Breaking News
Home / ರಾಜ್ಯ (page 1379)

ರಾಜ್ಯ

ಹಾಡಹಗಲೇ ಬೈಕ್ ಗೆ ಅಡ್ಡ ಬಂದ ಚಿರತೆ!

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹಾಡಹಗಲೇ ಚಿರತೆಯೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಗ್ಗೆ ಬೆಟ್ಟಕ್ಕೆ ತೆರಳುತ್ತಿದ್ದ ಬೈಕ್ ಸವಾರರೊಬ್ಬರ ಮುಂಭಾಗವೇ ಚಿರತೆ ಬಂದಿದೆ. ಇದರಿಂದ ಬೈಕ್ ಸವಾರ ಆತಂಕಗೊಂಡಿದ್ದು, ತನ್ನ ಮೊಬೈಲ್ ನಲ್ಲಿ ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.ಕಳೆದ ವರ್ಷ ಕೂಡಾ ಇದೇ ಅವಧಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಿರತೆಯೊಂದು ಗಾಯಗೊಂಡಿತ್ತು.   #MysuruLeopard spotted at #Chamundihill. A bike rider on his way to …

Read More »

ಮಿನಿಸ್ಟರಿಗೆಲ್ಲಾ ಹಣ ಹೋಗಿದೆ: ಐಪಿಎಸ್‌ ಅಧಿಕಾರಿ – ಕಾನ್‌ಸ್ಟೆಬಲ್‌ ಸಂಭಾಷಣೆ

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಪೊಲೀಸರ ಸುಪರ್ದಿಯಲ್ಲಿದ್ದಾಗಲೇ ಆತನ ಮೂಲಕ ಬಿಟ್‌ಕಾಯಿನ್‌ಗಳನ್ನು ರಾಜ್ಯದ ಪ್ರಭಾವಿ ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬ ಸುಳಿವು ನೀಡುವ ದೂರವಾಣಿ ಸಂಭಾಷಣೆಯೊಂದರ ತುಣುಕು ಶುಕ್ರವಾರ ಬಹಿರಂಗಗೊಂಡಿದೆ.   ಐಪಿಎಸ್‌ ಅಧಿಕಾರಿಯೊಬ್ಬರು ಸಿಐಡಿಯ ಸೈಬರ್‌ ಅಪರಾಧ ವಿಭಾಗದ ಪೊಲೀಸ್‌ ಅಧಿಕಾರಿಯೊಬ್ಬರ ಜತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯಲ್ಲಿ ಶ್ರೀಕೃಷ್ಣ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ನಡೆದಿರುವ ಘಟನಾವಳಿಗಳ ಮಾಹಿತಿ ಇದೆ. ಪೊಲೀಸ್ ಅಧಿಕಾರಿಗಳ ಸಂಭಾಷಣೆಯ ಪೂರ್ಣಪಾಟ ಹೀಗಿದೆ… ಸಿಐಡಿ …

Read More »

ಇಂದು ಸಹ ಮಳೆ, ಬೆಂಗಳೂರಿನಲ್ಲಿ ಹೆಚ್ಚಾದ ಚಳಿ

ಬೆಂಗಳೂರಿನ (Bengaluru) ಕೆಲ ಭಾಗಗಳಲ್ಲಿ ಜಿಟಿ ಜಿಟಿ ಮಳೆ(Rainfall)ಯಾಗಲಿದೆ. ಕಳೆದ ಮೂನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನ  ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆ ಜೊತೆಗೆ ಶೀತಗಾಳಿ ಸಹ ಬೀಸುತ್ತಿರುವ ಪರಿಣಾಮ ಚಳಿ ಪ್ರಮಾಣ ಸಹ ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ 19 ಮಿ.ಮೀ.ನಷ್ಟು ಮಳೆಯಾಗಿದೆ. ವಿಮಾನ ನಿಲ್ದಾಣ ಭಾಗದಲ್ಲಿ 10.4 ಮಿ.ಮೀ., ಹೆಚ್ಎಎಲ್ ನಲ್ಲಿ 15.6 ಮಿ.ಮೀ.ನಷ್ಟು ಮಳೆಯಾಗಿದೆ. ಇಂದು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು …

