Breaking News
Home / ರಾಜ್ಯ (page 778)

ರಾಜ್ಯ

ಮೋದಿ ರಾಜ್ಯಕ್ಕೆ ಬಂದಷ್ಟು ಜೆಡಿಎಸ್‌ಗೆ ಒಳಿತು: ಇಬ್ರಾಹಿಂ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಬಾರಿ ರಾಜ್ಯಕ್ಕೆ ಬಂದು ಹೋದರೂ ಅದರಿಂದ ಜೆಡಿಎಸ್‌ಗೆ ಒಳ್ಳೆಯದಾಗುತ್ತದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಒಳಗೊಳಗೆ ಕಟ್ಟಿ ಗಟ್ಟಿಗೊಳಿಸಬೇಕಾದ ಬೇಗುದಿಯಿಂದ ಪ್ರಧಾನಿಯವರು ರಾಜ್ಯಕ್ಕೆ ಪದೇಪದೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.   ಕೆಂಪೇಗೌಡರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಪೂರ್ಣ ಬಿಜೆಪಿಮಯವಾಗಿತ್ತು ಎಂದು ದೂರಿದ ಅವರು, ಜೆಡಿಎಸ್‌ನ ಸರ್ವೋಚ್ಚ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ …

Read More »

ಬಿಜೆಪಿ ವಿರುದ್ಧ ಖಾನಾಪುರದಲ್ಲಿ ದಲಿತರ ಪ್ರತಿಭಟನೆ

ಖಾನಾಪೂರದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಸತೀಶ ಜಾರಕಿಹೊಳಿ ಅವರ ವಿರುದ್ಧ ಮಾಡಿದ ಪ್ರತಿಭಟನೆ ಖಂಡಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. ದಿನಾಂಕ ೧೧ ರಂದು ಖಾನಾಪೂರ ತಾಲೂಕಿನ ಬಿಜೆಪಿ ಸಂಘ ಪರಿವಾರದವರು ಎಲ್ಲ ಹಿಂದೂ ಪರ ಸಂಘಟನೆಗಳು ಒಂದಾಗಿ ಖಾನಾಪೂರ ಪಟ್ಟಣದ ಶಿವಸ್ಮಾರಕದ ಎದುರು ಸತೀಶ್ ಅಣ್ಣಾ ಜಾರಕಿಹೊಳಿಯವರ ವಿರುದ್ಧ ಅವರ ಪ್ರತಿಕೃತಿಯನ್ನು ದಹಿಸಿ ಅವರ ಭಾವಚಿತ್ರಕ್ಕೆ ಅವಮಾನ ಮಾಡೋವ ಮೂಲಕ ಇಡೀ ದಲಿತ ಸಮಾಜಕ್ಕೆ ಧಕ್ಕೆ …

Read More »

ರಾಘವೇಂದ್ರ ಹುಣಸೂರು ವಿರುದ್ಧ ಭಟ್ರು ಗರಂ!

ಕನ್ನಡ ಚಲನಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಓರ್ವರಾದ ಯೋಗರಾಜ್ ಭಟ್ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದಂತಹ ಪಕ್ಕಾ ಕ್ಲಾಸ್ ಡೈರೆಕ್ಟರ್. ಚಿತ್ರದ್ದಾಗಲಿ ಅಥವಾ ವೈಯಕ್ತಿಕ ಜೀವನದಲ್ಲಾಗಲಿ ಯೋಗರಾಜ್ ಭಟ್ ವಿವಾದ ಮಾಡಿಕೊಂಡು ಎಡವಿದ ಉದಾಹರಣೆಗಳಿಲ್ಲ. ಪುನೀತ್ ರಾಜ್‌ಕುಮಾರ್, ಸುದೀಪ್ ಹಾಗೂ ಗಣೇಶ್ ರೀತಿಯ ಸ್ಟಾರ್ ನಟರಿಗೆ ಚಿತ್ರ ನಿರ್ದೇಶಿಸಿರುವ ಯೋಗರಾಜ್ ಭಟ್ ನಿರ್ದೇಶನದ ಜತೆಗೆ ಓರ್ವ ಉತ್ತಮ ಚಿತ್ರಸಾಹಿತಿಯೂ ಹೌದು ಹಾಗೂ ಕಿರುತೆರೆ ರಿಯಾಲಿಟಿ ಶೋಗಳ ಜಡ್ಜ್ ಕೂಡ ಹೌದು.   ಜೀ …

Read More »

2000 ರೂ. ಮುಖಬೆಲೆಯ ನೋಟುಗಳು ಕಣ್ಮರೆಯಗುತ್ತಿವೆಯೇ?

