Home / ರಾಜ್ಯ (page 1022)

ರಾಜ್ಯ

ಪತಿಯಿಂದಲೇ ಪತ್ನಿ ಹತ್ಯೆ- ಪೊಲೀಸರಿಗೆ ಶರಣಾದ ಆರೋಪಿ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಲದಕುಪ್ಪೆ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಹತ್ಯೆಗೈದ ಘಟನೆ ನಡೆದಿದೆ. ಮಹದೇವಪ್ಪ (55) ಬಂಧಿತ ಆರೋಪಿ ಹಾಗೂ ಮಹದೇವಮ್ಮ (45) ಮೃತ ಮಹಿಳೆ. ದಂಪತಿ ಕಿಲಗೆರೆ ಹಾಗೂ ಮಾದಲವಾಡಿ ಗ್ರಾಮದ ನಡುವೆ ಇರುವ ಬೇಲದಕುಪ್ಪೆಯ ಜಮೀನೊಂದರಲ್ಲಿ ವಾಸವಾಗಿದ್ದರು. ಇವರ ನಡುವೆ ಇಂದು ಮುಂಜಾನೆ ಏಕಾಏಕಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಸ್ನಾನದ ಮನೆಯಲ್ಲಿದ್ದ ಪತ್ನಿ ಮಹದೇವಮ್ಮರನ್ನು ಪತಿ ಮಹದೇವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ …

Read More »

S.S.L.C.ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ಸಿಂಧನೂರಿನ ವಿದ್ಯಾರ್ಥಿನಿ ಬಸವಲೀಲಾ ಆಧಾರ್ ಕಾರ್ಡ್ ಇಲ್ಲದೆ ಮುಂದಿನ ಶಿಕ್ಷಣಕ್ಕೆ ಸಮಸ್ಯೆ

ರಾಯಚೂರು: ಎಸ್‌ಎಸ್‌ಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ಸಿಂಧನೂರಿನ ವಿದ್ಯಾರ್ಥಿನಿ ಬಸವಲೀಲಾ ಆಧಾರ್ ಕಾರ್ಡ್ ಇಲ್ಲದೆ ಮುಂದಿನ ಶಿಕ್ಷಣಕ್ಕೆ ಸಮಸ್ಯೆ ಎದುರಿಸುತ್ತಿದ್ದಾಳೆ. 2016 ರಿಂದಲೂ ಅರ್ಜಿ ಹಾಕಿ ಅಲೆದಾಡಿ ಸುಸ್ತಾಗಿರುವ ಪ್ರತಿಭಾವಂತ ವಿದ್ಯಾರ್ಥಿನಿ ಬಸವಲೀಲಾ ಇದುವರೆಗೆ 11 ಬಾರಿ ಅರ್ಜಿ ಹಾಕಿದ್ದಾಳೆ. ಆದರೂ ಇಲ್ಲಿಯವೆಗೆ ಆಧಾರ್ ಕಾರ್ಡ್ ಸಿಕ್ಕಿಲ್ಲ. ಬಡತನದ ಕುಟುಂಬದ ವಿದ್ಯಾರ್ಥಿನಿಗೆ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಸರ್ಕಾರಿ ಶಾಲೆಯಲ್ಲೇ ಓದಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ …

Read More »

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ: ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಮೈಸೂರು: ಫಾಸ್ಟ್ ಹಾಗೂ ಬ್ಯೂಸಿ ಲೈಫ್ ಇಂದಿನ ಯುವ ದಂಪತಿಗಳು ರೆಡಿ ಟು ಈಟ್ ಫುಡ್ ಗಳ ಮೇಲೆ ಅವಲಂಬಿತರಾಗುತ್ತಿರುವುದು ಹೆಚ್ಚಾಗಿದೆ. ಆದರೆ, ಈ ಬೆಳವಣಿಗೆ ಕೆಲವರಲ್ಲಿ ಕಸಿವಿಸಿಯುಂಟು ಮಾಡಿದೆ. ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.   ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್, ಸಣ್ಣಪುಟ್ಟ ವಿಚಾರಗಳಿಗೆ …

