Home / ರಾಜ್ಯ (page 1372)

ರಾಜ್ಯ

ಪ್ರವಚನ ನೀಡುತ್ತಲೇ ಪರಮಾತ್ಮನ ಪಾದ ಸೇರಿದ ಸ್ವಾಮೀಜಿ

ಗೋಕಾಕ : ಪ್ರವಚನ ಮಾಡುತ್ತಲೇ ಓರ್ವ ಸ್ವಾಮೀಜಿ, ಪರಮಾತ್ಮನ ಪಾದ ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ತೀವೃ ಹೃದಯಾಘಾತದಿಂದ ಸ್ವಾಮೀಜಿಯವರು ಲಿಂಗೈಕ್ಯರಾಗಿರುವ ಬಗ್ಗೆ ವರದಿಯಾಗಿದ್ದು, ಹೃದಯಾಘಾತದಿಂದ ಲಿಂಗೈಕ್ಯರಾಗಿರುವ ಸ್ವಾಮಿಜಿಯವರನ್ನು ಬಸವಯೋಗ ಮಂಟಪ ಟ್ರಸ್ಟ್ ಸಂಗನಬಸವ ಮಹಾಸ್ವಾಮೀಜಿ (53) ಎಂದು ಹೇಳಲಾಗುತ್ತಿದೆ. ಈ ಘಟನೆ ನವೆಂಬರ್ 6ನೇ ತಾರೀಕೂ ನಡೆದಿದ್ದರೂ ಸಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ವಾಮಿಜಿ ನವೆಂಬರ್ …

Read More »

ಬೆಳಗಾವಿಯ ನೂತನ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಅವರು ಮಂಗಳವಾರ (ನ.16) ಅಧಿಕಾರ ಸ್ವೀಕರಿಸಿದರು

ಬೆಳಗಾವಿ: ಬೆಳಗಾವಿಯ ನೂತನ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಅವರು ಮಂಗಳವಾರ (ನ.16) ಅಧಿಕಾರ ಸ್ವೀಕರಿಸಿದರು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವರ್ಗಾವಣೆಗೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ನೂತನ ಜಿಲ್ಲಾಧಿಕಾರಿಗಳು, ಪರಿಷತ್ ಚುನಾವಣೆ ಸಿದ್ಧತೆ ಹಾಗೂ ನಾಮಪತ್ರ ಸ್ವೀಕಾರ ಪ್ರಕ್ರಿಯೆ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಮತ್ತಿತರರು ಉಪಸ್ಥಿತರಿದ್ದರು. ಕಲಬುರ್ಗಿಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿದ್ದ …

Read More »

ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಪಾದಚಾರಿಗೆ ಚಿಗರಿ ಬಸ್ ಡಿಕ್ಕಿ: ತೀವ್ರವಾಗಿ ಗಾಯಗೊಂಡ ಪಾದಚಾರಿ

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಚಿಗರಿ ಬಸವೊಂದು ಡಿಕ್ಕಿ ಹೊಡೆದು ಪಾದಚಾರಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡದ ಕೋರ್ಟ್ ವೃತದ ಬಳಿ ನಡೆದಿದೆ. ಬಾಗಲಕೋಟೆ ಮೂಲದ ಮಲ್ಲಣ್ಣ ಮೇಟಿ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೂ ಪದಾಚಾರಿ ಮಲ್ಲಣ್ಣ ಧಾರವಾಡ ಕೋರ್ಟ್ ವೃತದ ಬಳಿಯ ಸಾರ್ವಜನಿಕ ಸಂಚಾರ ನಡೆಸುವ ರಸ್ತೆ ಕ್ರಾಸ್ ಮಾಡಿದ್ದಾರೆ. ಬಳಿಕ ಮುಂದೆ ಇದ್ದ ಬಿಆರ್‌ಟಿಎಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಲ್ಲಣ್ಣನಿಗೆ ಹಿಂಬದಿಯಿಂದ ಬಂದ್ ಚಿಗರಿ ಬಸ್ ಡಿಕ್ಕಿ …