ನವದೆಹಲಿ: 2000 ರೂಪಾಯಿ ನೋಟು ಎಲ್ಲಿ ಹೋಯಿತು? ಈ ಪ್ರಶ್ನೆಯು ಇತ್ತೀಚೆಗೆ ಎಲ್ಲರಲ್ಲೂ ಕಾಡುತ್ತಿದೆ. ಅದಕ್ಕೆ RTI ಉತ್ತರ ನೀಡಿದೆ. RTI ಉತ್ತರದ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಹೊಸ 2,000 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಿಲ್ಲ.   ಆರ್‌ಬಿಐ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್‌ನಿಂದ ಪಡೆದ ಆರ್‌ಟಿಐ ಉತ್ತರದ ಪ್ರಕಾರ, 2019-20, 2020-21 ಮತ್ತು …

Read More »

ರಾಹುಲ್ ಗಾಂಧಿ ಸಹವಾಸದಿಂದ ಕೆಲವು ಬಾರಿ ರಾಹುಲ್ ಗಾಂಧಿ ತರಹ ಮಾತನಾಡುತ್ತಾರೆ ಸಿದ್ದರಾಮಯ್ಯ : ಜೋಶಿ

ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರ ನೆರಳಿನಲ್ಲಿದ್ದಾರೆ. ಹೀಗಾಗಿ ಅವರ ಸಹವಾಸದಿಂದ ಕೆಲವು ಬಾರಿ ರಾಹುಲ್ ಗಾಂಧಿ ತರಹ ಮಾತನಾಡುತ್ತಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಶುಕ್ರವಾರ ರಾಜ್ಯಕ್ಕೆ ಬಂದು ಅದ್ಭುತ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಒಂದೇ ಭಾರತಂ ಟ್ರೈನ್ ಗೆ ಚಾಲನೆ, ಕೆಂಪೇಗೌಡ ಮೂರ್ತಿ ಉದ್ಘಾಟನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದ್ದಾರೆ. ಇವೆಲ್ಲವೂ ನಮ್ಮ …

Read More »

ಬೆಳಗಾವಿಯಲ್ಲಿ ಗಾಂಜಾ ಪ್ರಕರಣದಲ್ಲಿ ಸಾವನ್ನಪ್ಪಿದ ಆರೋಪಿ ಸಿಐಡಿ ತನಿಖೆಗೆ ವರ್ಗಾವಣೆ???!!!

ಬೆಳಗಾವಿಯಲ್ಲಿ ಗಾಂಜಾ ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ಪೊಲೀಸ್ ಕಮಿಷ್ನರ್ ಬೋರಲಿಂಗಯ್ಯ ತಿಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರ ವಶದಲ್ಲಿದ್ದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ನಿವಾಸಿ ಬಸನಗೌಡ ಪಾಟೀಲ್(೪೫) ಎಂಬ ಆರೋಪಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿತ್ತು. ಠಾಣೆಗೆ ಕರೆದುಕೊಂಡು ಬರವಾಗ ಆರೋಗ್ಯದಲ್ಲಿ ಅಸ್ವಸ್ಥತೆ ಕಂಡಿದೆ. ತಕ್ಷಣವೇ ದಾರಿ ಮಧ್ಯೆಯೇ ಖಾಸಗಿ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ …

Read More »