Read More »

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ

ಬೆಂಗಳೂರು: ಅಸ್ತಿತ್ವ ಕಳೆದುಕೊಂಡಿರುವುದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಪರಿಶೀಲನೆಯಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 8 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಕ್ಷಗಳ ಪಟ್ಟಿಯಿಂದ ತೆಗದು ಹಾಕಲು ಚುನಾವಣ ಆಯೋಗ ತೀರ್ಮಾನಿಸಿದೆ.   ಇಂಡಿಯನ್‌ ಓಟರ್ ವೆಲ್‌ಫೇರ್‌ ಪಾರ್ಟಿ, ಕರ್ನಾಟಕ ಕ್ರಾಂತಿ ದಳ, ನವನಿರ್ಮಾಣ ನಾಗರಿಕ ಸಮಿತಿ, ರಾಷ್ಟ್ರೀಯ ಜನಾಂದೋಲನ ಪಕ್ಷ, ಸ್ವರ್ಣ ಯುಗ ಪಾರ್ಟಿ, ಟಿಪ್ಪು ಸುಲ್ತಾನ್‌ ನ್ಯಾಷನಲ್‌ ರಿಪಬ್ಲಿಕ್‌ ಪಾರ್ಟಿ, ಯುನೈಟೆಡ್‌ ಇಂಡಿಯನ್‌ ಡೆಮಾಕ್ರಟಿಕ್‌ ಕೌನ್ಸಿಲ್‌, ಅರಸ್‌ ಸಂಯುಕ್ತ …

Read More »

ರಾಜಸ್ಥಾನ ತಂಡದ ವಿರುದ್ಧ ಕಳಪೆ ಪ್ರದರ್ಶನ: ಆರ್ಸಿಬಿಯ ಮುಹಮ್ಮದ್‌ ಸಿರಾಜ್‌ ಕುಟುಂಬಸ್ಥರಿಗೆ ಆನ್‌ಲೈನ್‌ ನಿಂದನೆ

ಬೆಂಗಳೂರು: ಎರಡನೇ ಕ್ವಾಲಿಫೈರ್‌ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ಆಘಾತ ಎದುರಾಗಿದೆ. ರಾಜಸ್ತಾನ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಗಳಾದ ಯಶಸ್ವಿ ಜೈಸ್ವಾಲ್‌ ಹಾಗೂ ಜೋಸ್‌ ಬಟ್ಲರ್‌ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ್ದಾರೆ. ಬಟ್ಲರ್ ಮತ್ತು ಜೈಸ್ವಾಲ್ ಇಬ್ಬರೂ ಚೆನ್ನಾಗಿ ಆಟವನ್ನು ಪ್ರಾರಂಭಿಸಿದ್ದು, ಇನ್ನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ 60 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 158 ಗುರಿಯನ್ನು ಮಾತ್ರ ಎದುರಾಳಗಳಿಗೆ ನೀಡಲು ಸಾಧ್ಯವಾದ ಆರ್‌ಸಿಬಿಗೆ ಇವರ ಆಟವು ಮಾರಕವಾಗಿ ಪರಿಣಮಿಸಿದೆ. …

Read More »

5300 ಕೋಟಿ ಒಡೆಯ ರಾಜ್ಯಸಭೆಯ ಅಭ್ಯರ್ಥಿ!

ಹೈದರಾಬಾದ್‌, ಮೇ 27: ಹೆಟೆರೊ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಂಡಿ ಪಾರ್ಥ ಸಾರಥಿ ರೆಡ್ಡಿ ಅವರು ತಮ್ಮಬಳಿ 3,900 ಕೋಟಿ ರೂಪಾಯಿ ಆಸ್ತಿ ಮತ್ತು ಕುಟುಂಬ ಆಸ್ತಿ ಸೇರಿ ಒಟ್ಟು 5300 ಕೋಟಿ ಆಸ್ತಿಯೊಂದಿಗೆ ಭಾರತದ ಶ್ರೀಮಂತ ಸಂಸತ್ತಿನ ಸದಸ್ಯರಾಗಲು ಸಿದ್ಧರಾಗಿದ್ದಾರೆ. ಅವರನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಅವರ ಅಫಿಡವಿಟ್‌ನಲ್ಲಿ, ಪಾರ್ಥ ಸಾರಧಿ ಅವರು ಚರ ಆಸ್ತಿಯ ಭಾಗವಾಗಿ 3.3 ಲಕ್ಷ …

