Home / ರಾಜ್ಯ (page 1040)

ರಾಜ್ಯ

ಸೋಮವಾರ ಶಾಲೆ ಆರಂಭ, ಸಿಹಿಯೊಂದಿಗೆ ಮಕ್ಕಳಿಗೆ ಸ್ವಾಗತ

ಬೆಂಗಳೂರು,ಮೇ 15: ಕೋವಿಡ್‌ನಿಂದಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ. ಇದರಿಂದಾಗಿ 2022-23 ನೇ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅದರಂತೆ ಮೇ 16ರ ಸೋಮವಾರ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭವಾಗಲಿದ್ದು ಮಕ್ಕಳನ್ನು ಬಹಳ ಸಂತೋಷದಿಂದ ಬರಮಾಡಿಕೊಳ್ಳಲು ಸರ್ಕಾರಿ ಶಾಲೆಗಳಲ್ಲಿ ಸಿಹಿ ಖಾದ್ಯವನ್ನು ನೀಡಲು ಶಿಕ್ಷಣ ಇಲಾಖೆ ಸೂಚಿಸಿದೆ. ಮಕ್ಕಳು ಶಾಲೆಗೆ …

Read More »

ಪ್ರಜ್ವಲ್​ ಅವರಿಗೆ ಎಂದು ಎಷ್ಟು ಸರಿ ಕೂಗ್ತೀರಾ, ನನಗೂ ಒಂದು ಸರಿ ಜೈಕಾರ ಹಾಕಿದ್ರೆ ನಿಮ್ ಗಂಟಲು ಹೋಗ್ಬಿಡ್ತಿತ್ತಾ?: ಶಾಸಕ ಶಿವಲಿಂಗೇಗೌಡ

ಹಾಸನ: ಪ್ರಜ್ವಲ್ ಅವರಿಗೆ, ಪ್ರಜ್ವಲ್ ಅವರಿಗೆ ಎಂದು ಎಷ್ಟು ಸಲ ಕೂಗುತ್ತೀರಾ ನಾನು ಇಲ್ಲೇ ಇದ್ದೀನಿ ಒಬ್ಬನಾದ್ರೂ ಜೈ ಕಾರ ಹಾಕೋದು ಬೇಡ್ವಾ ಎಂದು ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಜಾನಳ್ಳಿಯಿಂದ ಒಬ್ಬ ಹುಡುಗ ಬಂದಿದ್ದಾನೆ. ಶಿವಲಿಂಗೇಗೌಡನಿಗೆ ಜೈ ಅಂದ್ರೆ ನಿನ್ನ ಗಂಟು ಹೋಗ್ಬಿಡುತ್ತಾ, ನಿಮ್ಮ ಪಿಎ ಒಬ್ಬ ಇದ್ದಾನೆ ಬೇಜಾರು ಮಾಡ್ಕೋಬೇಡಿ. ಅವನು ಹತ್ತು ಹುಡುಗರು ಕಟ್ಟಿಕೊಂಡು ಎಲ್ಲಿ ಹೋದರೂ ಹೀಗೆ ಕೂಗಿಸುತ್ತಾನೆ ಯಾಕೆ ಎಂದು …

Read More »

ಅಪಘಾತದಲ್ಲಿ ಪ್ರಿಯಕರ ಸಾವು- ಆಘಾತಗೊಂಡ ಪ್ರಿಯತಮೆ ಆತ್ಮಹತ್ಯೆ

ತುಮಕೂರು: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ. ಧನುಷ್(23), ಸುಷ್ಮಾ(22) ಮದುವೆಯಾಗ ಬೇಕಾಗಿದ್ದ ಮೃತ ದುರ್ದೈವಿಗಳು. ಧನುಷ್ ಮತ್ತು ಸುಷ್ಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸಿ ಮದುವೆಗೆ ಮನೆಯವರನ್ನು ಒಪ್ಪಿಸಿದ್ದರು. ಆದರೆ ಮೇ 11 ರಂದು ಧನುಷ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮೇ 14 ರಂದು ರಾತ್ರಿ ಸುಷ್ಮಾ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ತುಮಕೂರುನ ಮಸ್ಕಲ್ ಗ್ರಾಮದ ಧನುಷ್, ಮೇ 11 …

Read More »

