Breaking News
Home / ರಾಜ್ಯ (page 1400)

ರಾಜ್ಯ

ಡೆತ್ ಸ್ಪಾಟ್’ ಕಳಂಕ ತಪ್ಪಿಸಲು ‘ಕೊಪ್ಪಳ ಡಿಸಿ’ ಮಾಡಿದ್ದೇನು ಗೊತ್ತಾ.?

ಕೊಪ್ಪಳ: ಸದಾ ಕ್ರಿಯಾಶೀಲರಾಗಿ, ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಆಡಳಿತಾಧಿಕಾರಿಯಾಗಿಯೂ ಕೆಲಸ ನಿರ್ವಹಿಸುತ್ತಿರುವಂತ ಕೊಪ್ಪಳ ಜಿಲ್ಲಾಧಿಕಾರಿ ಕಿಶೋರ್ ಸುರಾಳ್ಕರ್, ಇಂದು ಹೊಸ ಸಾಹಸ ಮೆರೆದರು. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಕರ್ಷಿಸೋ ನಿಟ್ಟಿನಲ್ಲಿ, ಸಣಾಪುರ ಜಲಾಶಯದಲ್ಲಿನ ಡೆತ್ ಸ್ಪಾಟ್ ಕಳಂಕ ತಪ್ಪಿಸೋ ಸಲುವಾಗಿ ಮಾಡಿದ ಕಾರ್ಯ ಮಾತ್ರ, ವಿಶೇಷವಾಗಿತ್ತು.   ಸದಾ ಕ್ರೀಯಾಶೀಲವಾಗಿ, ಜಿಲ್ಲಾಧಿಕಾರಿಯಲ್ಲದೇ, ಜಿಲ್ಲೆಯ ಅಭಿವೃದ್ಧಿಗಾಗಿ, ಜನರ ಸಮಸ್ಯೆ ಪರಿಹಾರಕ್ಕಾಗಿ ಕೆಲಸಕೂ ಸೈ ಎನಿಸಿಕೊಂಡವರು ವಿಕಾಸ್ ಕಿಶೋರ್ ಸುರಾಳ್ಕರ್ ( DC Vikash …

Read More »

ಪಟಾಕಿ ಮಾರಾಟಕ್ಕೆ ಕೆಲವೇ ದಿನಗಳಷ್ಟೇ ಅವಕಾಶ

ಪಟಾಕಿ ವ್ಯಾಪಾರ ಮಂಗಳವಾರದಿಂದ ಗರಿಗೆದರಿದೆ. ಆದರೆ, ಪಟಾಕಿ ಮಾರಾಟಕ್ಕೆ ಕೆಲವೇ ದಿನಗಳಷ್ಟೇ ಅವಕಾಶ ನೀಡಿರುವುದರಿಂದ ಪಟಾಕಿ ವ್ಯಾಪಾರಿಗಳು ತಳಮಳ ಅನುಭವಿಸುತ್ತಿದ್ದಾರೆ. ಕಳೆದ ದೀಪಾವಳಿ ಸಮಯದಲ್ಲಿ ಕೋವಿಡ್‌ ನಿರ್ಬಂಧವಿತ್ತು. ಪಟಾಕಿ ಮಾರಾಟದ ಮೇಲೂ ಸರ್ಕಾರಗಳು ನಿರ್ಬಂಧ ವಿಧಿಸಿ, ‘ಹಸಿರು ಪಟಾಕಿ’ಗೆ ಮಾತ್ರ ಅನುಮತಿ ನೀಡಿದ್ದರಿಂದ ಮಾರಾಟಗಾರರು ಸಂಕಷ್ಟ ಅನುಭವಿಸಿದ್ದರು. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈ ಬಾರಿಯೂ ‘ಹಸಿರು ಪಟಾಕಿ’ಗಳನ್ನು ಬಿಟ್ಟು ಉಳಿದ ಯಾವುದೇ ಇತರ ಅಪಾಯಕಾರಿ ಹಾಗೂ ಮಾಲಿನ್ಯ ಉಂಟು ಮಾಡುವ …

Read More »

ಕಾಂಗ್ರೆಸ್ ಪಕ್ಷ ಹಾನಗಲ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಸಿಂದಗಿಯಲ್ಲಿ ಸೋತು ಗೆದ್ದಿದೆ

ಮೈಸೂರು: ಕಾಂಗ್ರೆಸ್ ಪಕ್ಷ ಹಾನಗಲ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಸಿಂದಗಿಯಲ್ಲಿ ಸೋತು ಗೆದ್ದಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ‌. ಸಿಂದಗಿ, ಹಾನಗಲ್ ಎರಡೂ ಕ್ಷೇತ್ರಗಳಲ್ಲೂ ಗೆಲ್ಲುವ ನಿರೀಕ್ಷೆ ಇತ್ತು,  ಆದರೂ ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸಿಂದಗಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಬಂದಿತ್ತು, ಅಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿತ್ತು ಆದರೆ ಈ ಬಾರಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನಕ್ಕೆ ಬಂದಿರುವುದು …