Read More »

ಬೆಳಗಾವಿಯಲ್ಲಿ ಕಬ್ಬಿನ ಟ್ರ್ಯಾಕ್ಟರ್ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಆಜಂ ನಗರದ ಎಪಿಎಂಸಿ ರೋಡ್ ಕಾರ್ನರನಲ್ಲಿ ಬೆಳಿಗ್ಗೆ 9.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಿದ್ದಿದ್ದ ಕಬ್ಬನ್ನು ಬ್ಯಾರೆ ಟ್ರಾಲಿಗೆ ಹಾಕಲಾಗುತ್ತಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Read More »

ಗಾಂಧೀಜಿಯವರ ಬೃಹತ್ ಗಾತ್ರದ ಕಂಚಿನ ಪ್ರತಿಮೆಧ್ವಂಸ

ಸಿಡ್ನಿ, ನವೆಂಬರ್ 16: ಭಾರತ ಸರ್ಕಾರವು ಆಸ್ಟ್ರೇಲಿಯಾಕ್ಕೆ ಉಡುಗೊರೆಯಾಗಿ ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬೃಹತ್ ಗಾತ್ರದ ಕಂಚಿನ ಪ್ರತಿಮೆಯನ್ನು ಮೆಲ್ಬೋರ್ನ್​ ನಗರದಲ್ಲಿ ಧ್ವಂಸಗೊಳಿಸಲಾಗಿದೆ. ಈ ಘಟನೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬೇಸರ ವ್ಯಕ್ತಪಡಿಸಿದ್ದು, ಇದು ತೀರಾ ‘ಅವಮಾನಕರ’ ಎಂದು ಖಂಡಿಸಿದ್ದಾರೆ. ಇದರಿಂದ ಭಾರತ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಬೇಸರ ಮೂಡಿಸಿದೆ. ಭಾರತದ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರು ಭಾರತದ ಕಾನ್ಸುಲ್ ಜನರಲ್ ರಾಜ್‌ಕುಮಾರ್ …

Read More »

ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಪಾತಕಿ ಕಾಲಿಗೆ ಗುಂಡಿನ ದಾಳಿ

ಬೆಂಗಳೂರು, ನ. 16: ರಾಜಧಾನಿಯಲ್ಲಿ ಪಾತಕಿಗಳ ಸದ್ದು ಅಡಗಿಸಲು ಬೆಂಗಳೂರು ಪೊಲೀಸರ ಬುಲೆಟ್ ಸದ್ದು ಮಾಡಿವೆ. ಗಾರ್ಮೆಂಟ್ ಉದ್ಯಮಿಯನ್ನು ಕೊಲೆ ಮಾಡಿದ್ದ ಪ್ರಮುಖ ಆರೋಪಿಯ ಕಾಲಿಗೆ ಗುಂಡು ಹೊಡೆದು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ರಘು ಪೊಲೀಸರಿಂದ ಗುಂಡೇಟು ತಿಂದ ಆರೋಪಿ. ರಾಮಮೂರ್ತಿನಗರದ ಹೆಣ್ಣೂರು ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಗಾಯಾಳು ರಘುನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಏನಿದು ಘಟನೆ: ಕಳೆದ ನ. 14 ರಂದು ಗಾರ್ಮೆಂಟ್ಸ್ …

Read More »

ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ: ಕಾಲೇಜುಗಳಲ್ಲೂ ನಯಾಪೈಸೆ ಕಟ್ಟುವಂತಿಲ್ಲ