ಗಂಡನ ಜೊತೆ ಜಗಳ – ಸಾಯ್ತೀನಿ ಅಂತ ಕೆರೆಯಲ್ಲಿ ಕೂತ ಮಹಿಳೆ

ಬೆಂಗಳೂರು: ಸಾಮಾನ್ಯವಾಗಿ ಗಂಡ, ಹೆಂಡತಿ ಜಗಳ ಉಂಡು ಮಲಗುವರೆಗೂ ಅಂತ ಗಾದೆ ಮಾತಿದೆ. ಅದೆಷ್ಟೋ ದಂಪತಿಗಳು ಜಗಳವಾಡಿ ಸ್ವಲ್ಪ ಹೊತ್ತಿನಲ್ಲೇ ಸರಿಹೋಗಿ ಅನ್ಯೋನ್ಯವಾಗಿರುತ್ತಾರೆ. ಆದರೆ ಮಹಿಳೆಯೊಬ್ಬರು ಗಂಡನ ಜೊತೆಗೆ ಜಗಳವಾಡಿ ಸಾಯುತ್ತೇನೆ ಅಂತ ಕೆರೆಯಲ್ಲಿ ಕೂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲ 3ನೇ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ವಾಕಿಂಗ್ ಹೋಗುವ ವೇಳೆ ಗಂಡನೊಂದಿಗೆ ಮಹಿಳೆ ಜಗಳವಾಡಿದ್ದಾರೆ. ನಂತರ ಕೋಪ ಮಾಡಿಕೊಂಡು ಮಹಿಳೆ ನಾನು ಸಾಯುತ್ತೇನೆ ಎಂದು ಕೋರಮಂಗಲ ಮೂರನೇ ಬ್ಲಾಕ್ …

Read More »

ಕೋವಿಡ ಸಾವಿನ ಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿದ್ದಾರೆ ಜೈಲು ಶಿಕ್ಷೆ , ಪರಿಹಾರ ಧನ ವಾಪಸ್!

ಕೋವಿಡ ಸಾವಿನ ಪರಿಹಾರ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿದ್ದಾರೆ ಜೈಲು ಶಿಕ್ಷೆ , ಪರಿಹಾರ ಧನ ವಾಪಸ್! ಕೋವಿಡ ನಿಂದ ಜನ ತತ್ತರಿಸಿ ಹೋಗಿದ್ದು ಇಡಿ ಜಗತ್ತಿಗೆ ಗೊತ್ತು ಅದರಲ್ಲಿ ಸುಮಾರು ಜನ ಪ್ರಾಣ ಕೂಡ ಕಳೆದು ಕೊಂಡಿದ್ದಾರೆ, ಬರಿ ಜನ ಅಷ್ಟೇ ಅದರಲ್ಲಿ ಸುಮಾರು ಜನ ವೈದ್ಯರು, ನರ್ಸಿಂಗ್ ಸ್ಟಾಫ್, ಹಿರಿಯ ಕಿರಿಯ ವೈದ್ಯರು, ಸಹಾಯಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಈ ರೀತಿ ಎಲ್ಲ …

Read More »

ಹುಬ್ಬಳ್ಳಿಯಲ್ಲಿ ಏಷ್ಯಾದಲ್ಲಿಯೇ ಅತಿದೊಡ್ಡ ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ ಅನಾವರಣ

ಧಾರವಾಡ : ಮುಗಿಲೆತ್ತರಕ್ಕೆ ತಲೆಯೆತ್ತಿರುವ ಕಟ್ಟಡ. ಒಳಗೆ ಹೋದಂತೆ ನಿಸರ್ಗ ಸೌಂದರ್ಯ ಉಣಬಡಿಸುವ ಪರಿಸರ. ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಆಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಚಿತ್ರಣಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಾಣ ಮಾಡಿರುವ ಜ್ಞಾನಲೋಕ ಮ್ಯೂಸಿಯಂ/ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ. ಇಷ್ಟು ದಿನ ವಾಣಿಜ್ಯನಗರಿಯಾಗಿ ಬಿಂಬಿತವಾಗಿದ್ದ ಹುಬ್ಬಳ್ಳಿ ಇನ್ಮುಂದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಗರವಾಗಿ ಹೊರಹೊಮ್ಮಲಿದೆ. ಇಲ್ಲಿನ ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ಏಷ್ಯಾದಲ್ಲಿಯೇ ಅತಿದೊಡ್ಡ ಮ್ಯೂಸಿಯಂ …

Read More »

ನಂಗು ಬೇಕು ದ್ರಾಕ್ಷಿ ನಂಗೂ ಬೇಕು..! ರಸ್ತೆ ಬದಿ ಬಿದ್ದಿದ್ದ ದ್ರಾಕ್ಷಿಗಾಗಿ ಮುಗಿಬಿದ್ದ ಜನ!