Read More »

ಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಸುಮಾರು 5.5 ಕಿಲೋಮೀಟರ್ ರಸ್ತೆ ಕಾಮಗಾರಿ ಕಳಪೆ ಮಟ್ಟದ್ದಾಗಿದೆ:ಮುರುಗೋಡ

ಸವದತ್ತಿ: ತಾಲೂಕು ಮುರುಗೋಡ ವರದಿ, ಕಳಪೆ ಕಾಮಗಾರಿ ರಸ್ತೆ ಸರಿಪಡಿಸಲು ಗ್ರಾಮಸ್ಥರ ವೃತ್ತಾಂತ ಮುರುಗೋಡ ದಿಂದ ಆರೋಪಕ್ಕೆ ತೆರಳಲು ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಸುಮಾರು 5.5 ಕಿಲೋಮೀಟರ್ ರಸ್ತೆ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ ವಾಯುವಿಹಾರಕ್ಕೆ ಹಾಗೂ ವಾಹನ ಚಾಲಕರಿಗೆ ತೀವ್ರ ತೊಂದರೆಯಾಗಿದೆ ಸರಕಾರ ಗ್ರಾಮೀಣ ಜನತೆಗೆ ಉಪಯೋಗವಾಗಲೆಂದು ನಿರ್ಮಿಸಿದ ರಸ್ತೆ ಕಾಮಗಾರಿ ಹೀಗೆ ಹದಗೆಟ್ಟಿದ್ದರಿಂದ ಜನರ ತೊಂದರೆ ಅನುಭವಿಸುತ್ತಿದ್ದಾರೆ ವಾಹನ ಚಾಲಕರು ವಾಹನ ನಿಯಂತ್ರಿಸಲಾರದೆ ಬಿದ್ದಿದ್ದಾರೆ …

Read More »

ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಬೆಳಗಾವಿ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ ೩೧೧ ಶಾಲೆಗಳಿಗೆ ಡೆಸ್ಕ್ -ಬೆಂಚ್

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ವತಿಯಿಂದ ಬೆಳಗಾವಿ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ ೩೧೧ ಶಾಲೆಗಳಿಗೆ ಡೆಸ್ಕ್ -ಬೆಂಚ್ ಒದಗಿಸಲಾಗುತ್ತಿದ್ದು, ಸಾಗಾಟವಾಹನಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್‌ ಧರ್ಮಸ್ಥಳದಲ್ಲಿ ಮಂಗಳವಾರ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾತನಾಡಿರುವ ಅವರು ವೀರೇಂದ್ರ ಹೆಗ್ಗಡೆಯವರು ಸಾಮಾಜಿಕ ಕಳಕಳಿಯಿಂದ ಸರಕಾರದ ಜೊತೆ ಕೈ ಜೋಡಿಸಿ ಅನೇಕ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತಾರೆ. ಸಮಾಜದ …

Read More »

4.5 ಕೊಟಿ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

– ಬೆಳಗಾವಿ: ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಯಾರು ಏನೇ ಅಪಪ್ರಚಾರ ಮಾಡಿದರೂ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಅಭಿವೃದ್ಧಿಗೆ ಕ್ಷೇತ್ರದ ಜನರೇ ಸಾಕ್ಷಿಯಾಗಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.  ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಅಪಪ್ರಚಾರ ಮಾಡುವವರಿಗೆಲ್ಲ ನಾನು ಉತ್ತರಿಸಬೇಕಾಗಿಲ್ಲ. ಕ್ಷೇತ್ರದ ಜನರಿಗೆ ನಾನು ಉತ್ತರಿಸುತ್ತೇನೆ, ಅವರಿಗೆ …

Read More »

ಮಿಲಿಟರಿ ಆಸ್ಪತ್ರೆ ಬಳಿ ಸರಣಿ ಸ್ಫೋಟ ಸಂಭವಿಸಿದ್ದು, 19 ಜನರು ಮೃತ

ಕಾಬೂಲ್: ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮಿಲಿಟರಿ ಆಸ್ಪತ್ರೆ ಬಳಿ ಸರಣಿ ಸ್ಫೋಟ ಸಂಭವಿಸಿದ್ದು, 19 ಜನರು ಮೃತಪಟ್ಟಿದ್ದು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟದ ಬೆನ್ನಲ್ಲೇ ಗುಂಡಿನ ದಾಳಿ ಕೂಡ ನಡೆದಿದೆ ಎಂದು ತಾಲಿಬಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪ್ಘಾನಿಸ್ತಾನದ ಅತಿದೊಡ್ಡ ಆಸ್ಪತ್ರೆ ಇದಾಗಿದ್ದು, 400 ಬೆಡ್ ಗಳ ವ್ಯವಸ್ಥೆಯಿರುವ ಸರ್ದಾರ್ ಮೊಹಮ್ಮದ್ ದೌದ್ ಖಾನ್ ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಭೀಕರತೆಗೆ …

Read More »

ಅವರು ದುಡ್ಡ ಕೊಟ್ಟ ಗೆದ್ದರ ನಾವು ಜನರ ವಿಶ್ವಾಸ ದಿಂದ ಗೆದ್ದೇವು: ಸತೀಶ್ ಜಾರಕಿಹೊಳಿ

ಮುಂದಿನ ಚುನಾವಣೆಗೆ ಇದು ದಿಕ್ಸೂಚಿ ಎಂದು ಹೇಳಿದ್ದೇವು. ಹೀಗಾಗಿ ಕರ್ನಾಟಕದ ಜನ ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆ. ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಲು ಕಾತುರದಿಂದ ಕಾಯುತ್ತಿದ್ದಾರೆ ಎಂಬುದಕ್ಕೆ ಹಾನಗಲ್ ಚುನಾವಣೆ ದಿಕ್ಸೂಚಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶದ ಬಗ್ಗೆ ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಸಿಂದಗಿಯಲ್ಲಿ ಯಾವ ಕಾರಣದಿಂದ ಸೋತಿದ್ದೇವೆ ಎಂಬುದು ಗೊತ್ತಿಲ್ಲ. ಆದರೆ ಹಾನಗಲ್‍ನಲ್ಲಿ …

Read More »

JDS ಪಕ್ಷವನ್ನು ಅಲ್ಪಸಂಖ್ಯಾತರರು ನಂಬುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ: ಜಮೀರ್

ಜೆಡಿಎಸ್ ಪಕ್ಷವನ್ನು ಅಲ್ಪಸಂಖ್ಯಾತರರು ನಂಬುವುದಿಲ್ಲ ಎಂಬುದಕ್ಕೆ ಉಪ ಚುನಾವಣೆ ಫಲಿತಾಂಶ ಸಾಕ್ಷಿ. ಎರಡೂ ಕಡೆ ಠೇವಣಿ ಕಳೆದುಕೊಂಡಿದ್ದಾರೆ. ಹಾನಗಲ್ ನಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಕಡಿಮೆ ಮತ ಜೆಡಿಎಸ್ ಗೆ ಬಂದಿದೆ.   ಉಪ ಚುನಾವಣೆ ಫಲಿತಾಂಶದ ಕುರಿತಾಗಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ ನಡೆಸಿತ್ತು. ಸಿದ್ದರಾಮಯ್ಯ, ಡಿ. ಕೆ.ಶಿವಕುಮಾರ್ ಸೇರಿ ಎಲ್ಲ ನಾಯಕರೂ ಶ್ರಮ ಹಾಕಿದರು ಎಂದರು. ಸಿಂದಗಿಯಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಗಿಂತ 40 ಸಾವಿರ …

Read More »

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗದೆ ಸಿಂದಗಿಯಲ್ಲಿ ಸೋಲು: ಸಿದ್ದರಾಮಯ್ಯ

ಬೆಂಗಳೂರು: ಸಿಂದಗಿಯಲ್ಲಿ ನಮ್ಮ‌ನಿರೀಕ್ಷೆ ಹುಸಿಯಾಗಿದೆ. ಅಲ್ಲಿ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಿದ್ದೆವು. ಆದರೆ ದೊಡ್ಡ ಅಂತರದಲ್ಲಿ‌ಸೋತಿದ್ದೇವೆ. ಆದರೆ ಕಳೆದ ಬಾರಿ ನಾವು ‌ಮೂರನೇ ಸ್ಥಾನದಲ್ಲಿದ್ದೆವು, ಈಗ ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಸೋಲನ್ನು ಒಪ್ಪಿಕೊಳ್ಳಬೇಕು. ನಮ್ಮ ಅಭ್ಯರ್ಥಿ ಅಶೋಕ್ ಮನಗೂಳಿ ಜೆಡಿಎಸ್ ನಿಂದ ಬಂದವರು. ಅವರಿಗೆ ನಾವು ಟಿಕೆಟ್ ಕೊಟ್ಟಿದ್ದೆವು. ಆದರೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಹೊಂದಾಣಿಕೆಯಾಗಿಲ್ಲ, ಅವರ ಜೊತೆ ಬಂದ ಜೆಡಿಎಸ್ ಕಾರ್ಯಕರ್ತರ ಜೊತೆ ಹೊಂದಾಣಿಕೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ …

Read More »