Read More »

ಆಡಿದ್ದು ಸಾಕು, ಮೊದಲು ಸ್ಟೇಡಿಯಂನಿಂದ ಆಚೆ ನಡೆಯಪ್ಪ: ಆರ್‌ಸಿಬಿ ಸ್ಟಾರ್ ಪ್ಲೇಯರ್ ವಿರುದ್ಧ ಫ್ಯಾನ್ಸ್ ಕಿಡಿ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪಯಣವನ್ನು ಮುಗಿಸಿದ್ದು, ಟೂರ್ನಿಯಿಂದ ಹೊರಬಿದ್ದಿದೆ.   ಹೌದು, ಇಂದು ( ಮೇ 27 ) ಅಹಮದಾಬಾದಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪ್ರತಿಷ್ಟಿತ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 7 ವಿಕೆಟ್‍ಗಳ ಭರ್ಜರಿ ಜಯವನ್ನು …

Read More »

ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ

ನವದೆಹಲಿ: ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮೂರು ದಿನಗಳ ನಂತರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ (ಮೇ 27) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಹುಗುಣ(59ವರ್ಷ) ಅವರು ತಮ್ಮ ಹಲ್ ಡ್ವಾನಿ ಪೊಲೀಸ್ ಠಾಣೆಯ ತುರ್ತು (112) ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಾನು ಆತ್ಮಹತ್ಯೆ …

Read More »

ರಾಜ್ಯದಲ್ಲಿ ೬೫ ಸಾವಿರ ಕೋಟಿ ಬಂಡವಾಳ ಹೂಡಲು ಹಲವು ಕಂಪನಿಗಳು ತೋರಿವೆ ಬದ್ಧತೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿವೆ. ಅಂದಾಜು ೬೫ ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಕಂಪನಿಗಳು ಬದ್ಧತೆ ತೋರಿವೆ. ಇದು ಕೈಗಾರಿಕೆ ಸ್ಥಾಪನೆಗೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹ ಹಾಗೂ ನೀತಿ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಪೂರಕ ಪರಿಸರ, ನೀತಿ ನಿಯಮಗಳು, ತಂತ್ರಜ್ಞಾನ ಆಧಾರ, ಕೌಶಲ್ಯಯುತ ಮಾನವಸಂಪನ್ಮೂಲ, ಆರ್ ಎಂಡ್ ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ …

Read More »

ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ. ಏಕೆ ಗೊತ್ತಾ?

ಶ್ರೀರಂಗಪಟ್ಟಣ: ಇಲ್ಲೊಬ್ಬ ಭೂಪ ತನ್ನ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ್ದು, ಹರಸಾಹಸಪಟ್ಟು ಪೊಲೀಸರು ಆ ಕಾರನ್ನು ಹೊರ ತೆಗೆದ ಘಟನೆ ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಬಳಿ ಸಂಭವಿಸಿದೆ. ಕಾರಿನ ಮಾಲೀಕ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ನಿವಾಸಿ ರೂಪೇಶ್. ​ಬುಧವಾರ ರಾತ್ರಿ ಕಾರು ಚಲಾಯಿಸಿಕೊಂಡು ಬಂದ ರೂಪೇಶ್​, ಗಂಜಾಂನ ನಿಮಿಷಾಂಬ-ಕರಿಘಟ್ಟ ಸೇತುವೆ ಕೆಳಭಾಗದ ಕಾವೇರಿ ನದಿಯ ನೀರಲ್ಲಿ ಮುಳುಗಿಸಿದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಗುರುವಾರ ಬೆಳಗ್ಗೆ …

Read More »