Read More »

ರೈತರು ಬೆಳೆ ಬೆಳೆದ ಜಮೀನಿನ ಮೇಲೆ ಬೆಳೆ ಕಟಾವು ಆಗುವವರೆಗೂ ಕಾಮಗಾರಿ ನಡೆಸಲ್ಲ ಅಂತಾ ಡಿಸಿ ಭರವಸೆ ನೀಡಿದ್ದರೂ ಬೆಳೆಯ ಮೇಲೆ ಜೆಸಿಬಿ

ಬೆಳಗಾವಿ  ಬೆಳಗಾವಿ ತಾಲೂಕಿನ (Belagavi) ಹಲಗಾ ಮತ್ತು ಮಚ್ಛೆ ಗ್ರಾಮದ ಮಧ್ಯೆ 9.5 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ 4 ಎ ಬೈಪಾಸ್ ರಸ್ತೆ ಕಾಮಗಾರಿ (National Highway By Pass Constuction) ರೈತರ ವಿರೋಧದ (Farmers Objection) ‌ನಡುವೆಯೂ ಶುರುವಾಗಿದೆ. ನಿನ್ನೆ ಕಾಮಗಾರಿ ಆರಂಭಗೊಂಡ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಜಮೀನು ಮಾಲೀಕನ ಪುತ್ರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದಾದ ಬಳಿಕ …

Read More »

ದೇವೇಗೌಡರ ಹಾಗೂ ಕುಮಾರಸ್ವಾಮಿ ಹೆಸರು ಹೇಳಿದಂತೆ ಓಡಿ ಬಂದು ಒತ್ತೋರು ಯಾರೂ ಇಲ್ಲ. :

ಹಾಸನ: ಜನವರಿಯಲ್ಲಿ ತೆರವಾಗುತ್ತಿರುವ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ (Council Election) ಘೋಷಣೆ ಹಿನ್ನೆಲೆ ಜಿಲ್ಲೆಯ ಸಂಸದ ಪ್ರಜ್ವಲ್​​ ರೇವಣ್ಣ(Prajwal Revanna) ಅವರ ಅಧಿಕೃತ ನಿವಾಸದಲ್ಲಿ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆ (JDS Meeting) ನಡೆಸಿದರು. ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(H. D. Deve Gowda), ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರುಗಳಾದ ಎಚ್.ಡಿ.ರೇವಣ್ಣ, ಕೆ.ಎಸ್.ಲಿಂಗೇಶ್, ಮಾಜಿಶಾಸಕರು, ಜಿ.ಪಂ. ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಟಿಕೆಟ್​​ ಗಾಗಿ …

Read More »

ಏಕದಿನ ನಾಯಕತ್ವಕ್ಕೂ ವಿದಾಯ ಹೇಳಲಿದ್ದಾರೆ ಕೊಹ್ಲಿ; ರವಿಶಾಸ್ತ್ರಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆದಿದ್ದು, ಇದೀಗ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಇನ್ನೂ ODI ಮತ್ತು ಟೆಸ್ಟ್ ತಂಡಗಳ ನಾಯಕರಾಗಿದ್ದಾರೆ, ಆದರೆ ಇತರ ಎರಡೂ ಸ್ವರೂಪಗಳಲ್ಲಿ ಅವರ ನಾಯಕತ್ವದ ಭವಿಷ್ಯವು ಪ್ರಶ್ನೆಯಾಗಿಯೇ ಉಳಿದಿದೆ. ಕೊಹ್ಲಿಯೊಂದಿಗೆ ಸತತ 4 ವರ್ಷಗಳಿಂದ ಟೀಂ ಇಂಡಿಯಾಗಾಗಿ ಕೆಲಸ ಮಾಡಿದ್ದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಮುಂದಿನ ದಿನಗಳಲ್ಲಿ ಭಾರತದ ಹಿರಿಯ ಬ್ಯಾಟ್ಸ್‌ಮನ್ ಇತರ …

Read More »