ಸರ್ವಧರ್ಮದ ಶಾಂತಿಯ ತೋಟ ಯರನಾಳ ಮಠ – ದುರ್ಯೋಧನ ಐಹೋಳೆ

ಹುಕ್ಕೇರಿ ತಾಲೂಕಿನ ಯರನಾಳದ ಶ್ರೀ ಮಹಾಮಾತಾ ಕಾಳಿಕಾದೇವಿ ಮಠ ಸರ್ವಧರ್ಮದ ಪಕ್ಷಾತೀತ ಆಶ್ರಮವಾಗಿದೆ ಎಂದು ರಾಯಭಾಗ ಶಾಸಕ ಧುಯೋಧನ ಐಹೋಳೆ ಹೇಳಿದರು. ಅವರು ಇಂದು ಯರನಾಳ ಕಾಳಿಕಾಮಾತೆ ರಥೋತ್ಸವದಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಜಾತಿ ಮತ ಭೇಧ ಭಾವ ಇಲ್ಲದ ಏಕೈಕ ಮಠ ಶ್ರೀ ಬ್ರಹ್ಮಾನಂದ ಅಜ್ಜನವರ ಕಾಳಿಕಾ ಆಶ್ರಮ, ಮಠಕ್ಕೆ ಬರುವ ಜನರಿಂದ ಯಾವದೇ ರೀತಿಯ ಕಾಣಿಕೆ ಪಡೆಯುವದಿಲ್ಲಾ ಕೇವಲ ಭಕ್ತಿ ಶ್ರದ್ಧೆ ಇದ್ದರೆ ಸಾಕು ನಾನು ಪ್ರತಿ …

Read More »

ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆ, ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ‌ನಗರದ ಗಣೇಶ ನಗರದ ಬಳಿ ರೇಲ್ವೇ ಹಳಿಯ ಮೇಲೆ ನಡೆದಿದೆ‌.   ಗಡಗಿ ಲೇಔಟ್ ನಿವಾಸಿ ಗುರುರಾಜ ಪುರೋಹಿತ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಮುಂಬೈ ಗದಗ ಮಾರ್ಗ ಮದ್ಯೆ ಸಂಚರಿಸೋ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ರೇಲ್ವೆ ಪೊಲೀಸರ ಭೇಟಿ ನೀಡಿದ್ದಾರೆ‌. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಭಾರತ್ ಜೋಡೋ: ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಆದಿತ್ಯ ಠಾಕ್ರೆ

ಹಿಂಗೋಲಿ: ನೆರೆಯ ನಾಂದೇಡ್ ಜಿಲ್ಲೆಯಿಂದ ಆಗಮಿಸಿದ ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಶುಕ್ರವಾರ ಪಾಲ್ಗೊಂಡಿದ್ದಾರೆ. ಹಿಂಗೋಲಿಯ ಕಳಮ್ನೂರಿನಲ್ಲಿ ಯಾತ್ರೆಗೆ ಸೇರ್ಪಡೆಗೊಂಡ ಆದಿತ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ನಡೆಸಿದರು. ಆದಿತ್ಯ ಠಾಕ್ರೆ ಅವರನ್ನು ಪಕ್ಷದ ಸಹೋದ್ಯೋಗಿಗಳಾದ ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಮತ್ತು ಮಾಜಿ ಶಾಸಕ ಸಚಿನ್ …

Read More »

ಟಗರು ಕಾಳಗದ ಸೋಲಿಲ್ಲದ ಸರದಾರ ಗಾಂಧಿ ನಗರದ ಗೂಳಿ ಇನ್ನಿಲ್ಲ

ಕುಷ್ಟಗಿ:ರಾಜ್ಯದ ಯಾವೂದೇ ಭಾಗದಲ್ಲಿ ರಣರೋಚಕ ಟಗರಿನ ಕಾಳಗ ನಡೆದರೂ ಕುಷ್ಟಗಿಯನ್ನು ಪ್ರತಿನಿಧಿಸಿ ಗೆಲ್ಲುತ್ತಿದ್ದ “ಗಾಂಧಿ ನಗರದ ಗೂಳಿ” ಎಂದೇ ಪ್ರಖ್ಯಾತಿಯ ಟಗರು ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಸಾವನ್ನಪ್ಪಿದೆ.   ಅಕಾಲಿಕವಾಗಿ ಸಾವನ್ನಪ್ಪಿದ ಟಗರು, ಬೆಂಚಮಟ್ಟಿ ಗ್ರಾಮದ ಜಂಬಣ್ಣ ಡೊಳ್ಳೀನ್ ಅವರ ಅಚ್ಚು ಮೆಚ್ಚಿನದಾಗಿತ್ತು. ಪ್ರಥಮ ಸ್ಥಾನ ಗಳಿಸುವ ಮೂಲಕ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಗಳಿಸಿತ್ತು. ಸದಾ ಗೆಲ್ಲುವ ಟಗರಿಗೆ 3 ಲಕ್ಷರೂಗೆ ಕೇಳಿದ್ದರೂ ಜಂಬಣ್ಣ ಡೊಳ್ಳೀನ್ ಕೊಟ್ಟಿರಲಿಲ್ಲ. …

Read More »