Video) ಲೀಕ್​ ಆಗಿತ್ತು ಎಂಬುದು …

Read More »

ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯ

ರಾಯಬಾಗ ತಾಲೂಕಿನ ಸೌಂದತ್ತಿವಾಡಿಯಲ್ಲಿ ಮೊಹರಂ ಹಬ್ಬದ ನಿಮಿತ್ಯ ಕುಂಡಲಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯವಾಗಿದೆ. ನಿರಂತರವಾಗಿ ಬೀಳುತ್ತಿರುವ ಅತಿಯಾದ ಮಳೆಯಿಂದ ಗೋಡೆ ಕುಸಿದು ಬಿದ್ದಿದೆ. ಅನೇಕ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸುವಾಗ ಈ ಘಟನೆ ನಡೆದಿದ್ದು ಮಂಗಲ ಹಿರೇಗೌಡ, ಶ್ರೀದೇವಿ ತಂಗಡೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ರಕ್ತಸ್ರಾವವಾಗಿದೆ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ …

Read More »

ದರೋಡೆ ಮಾಡ್ತಿದ್ದ ಮಂಕಿ ಕ್ಯಾಪ್ ಕಳ್ಳರನ್ನು ಬಂಧಿಸಿದ ಪೊಲೀಸರು

ವಿಜಯಪುರ :ಜಿಲ್ಲೆಯ ಹೆದ್ದಾರಿಗಳಲ್ಲಿ ಮಂಕಿ ಕ್ಯಾಪ್​​ ಧರಿಸಿ ದರೋಡೆ ಮಾಡ್ತಿದ್ದ ಕುಖ್ಯಾತರನ್ನು ಗಾಂಧಿಚೌಕ್​ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ನಗರ ಬಸ್ ನಿಲ್ದಾಣ ಬಳಿಯ ನಯೇರಾ ಪೆಟ್ರೋಲ್ ಪಂಪ್ ಬಳಿ ದರೋಡೆ ಯತ್ನ ನಡೆಯುತ್ತಿರೋ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಬಿರಸೂಲ ಜಿಲಾನಿ ಕೋರವಾರ, ಅವಿನಾಶ ರಮೇಶ ಬಾಗಡೆ, ಅಲ್ತಾಫ್ ಕುತುಬುದ್ದೀನ್ ಐನಾಪುರ, ಮತೀನ ಖಲೀಲ‌ಅಹ್ಮದ್ ಖಾಜಿ, ಸಮೀರ ಅಬ್ದುಲ್ ರಜಾಕ್ ಯರಗಲ್ ಎಂಬುವರನ್ನು ಬಂಧಿಸಲಾಗಿದೆ. ಸರ್ಫರಾಜ್ ಎಂಬಾತ ಪರಾರಿಯಾಗಿದ್ದಾನೆ. …

Read More »

ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.

ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.   ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ …

Read More »

ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?: H.D.K.

ಬೆಂಗಳೂರು : ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ ಜೆಡಿಎಸ್ ಬಗ್ಗೆ ವಿಷಕಾರಿಕೊಂಡಿದ್ದಾರೆ. ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ವಿಕಿಪೀಡಿಯಾ ಪ್ರಕಾರ, ನಿಮ್ಮ ಜನ್ಮ ವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ? ಜೆಡಿಎಸ್ ಸ್ಥಾಪನೆ ಆಗಿದ್ದೇ 1999ರಲ್ಲಿ. ಆಗ ನೀವು ಎಲ್ಲಿದ್ದೀರಿ? ನಿಮಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ನೀವು …

Read More »

ಬಿಜೆಪಿಯವರದ್ದು ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ಸರ್ವನಾಶ್: ಸಿದ್ದರಾಮಯ್ಯ

ಮೈಸೂರು : ‘ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ಸರ್ವನಾಶ್ ಆಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.   ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿ …

Read More »

ಈ ಬಾರಿ ಗಣೇಶೋತ್ಸವಕ್ಕೆ ನಿರ್ಬಂಧಗಳಿಲ್ಲ: ಕಂದಾಯ ಸಚಿವ ಆರ್‌.ಅಶೋಕ

ಬೆಂಗಳೂರು: ಈ ವರ್ಷದ ಗಣೇಶೋತ್ಸವವನ್ನು ಕೋವಿಡ್‌ ಪೂರ್ವದಂತೆ ನಡೆಸಲು ಅನುಮತಿ ನೀಡಲಾಗುವುದು. ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು. ಈ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಲಾಗಿದೆ. ಅವರು ಒಪ್ಪಿಗೆ ನೀಡಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಸಾರ್ವಜನಿಕ ಗಣೇಶೋತ್ಸವಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಸಾರ್ವಜನಿಕರ ಪ್ರಾಣ ಒದಗಿಸುವುದು ಮುಖ್ಯವಾಗಿತ್ತು. ಸರ್ಕಾರದ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದರು. ಈ ಬಾರಿ ಯಾವುದೇ …

Read More »

ಮೂರು ದಿನಗಳಿಂದ ವ್ಯಾಪಕ ಮಳೆ ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಳೆಯ ನಡುವೆಯೂ ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರು ನುಗ್ಗಿದ ಮನೆಗಳಿಗೆ 24 ಗಂಟೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಯಳ್ಳೂರ ರಸ್ತೆಯ ಕೇಶವ ನಗರ, ಭಾರತ ನಗರ, ಅನಗೋಳದ ರಘುನಾಥ ಪೇಟ ಮತ್ತಿತರ ಕಡೆಗಳಲ್ಲಿ ಸಂಚರಿಸಿದ ಅವರು, ಯಾವುದೇ ಕಾರಕ್ಕೂ ಪರಿಹಾರ …

Read More »