Breaking News
Home / ರಾಜ್ಯ (page 1338)

ರಾಜ್ಯ

ಮೂರ್ನಾಲ್ಕು ತಿಂಗಳಿಂದ ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

👉👉ನಿನ್ನೆ ಸಿದ್ದರಾಯ್ಯನವರು ಹೇಳಿದ್ದಕ್ಕೆ ಇವತ್ತು ಉತ್ತರ ಕೊಡಲು ಬಂದಿದ್ದೆನೆ..👍👍👍👍 ————- ರಾಯಬಾಗ: ಸಿದ್ದರಾಮಯ್ಯ ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ. ನಮ್ಮಂತೆಯೇ ಅವರು ಬಹಳ ನಿಷ್ಠುರವಾದಿ. ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ಅವರು ಯಾರ ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ರಾಯಬಾಗದಲ್ಲಿ ಮಹಾವೀರ ಭವನದಲ್ಲಿ ಸೋಮವಾರ ನಡೆದ …

Read More »

ಒಮಿಕ್ರಾನ್ ನಿಯಂತ್ರಣ ಜವಾಬ್ದಾರಿ ಐಎಎಸ್ ಅಧಿಕಾರಿಗಳ ಹೆಗಲಿಗೆ

ಬೆಂಗಳೂರು: ಕೊರೊನಾ ಮೂರನೇ ಅಲೆ, ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ತಡೆಗಟ್ಟಲು ರಾಜ್ಯ ಸರ್ಕಾರ ಸಜ್ಜುಗೊಂಡಿದ್ದು, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಒಮಿಕ್ರಾನ್ ನಿಯಂತ್ರಣ ಜವಾಬ್ದಾರಿಯನ್ನು ಐಎಎಸ್ ಅಧಿಕಾರಿಗಳ ಹೆಗಲಿಗೆ ವಹಿಸಲಾಗಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ರಾಜ್ಯ ಕೋವಿಡ್ ವಾರ್ ರೂಮ್ ನಿರ್ವಹಣೆ, ಆಕ್ಸಿಜನ್ ನಿರ್ವಹಣೆ- ಮನೀಶ್ ಮೌದ್ಗಿಲ್ ಹೋಮ್ ಐಸೋಲೇಷನ್ ನಿರ್ವಹಣೆ – ಪಂಕಜ್ ಕುಮಾರ್ ಪಾಂಡೆ ವಿದೇಶಿ ಪ್ರಯಾಣಿಕರ ತಪಾಸಣೆ, ಸ್ಕ್ರೀನಿಂಗ್ – …

Read More »

ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 109 ಜನರಿಗೆ ಕೋವಿಡ್ ಪಾಸಿಟಿವ್,ಕೇರಳದಿಂದ ಆಗಮಿಸಿರುವ 23 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ

ತುಮಕೂರು: ಕೇರಳದಿಂದ ಆಗಮಿಸಿರುವ 23 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಮೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಲಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ. ಅರುಣ ನರ್ಸಿಂಗ್ ಕಾಲೇಜಿನ 3, ಸಿದ್ಧಂಗಂಗಾ ನರ್ಸಿಂಗ್ ಕಾಲೇಜಿನ 8 ಹಾಗೂ ವರದರಾಜ ಕಾಲೇಜಿನ 12 ವಿದ್ಯಾರ್ಹಿಗಳು ಸೇರಿದಂತೆ ಒಟ್ಟು 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಐಸೋಲೇಷನ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. …

Read More »

ಹುಲಿಯಂತಿದ್ದ ನಾನು ಇಲಿಯಂತಾಗಿದ್ದೀನಿ’; ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವುದು ಬೇಡ; ಮಾಜಿ ಸಿಎಂ ವಿರುದ್ಧ ವೇದಿಕೆ ಮೇಲೆಯೇ ಗುಡುಗಿದ ಮಾಜಿ ಸಚಿವ

ಬಾದಾಮಿ: ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯ ವೇದಿಕೆಯಲ್ಲಿಯೇ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಚಿಮ್ಮನಕಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಬಾದಾಮಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸುವುದು ಬೇಡ. ಅವರು ವರುಣಾದಿಂದಲೇ ಸ್ಪರ್ಧೆ ಮಾಡಲಿ. ಬಾದಾಮಿ ನನ್ನ ಕ್ಷೇತ್ರ. ನನ್ನ ಕ್ಷೇತ್ರವನ್ನು ನನ್ನಿಂದ ಕಿತ್ತುಕೊಂಡು ಸ್ಪರ್ಧಿಸಿ ಗೆದ್ದಿದ್ದಾರೆ. ನನ್ನ ಎಂ ಎಲ್ …