ಬೆಂಗಳೂರು, ನವೆಂಬರ್ 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2021ನೇ ಸಾಲಿನ ಎಂಜಿನಿಯರಿಂಗ್/ ಆರ್ಕಿಟೆಕ್ಚರ್ ಕೋರ್ಸ್‌ ಶುಲ್ಕ ಪ್ರಕಟಿಸಿದೆ. ಕಳೆದ ವರ್ಷಕ್ಕಿಂತ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಸಿಇಟಿ ಮೂಲಕ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಪಡೆದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿಯೇ ಶುಲ್ಕ ಪಾವತಿಸಿ ಕಾಲೇಜುಗಳಿಗೆ ದಾಖಲಾದ ಬಳಿಕ, ಕಾಲೇಜುಗಳು ಮತ್ತೆ ಮನಬಂದಂತೆ ಶುಲ್ಕ ವಿಧಿಸುತ್ತಿದ್ದವು. ಈ ಬಾರಿ ಅದಕ್ಕೆ ಕಡಿವಾಣ ಹಾಕಲಾಗಿದೆ. ಕಾಲೇಜುಗಳು ನಯಾಪೈಸೆ ಶುಲ್ಕ ವಿದ್ಯಾರ್ಥಿಗಳನ್ನು ಕೇಳಬಾರದು ಎಂದು ಸೂಚನೆ …

Read More »

ನರೇಗಾ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತ್ರಿ(ನರೇಗಾ) ಯೋಜನೆ ಕೂಲಿ ಹಣವನ್ನು ಬ್ಯಾಂಕ್ ಗಳು ಸಾಲದ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯದಿಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.   ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣವನ್ನು ಬ್ಯಾಂಕ್ ಗಳು ಕೂಲಿ ಕಾರ್ಮಿಕರ ಸಾಲ ಬಾಕಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹೇಮನಗೌಡ …

Read More »

Boycott ಹಂಸಲೇಖ: ಸರಿಗಮಪ ಕಾರ್ಯಕ್ರಮದ ಕಥೆಯೇನು?

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ನಾದ ಬ್ರಹ್ಮ ಹಂಸಲೇಖ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಪೇಜಾವರ ಶ್ರೀಗಳ ಬಗ್ಗೆ ಮಾತಾಡಿದ್ದ ಸಂಗೀತ ನಿರ್ದೇಶಕ, ದಲಿತರು, ಅಸ್ಪೃಶ್ಯತೆ ಹಾಗೂ ಸಮಾನತೆ ಕುರಿತು ಮಾತಾಡಿದ್ದರು. ಈ ವೇಳೆ ಪೇಜಾವರ ಶ್ರೀಗಳ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಹಂಸಲೇಖ ಆಡಿದ ಆ ಮಾತುಗಳೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. “ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ …

Read More »

ಕಲ್ಯಾಣ ‌ಕರ್ನಾಟಕ ಸಾರಿಗೆ ಟಿಕೆಟ್’ ಯಡವಟ್ಟು, ಸೋಷಿಯಲ್ ಮೀಡಿಯಾದಲ್ಲಿ ವೈರಲ್.!

ಬೆಂಗಳೂರು: ಕಲ್ಯಾಣ ‌ಕರ್ನಾಟಕ ಸಾರಿಗೆ ನಿಗಮ( KKRTC ), ತನ್ನ ಟಿಕೆಟ್ ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ, ನಾಡಿನ ಸಾಂಸ್ಕೃತಿಕ ಹಿರಿಮೆ, ಗರಿಮೆ, ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವಂತ ಬರಹಗಳನ್ನು ನಮೂದಿಸುತ್ತಿತ್ತು. ಟಿಕೆಟ್ ಪಡೆದಂತ ಪ್ರಯಾಣಿಕ ಅದರ ಮೇಲಿದ್ದಂತ ಬರಹವನ್ನು ಓದುವ ಮೂಲಕ ಜಾಗೃತನಾಗುತ್ತಿದ್ದನು. ಇದೀಗ ಪದ್ಮಶ್ರೀ ಪುರಸ್ಕೃತ ( padma shri ) ಮಂಜಮ್ಮ ಜೋಗತಿಯ ( manjamma jogati ) ಬಗ್ಗೆ ಬರಹವಿದ್ದು, ವಿಜಯನಗರ …

Read More »