ಮಂಡ್ಯ: ಯಾವುದೇ ವಸ್ತು ರಸ್ತೆಯಲ್ಲಿ ಬಿದ್ದಿದ್ದಾಗ ಎತ್ತಿಕೊಳ್ಳೋದಕ್ಕೆ ಹಿಂದೆ ಮುಂದೆ ನೋಡೋ ಜನರು ಮಾತ್ರ, ರಸ್ತೆ ಪಕ್ಕದಲ್ಲಿ ಬಿದ್ದಿದ್ದ ರಾಶಿ ರಾಶಿ ದ್ರಾಕ್ಷಿಯನ್ನು ನನಗೂ ಬೇಕು.. ನನಗೂ ಬೇಕು ಎಂಬುದಾಗಿ ನಾ ಮುಂದು, ತಾ ಮುಂದು ಎನ್ನುವಂತೆ ಮುಗಿಬಿದ್ದು ಬಾಚಿಕೊಂಡು ಹೋಗಿರೋ ಘಟನೆ, ಮಂಡ್ಯದಲ್ಲಿ ನಡೆದಿದೆ.   ಮಂಡ್ಯ ಜಿಲ್ಲೆಯ ವಿಸಿ ಫಾರ್ಮ್ ಗೇಟ್ ಬಳಿಯ ರಸ್ತೆಯ ಪಕ್ಕದಲ್ಲಿಯೇ ರಾಶಿ ರಾಶಿ ದ್ರಾಕ್ಷಿಯನ್ನು ಯಾರೋ ಸುರಿದು ಹೋಗಿದ್ದರು. ಹೀಗೆ ರಸ್ತೆಯ …

Read More »

ಮಿಷನ್ 150 ಕಷ್ಟ!; ಬಿಜೆಪಿ ನಿದ್ದೆಗೆಡಿಸಿದ ಆಂತರಿಕ ಸಮೀಕ್ಷೆ?

ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ವಿಧಾನಸಭೆ ಚುನಾವಣೆ ತಯಾರಿಯಲ್ಲಿ ತೊಡಗಿದ್ದರೂ, ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ನಾಯಕರ ನಿದ್ದೆಗೆಡಿಸಿದೆ ಎಂದು ಹೇಳಲಾಗಿದೆ. ಬಿಜೆಪಿ ಮಿಷನ್‌-150 ಗುರಿ ತಲುಪುವುದು ಕಷ್ಟ. ಮುಖಂಡರ ವಿವಾದಾತ್ಮಕ ಹೇಳಿಕೆ, ನಾಯಕತ್ವ ಪ್ರಶ್ನಿಸುವ ರೀತಿಯ ಅನಿಸಿಕೆ, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕಸರತ್ತು, ವಲಸಿಗರ ಮೇಲೆ ಮೂಡದ ಪೂರ್ಣ ಪ್ರಮಾಣದ ವಿಶ್ವಾಸ, ಗುತ್ತಿಗೆದಾರನ ಆತ್ಮಹತ್ಯೆ, ಪಿಎಸ್‌ಐ ನೇಮಕ ಹಗರಣ, ಧಾರ್ಮಿಕ ಸೂಕ್ಷ್ಮ ವಿಚಾರದಲ್ಲಿ ಎದ್ದ …

Read More »

ಕಾಮುಕ ಪ್ರಿಯಕರನಿಗಾಗಿ ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ: ಮಗುವನ್ನು ಹೆತ್ತ ಬಾಲಕಿ!

ಚೆನ್ನೈ: ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ನಾಣ್ಣುಡಿ ಇದೆ. ಆದರೆ ಇಲ್ಲೊಂದು ಭಯಾನಕ ಹಾಗೂ ಮಾನವ ಕುಲವೇ ತಲೆತಗ್ಗಿಸುವ ಘಟನೆಯೊಂದು ವರದಿಯಾಗಿದೆ. ಹೆತ್ತಾಕೆಯೇ ತನ್ನ ಮಗಳನ್ನು ಪ್ರಿಯಕರನಿಗೆ ಒಪ್ಪಿಸಿ, ಅತ್ಯಾಚಾರ ಮಾಡಲು ಅವಕಾಶ ಕೊಟ್ಟಿದ್ದಾಳೆ! ಇದೀಗ ಆ ಬಾಲಕಿ ತಾಯಿಯ ಪ್ರಿಯಕರನಿಂದ ಗರ್ಭ ಧರಿಸಿ ಮಗು ಹೆತ್ತಿದ್ದಾಳೆ! ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ. ಚೆನ್ನೈನ ಒಟ್ಟೇರಿ ಪ್ರದೇಶದ 40 ವರ್ಷದ ಮಹಿಳೆ ವಿಕೃತಿ ಮೆರೆದವಳು. ಈಕೆ …

Read More »

ನಾಳೆಯಿಂದ ಶಾಲೆಗಳು ಆರಂಭ : ವಿದ್ಯಾರ್ಥಿ ಬಸ್ ಪಾಸ್ ಅವಧಿ ಜೂ.30ರವರೆಗೆ ವಿಸ್ತರಣೆ

ಬೆಂಗಳೂರು : ರಾಜ್ಯಾದ್ಯಂತ ನಾಳೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ನ ಅವಧಿಯನ್ನು ಜೂ. 30 ರವರೆಗೆ ವಿಸ್ತರಣೆ ಮಾಡಿವೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 16-05-2022ರಿಂದ 2022-23ನೇ ಸಾಲಿನ ಭೌತಿಕ ತರಗತಿಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಆರಂಭಗೊಳ್ಳುತ್ತಿವೆ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಿ, ಬಸ್ ಪಾಸ್ ( Bus Pass ) …

Read More »