Read More »

ಖಾನಾಪುರ ಅಭಿವೃದ್ಧಿಗೆ ಸ್ಪಂದಿಸದ ರಾಜ್ಯ ಸರಕಾರದ ವಿರುದ್ದ ಸುವರ್ಣಸೌಧವರೆಗೂ ಪಾದಯಾತ್ರೆಗೆ ಮುಂದಾದ ಅಂಜಲಿ ನಿಂಬಾಳ್ಕರ್

ಖಾನಾಪುರ ಅಭಿವೃದ್ಧಿಗೆ ಸ್ಪಂದಿಸದ ರಾಜ್ಯ ಸರಕಾರದ ವಿರುದ್ದ ಸುವರ್ಣ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಳಗಾವಿಯ ಅಧಿವೇಶನ ಹಿನ್ನೆಲೆ ಈ ಭಾಗದ ರೈತರು, ಸಾರ್ವಜನಿಕರು ಸೇರಿ ಹೆಸರಲ್ಲಿ ಡಿ. 12ರಂದು ಖಾನಾಪುರ ಸಂಘರ್ಷ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಹಿತಿ ನೀಡಿದ್ದಾರೆ. ಖಾನಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 13ರಿಂದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮಗ್ರ …

Read More »

ಬೆಳಗಾವಿ  ಮಾಜಿ ಶಾಸಕ ರಮೇಶ್ ಕುಡಚಿ ಮತ್ತೆ ಜೆಡಿಎಸ್ ನಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಸೇರಿದ್ದಾರೆ.

ರಾಯಬಾಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬೆಳಗಾವಿ  ಮಾಜಿ ಶಾಸಕ ರಮೇಶ್ ಕುಡಚಿ ಮತ್ತೆ ಜೆಡಿಎಸ್ ನಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಸೇರಿದ್ದಾರೆ. ಹೌದು, ಭಾನುವಾರ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಯಬಾಗದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಬೆಳಗಾವಿ ನಗರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಮೇಶ್ ಕುಡಚಿ ಪಕ್ಷಾಂತರ ಮಾಡಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಶಾಲು ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ಪ್ರಥಮ ಬಾರಿಗೆ …

Read More »

ಭಾಷಣದ ವೇಳೆ ಲೇಡಿ ಪಿಎಸ್‌ಐ ಗುಸುಗುಸು, ತಿರುಗಾಟ- ಸಿಎಂ ಗರಂ, ನಿಮ್ಮ ಅಗತ್ಯವಿಲ್ಲ, ಹೋಗಿ ಎಂದು ತರಾಟೆ

ಬೀದರ್‌: ಪರಿಷತ್ ಚುನಾವಣೆ ಪ್ರಚಾರಕ್ಕೆಂದು ಬೀದರ್‌ಗೆ ಇಂದು ಮುಂಜಾನೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಹಿಳಾ ಪೊಲೀಸ್‌ ಮೇಲೆ ಗರಂ ಆಗಿರುವ ಘಟನೆ ನಡೆದಿದೆ. ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಷಣ ಮಾಡ್ತಿದ್ದಾಗ ಗಸ್ತಿನಲ್ಲಿದ್ದ ಮಹಿಳಾ ಪಿಎಸ್‌ಐ ಅವರ ಗುಸು ಗುಸು ಶಬ್ದ ಕೇಳಿ ಮುಖ್ಯಮಂತ್ರಿ ಆಕ್ರೋಶಗೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಪೊಲೀಸರು ವೇದಿಕೆಯ ಮೇಲೆಯೂ ಸುತ್ತಾಡುತ್ತಿದ್ದರು. ಇದು ತಮ್ಮ ಭಾಷಣಕ್ಕೆ ಅಡ್ಡಿಯಾಗುತ್ತಿರುವುದರಿಂದ ಸಿಟ್ಟುಗೊಂಡ ಸಿಎಂ, ಕಾರ್ಯಕ್ರಮದಿಂದ ಅವರಿಗೆ ಇಲ್ಲಿಂದ …

