Breaking News

ಸ್ವಾತಂತ್ರ್ಯ ಹೋರಾಟಕ್ಕಾಗಿ ಬೊಮ್ಮಾಯಿ ಜೈಲುವಾಸ ಅನುಭವಿಸಿದ್ದರಾ?: ಸಿದ್ದರಾಮಯ್ಯ

Spread the love

ಬೆಂಗಳೂರು: ನೆಹರು ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲುವಾಸ ಅನುಭವಿಸಿದ್ದರಾ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ‌ ನೆಹರು ಅವರ ಕೊಡುಗೆಯಿದೆ. ನೆಹರು ಜೈಲು ವಾಸ ಅನುಭವಿಸಿದ್ದರು. ಈಶ್ವರಪ್ಪ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಬೊಮ್ಮಾಯಿ ಜೈಲುವಾಸ ಅನುಭವಿಸಿದ್ರಾ? ಅವನ್ಯಾವನೋ ರವಿಕುಮಾರ್ ಜೈಲಿಗೆ ಹೋಗಿದ್ನಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರ ಈ ಹೇಳಿಕೆ ನೆಹರು ಅಲ್ಲ ಭಾರತೀಯರಿಗೆ ಮಾಡಿದ ಅವಮಾನ. ಸಾರ್ವಕರ್ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಮುಂದೆ ಹೋರಾಟದಲ್ಲಿ‌ ಭಾಗವಹಿಸಲ್ಲವೆಂದು ಹೇಳಿದ್ದರು. ಇಂತವರಿಗೆ ಬಿಜೆಪಿಯವರು ಮರ್ಯಾದೆ ಕೊಡುತ್ತಾರೆ. ಆಧುನಿಕ ಭಾರತ ಕಟ್ಟಲು ಪ್ರಯತ್ನಿಸಿದವರು ನೆಹರು. ಆದರೆ ನೆಹರು ದೇಶ ಇಬ್ಬಾಗಕ್ಕೆ ಕಾರಣರಾದರು ಎಂಬ ಆರೋಪ ಮಾಡುವ ಬಿಜೆಪಿಯವರಿಗೆ ನೆಹರು ಇತಿಹಾಸ ಗೊತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