Home / ರಾಜ್ಯ (page 902)

ರಾಜ್ಯ

ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು.

ಬಳ್ಳಾರಿ: ಕೈಗಾರಿಕೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೈತರ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿತ್ತು. ಕೆಐಎಡಿಬಿ ಮೂಲಕ ವಶಪಡಿಸಿಕೊಂಡ ಭೂಮಿಯಲ್ಲಿ ಇದುವರೆಗೆ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ ಇತ್ತ ಉದ್ಯೋಗವಿಲ್ಲದೇ ಅತ್ತ ಭೂಮಿಯೂ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಬಳ್ಳಾರಿ ತಾಲೂಕಿನ ಕುಡುತಿನಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳಲ್ಲಿ ಬ್ರಹ್ಮಿಣಿ ಸ್ಟಿಲ್ ಹಾಗೂ ಮಿತ್ತಲ್ ಕಂಪನಿಗಾಗಿ ರೈತರಿಂದ ಸುಮಾರು 10 ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇತ್ತ ರೈತರು ತಮ್ಮ …

Read More »

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ನೇಣಿಗೆ ಶರಣು

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ದೇಗಿನಾಳ ಗ್ರಾಮದಲ್ಲಿ ನಡೆದಿದೆ.   44 ವರ್ಷದ ಸುರೇಶ ಮಾಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.ಅಲ್ಲದೇ, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮನಗೂಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.

Read More »

ದಿವಂಗತ ಸುರೇಶ್ ಅಂಗಡಿ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನೆ ಒಂದು ಹಂತಕ್ಕೆ: ಗೋವಿಂದ ಕಾರಜೋಳ್

ದಿವಂಗತ ಸುರೇಶ್ ಅಂಗಡಿ ರವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನೆ ಈಗ ಒಂದು ಹಂತಕ್ಕೆ ಬಂದು ತಲುಪಿದ್ದು 444 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಒಂದು ವಾರದಲ್ಲಿ ಇದಕ್ಕೆ ಗೆಜೆಟ್ ನೋಟಿಫಿಕೇಶನ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋಚಿಂದ ಕಾರಜೋಳ್ ಹೇಳಿದ್ದಾರೆ. ಹೌದು ಇಂದು ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿಯಲ್ಲಿ ಆಗಬೇಕಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಭೆಯನ್ನು ಆಯೋಜಿಸಲಾಗಿತ್ತು. …

Read More »

ಸರ್ಕಾರದ ಸೌಲಭ್ಯಗಳು ಸಮರ್ಪಕ ಬಳಕೆ ಆಗಲಿ: ಕಡಾಡಿ

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ಜಾರಿಗೆ ತರುವ ಸಾಲಸೌಲಭ್ಯಗಳನ್ನು ಕಲ್ಪಿಸಲು ಬ್ಯಾಂಕುಗಳು ಸಹಕರಿಸಬೇಕು. ವಿನಾಕಾರಣ ನೆಪವೊಡ್ಡಿ ಸೌಲಭ್ಯ ನಿರಾಕರಿಸಬಾರದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಆ.16) ನಡೆದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮಗಳಡಿ ಜಿಲ್ಲೆಗೆ ಒಟ್ಟಾರೆ 408 ಕೋಟಿ ರೂಪಾಯಿ ಅನುದಾನ ಹಾಗೂ ಸಾಲ-ಸೌಲಭ್ಯಗಳನ್ನು …

Read More »

ಬೊಮ್ಮಾಯಿ ಆರ್ ಎಸ್‌ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬಿಜೆಪಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು ಇವರೇ. ಬೊಮ್ಮಾಯಿ ಆರ್ ಎಸ್‌ಎಸ್ ಕೈಗೊಂಬೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಪೋಟೋ ಹಾಕಿದ್ದಾರೆ. ಫೋಟೋ ಹಾಕಲಿ ಬೇಡ ಎನ್ನುವುದಿಲ್ಲ. ಆದರೆ, ಸಾವರ್ಕರ್ ಫೋಟೋ ಹಾಕಿ ಟಿಪ್ಪು ಪೋಟೋ ತೆಗೆದಿದ್ದಾರೆ. ಹೀಗೆ ಮಾಡಿದರೆ ಗಲಭೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು. ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಲೇ …

Read More »

ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ಕಾರಣ ಬಹಿರಂಗ

ಶಿವಮೊಗ್ಗ: ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಮುಬಾರಕ್‌ ಅಲಿಯಾಸ್‌ ಡಿಚ್ಚಿ ಹಲ್ಲೆ ನಡೆಸಿದ್ದಾನೆ. ಸೋಮವಾರ ಸಂಜೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ನಂತರ ಮುಬಾರಕ್‌ ತನಗೆ ಹಲ್ಲೆ ನಡೆಸಿದ್ದಾನೆ ಎಂದು ಸುನೀಲ್ ದೂರು ನೀಡಿದ್ದಾನೆ.   ಈ ಹಲ್ಲೆಗೆ ಕಾರಣ ಎನ್ನಲಾದ ವಿಡಿಯೋ ಲಭ್ಯವಾಗಿದ್ದು, ಸೋಮವಾರ ಭದ್ರಾವತಿಯಲ್ಲಿ ಸುನೀಲ್‌ ಗುಡಿ-ಗುಡಿ ಆಡುತ್ತಿದ್ದಾಗ ಮುಬಾರಕ್‌ ಅದರ ವಿಡಿಯೋ ಮಾಡಿಕೊಂಡಿದ್ದ. ವಿಡಿಯೋ ಮಾಡಿದ್ದಕ್ಕೆ ಮುಬಾರಕ್‌ ಅನ್ನು ಸುನೀಲ್‌ ಪ್ರಶ್ನಿಸಿದ್ದು, ಇಬ್ಬರ ನಡುವೆ ಜಗಳ …