Read More »

ಬೆಳಗಾವಿಯಲ್ಲಿ ಅಂಬೇಡ್ಕರ್‍ರವರ 65ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನಾಚರಣೆ

ಮಾನವ ಬಂಧುತ್ವ ವೇದಿಕೆ ಬೆಳಗಾವಿಯ ವತಿಯಿಂದ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್‍ರ 65ನೇ ಮಹಾಪರಿನಿರ್ವಾಣ ದಿನವನ್ನು ಆಚರಣಾ ಮಾಡಲಾಯಿತು. ಬೆಳಗಾವಿಯ ಸದಾಶಿವ ನಗರದ ಬೌದ್ಧವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‍ರವರ 65ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋದಿ,ü ಪರಿವರ್ತನಾ ದಿನ ಆಚರಿಸಲಾಯಿತು. ಈ ವೇಳೆ ಮಾತನಾಡಿದ ರವೀಂದ್ರ ನಾಯ್ಕರ್, ಸಮಾಜಿಕ, ಧಾರ್ಮಿಕ, ಮೂಢನಂಬಿಕೆಗಳ ಆಚರಣೆ ಮತ್ತು ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಈ …

Read More »

ಮಾಜಿ ಸಿ. ಎಂ ಸಿದ್ದರಾಮಯ್ಯ ಇವತ್ತು ನಾಯಕ ಆದರೆ ಇತ್ತೀಚಿಗೆ ಅವರು ಬಹಳಷ್ಟು ಸುಳ್ಳು ಹೇಳುವುದನ್ನು ಕಲಿಯುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ

ಮಾಜಿ ಸಿ. ಎಂ ಸಿದ್ದರಾಮಯ್ಯ ಇವತ್ತು ನಾಯಕ ಆದರೆ ಇತ್ತೀಚಿಗೆ ಅವರು ಬಹಳಷ್ಟು ಸುಳ್ಳು ಹೇಳುವುದನ್ನು ಕಲಿಯುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.. ಅವರು ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಯವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಇವತ್ತು ಸಿದ್ದರಾಮಯ್ಯ ಇವತ್ತು ನಮ್ಮ ನಾಯಕ,ಗುರು ಆದರೆ ಇತ್ತೀಚಿಗೆ ಅವರು ಬಹಳಷ್ಟು ಸುಳ್ಳು ಹೇಳುವುದನ್ನು ಕಲಿತ್ತಿದ್ದಾರೆ.ನಿನ್ನೆ ರಾಯಬಾಗದಲ್ಲಿ ಸಿದ್ದರಾಮಯ್ಯ ನವರು ವಿವೇಕರಾವ ಪಾಟೀಲಗೂ ಕಾಂಗ್ರೆಸ್ …

Read More »

ಕೇರಳದ 27 ವರ್ಷದ ಮಾಡೆಲ್ ಮೇಲೆ ಗ್ಯಾಂಗ್ ರೇಪ್, ಘಟನೆಗೂ ಮುನ್ನ ಹೋಟೆಲ್ ನಲ್ಲಿ ನಡೀತು ಈ ಕೃತ್ಯ

ಕೊಚ್ಚಿಯಲ್ಲಿ (Kochi News) ರೂಪದರ್ಶಿಯೋಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಇದೀಗ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. 27 ವರ್ಷದ ವೃತ್ತಿಪರ ಮಾಡೆಲ್ ತನ್ನ ಮೇಲೆ ನಡೆದ ಅತ್ಯಾಚಾರದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಪ್ರಕಾರ, ಕಾಕನಾಡಿನ ಎಡಚಿರದಲ್ಲಿರುವ ಹೋಟೆಲ್‌ನಲ್ಲಿ ಮೂವರು ವ್ಯಕ್ತಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಾಮೂಹಿಕ ಅತ್ಯಾಚಾರದ ವಿಡಿಯೋ ಈ ಮಾಡೆಲ್ ತನ್ನ ಎಫ್‌ಐಆರ್‌ನಲ್ಲಿ ಆರೋಪಿ ತನ್ನ ಪಾನೀಯದಲ್ಲಿ ಏನನ್ನಾದರೂ …

Read More »