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿ: ಇಂದು (ನವೆಂಬರ್ 13, ಶನಿವಾರ) ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸತತ ಒಂಬತ್ತನೇ ದಿನವೂ ಇಂಧನ ದರ (Fuel Price) ಸ್ಥಿರವಾಗಿದೆ. ನವೆಂಬರ್ 3ನೇ ತಾರೀಕಿನಂದು ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಮನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಅನೇಕ ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿತ್ತು. ಆ ಬಳಿಕ ಹಲವೆಡೆ ಇಂಧನ ದರದಲ್ಲಿ ಕೊಂಚ ಇಳಿಕೆ ಆಗಿತ್ತು. ನಿರಂತರ ಏರಿಕೆ ಕಾಣುತ್ತಿದ್ದ ಪೆಟ್ರೋಲ್ (Petrol …

Read More »

ಜಗದೀಶ್ ಶೆಟ್ಟರ್ ದಿಢೀರ್ ಆಗಿ ದೆಹಲಿಗೆ ಪ್ರಯಾಣ ಶೆಟ್ಟರ್ ದೆಹಲಿ ಪ್ರಯಾಣ ಕುತೂಹಲಕ್ಕೆ ಕಾರಣ

ಬೆಂಗಳೂರು: ಮಾಜಿ ಸಿಎಂ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ದಿಢೀರ್ ಆಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ನಡುವೆ ಶೆಟ್ಟರ್ ದೆಹಲಿ ಪ್ರಯಾಣ ಕುತೂಹಲಕ್ಕೆ ಕಾರಣವಾಗಿದೆ. ಏಕಾಏಕಿ ಹೈಕಮಾಂಡ್ ಬುಲಾವ್ ನೀಡಿರುವ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಕುರಿತು ತೀವ್ರ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಹೈಕಮಾಂಡ್ ಶೆಟ್ಟರ್ ಗೆ ಬುಲಾವ್ ನೀಡಿದೆ ಎನ್ನಲಾಗುತ್ತಿದೆ. ಅಲ್ಲದೇ …

Read More »

ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ ಕಾರ ಕಳ್ಳತನ ಮಾಡಿದ ಬಾಲಕನನ್ನು ಪೊಲೀಸರು ಬಂಧಿಸಿ, ಕಾರ ವಶಕ್ಕೆ

ಬೆಳಗಾವಿ ನೆಹರು ನಗರದಲ್ಲಿರುವ ಡಿ-ಮಾರ್ಟ್ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ ಕಾರ ಕಳ್ಳತನ ಮಾಡಿದ ಬಾಲಕನನ್ನು ಪೊಲೀಸರು ಬಂಧಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಎಪಿಎಂಸಿ ಪೊಲೀಸ್ ಇನಸ್ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಬಾಲಕನನ್ನು ಕೇವಲ 8 ದಿನಗಳಲ್ಲಿ ಪತ್ತೆ ಮಾಡಿ ಆತನ ವಶದಲ್ಲಿದ್ದ ಸುಮಾರು 50,000  ರೂ. ಕಿಮ್ಮತ್ತಿನ ಒಂದು ಮಾರುತಿ 800 ಕಾರ್ ವಶಪಡಿಸಿಕೊಳ್ಳಲಾಗಿದೆ.   ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರ್ ಪಡಿಸಿದ್ದು, …

Read More »

ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ-ಶಾಸಕ ಬಾಲಚಂದ್ರ ಜಾರಕಿಹೊಳಿ

M.L.C. ಚುನಾವಣೆ ಬಾಲಚಂದ್ರ ಜಾರಕಿಹೊಳಿ EXCLUSIVE ಹೇಳಿಕೆ. ಗೋಕಾಕ: ಡಿಸೆಂಬರ್ 10 ರಂದು ಬೆಳಗಾವಿ ಜಿಲ್ಲೆಯ 2 ಸ್ಥಾನಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಜೊತೆಗೆ ನಮ್ಮ ಸಂಘಟನೆಗೆ ಸೇರಿರುವ ಅಭ್ಯರ್ಥಿಯನ್ನು ಬೆಂಬಲಿಸಿ ಅವರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಕೆಎಮ್‍ಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು. ಶುಕ್ರವಾರ ಸಂಜೆ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಅರಭಾವಿ ಮತಕ್ಷೇತ್ರದ …

Read More »