Read More »

ಬೆಳಗಾವಿಯ ಇಬ್ಬರು ಸೇರಿ ರಾಜ್ಯದ 7 ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆ

ನವದೆಹಲಿ: ರಾಜ್ಯದ 7 ಜನ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆ ನೀಡಿ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.   ಸಚಿನ್ ಘೋರ್ಪಡೆ, ವಿಕ್ರಂ ಅಮಟೆ, ಸಂಜೀತ್ ವಿ.ಜೆ., ರಾಮ ಲಕ್ಷ್ಮಣಸಾ ಅರಸಿದ್ದಿ, ಬಾಬಾಸಾಬ ನೇಮಗೌಡ, ಗೋಪಾಲ ಎಂ. ಬ್ಯಾಕೋಡ್ ಹಾಗೂ ಮಹಾನಿಂಗ ನಂದಗಾವಿ ಅವರು ಸರಕಾರದ ಆದೇಶದನ್ವಯ ಐಪಿಎಸ್ ಕರ್ನಾಟಕ ಕೆಡರ್ ಅಧಿಕಾರಿಗಳಾಗಿ ಮೇಲ್ದರ್ಜೆಗೇರಿದವರು.   ಈ ಎಲ್ಲ ಅಧಿಕಾರಿಗಳು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನಾನಾ ಹುದ್ದೆಗಳನ್ನು ಖಾಲಿ …

Read More »

ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಮುಖಂಡ

ಮುಂಬೈ: ಶಿವಸೇನಾ ಮುಖಂಡರೊಬ್ಬರು ಖಾಸಗಿ ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮಹಾರಾಷ್ಟ್ರದ ತಮ್ಮ ಕ್ಷೇತ್ರವಾದ ಹಿಂಗೋಲಿಯಲ್ಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಮಧ್ಯಾಹ್ನದ ಊಟ  ಬಡಿಸಿದ ಕಾರಣಕ್ಕೆ ಶಿವಸೇನೆಯ ಬಂಡಾಯ ಶಾಸಕ ಸಂತೋಷ್ ಬಂಗಾರ್ ಅವರು ಅಡುಗೆ ವ್ಯವಸ್ಥಾಪಕನನ್ನು ನಿಂದಿಸಿ ಅವರಿಗೆ ಎಲ್ಲರ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದರು. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಮನಾರ್ಹವೆಂದರೆ, ಬಂಗಾರ್ ಅವರು ಈ ಘಟನೆಗೆ ಕೆಲವೇ ನಿಮಿಷ ಮೊದಲು  ವಿಧಾನಸಭೆಯಲ್ಲಿ  ಮುಖ್ಯಮಂತ್ರಿ …

Read More »

ಆ.17 ರಂದು ನಾಳೆ ಮಹಾಲಿಂಗಪುರ ಬಂದ್: ಸಾಮೂಹಿಕ ನಾಯಕತ್ವದಡಿ ಹೋರಾಟ

ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದ ಸರ್ಕಾರದ ಕಾರ್ಯವೈಖರಿ ಖಂಡಿಸಿ ಆ.17 ರಂದು ಮಹಾಲಿಂಗಪುರ ಬಂದ್‌ಗೆ ಕರೆ ನೀಡಲಾಗಿದ್ದು, ಸಾಮೂಹಿಕ ನಾಯಕತ್ವದಡಿ ತಾಲ್ಲೂಕು ಕೇಂದ್ರಕ್ಕೆ ಹೋರಾಟ ನಡೆಸಲಾಗುವುದು ಎಂದು ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ತಿಳಿಸಿದರು.   ಹೋರಾಟದ ವೇದಿಕೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.15 ರೊಳಗೆ ಮಹಾಲಿಂಗಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿದ್ದರೆ ಆ.17ರಂದು ಮಹಾಲಿಂಗಪುರ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಈಗಾಗಲೇ ತಿಳಿಸಲಾಗಿತ್ತು. ಇನ್ನುವರೆಗೂ …

Read More »

ಸ್ವಾತಂತ್ರ್ಯ ಹೋರಾಟಕ್ಕಾಗಿ ಬೊಮ್ಮಾಯಿ ಜೈಲುವಾಸ ಅನುಭವಿಸಿದ್ದರಾ?: ಸಿದ್ದರಾಮಯ್ಯ

ಬೆಂಗಳೂರು: ನೆಹರು ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲುವಾಸ ಅನುಭವಿಸಿದ್ದರಾ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.   ಕೆಪಿಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ‌ ನೆಹರು ಅವರ ಕೊಡುಗೆಯಿದೆ. ನೆಹರು ಜೈಲು ವಾಸ ಅನುಭವಿಸಿದ್ದರು. ಈಶ್ವರಪ್ಪ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಬೊಮ್ಮಾಯಿ ಜೈಲುವಾಸ ಅನುಭವಿಸಿದ್ರಾ? ಅವನ್ಯಾವನೋ ರವಿಕುಮಾರ್ ಜೈಲಿಗೆ …

Read More »