ಬಿಜೆಪಿಯವರು ಹಿಂದೂ- ಮುಸ್ಲಿಂರೆಂಬ ಭೂತ ಕನ್ನಡಿಯಿಂದ ನೋಡುವುದು ಬಿಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶಾಸಕ ಸುನೀಲ್ ಕುಮಾರ್ ಜವಾಬ್ದಾರಿಯುತ ಹೇಳಿಕೆ ನೀಡಲಿ ಬೆಂಗಳೂರು: ಬಿಜೆಪಿಯವರು ಹಿಂದೂ, ಮುಸ್ಲಿಂರೆಂದು ಭೂತ ಕನ್ನಡಿಯಿಂದ ನೋಡುವುದನ್ನು ಬಿಡಬೇಕು. ಸಾಮಾಜಿಕ ಬದ್ಧತೆಯಿಂದ ಎಲ್ಲವನ್ನೂ ನೋಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಂದೂ ಸಂಘಟನೆಗಳನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿಯ …
Read More »2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರವು ಸೇವೆ ಸಲ್ಲಿಸಲಿದೆ ಸಬ್ ರೆಜಿಸ್ಟರ್ ಕಾರ್ಯಾಲಯ…
ನೋ ಸೂಟಿ… ಫೂಲ್ ಡ್ಯೂಟಿ…2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರವು ಸೇವೆ ಸಲ್ಲಿಸಲಿದೆ ಸಬ್ ರೆಜಿಸ್ಟರ್ ಕಾರ್ಯಾಲಯ… ಬೆಳಗಾವಿಯ ಉಪ ನೋಂದಣಿ ಕಾರ್ಯಾಲಯವು ಇನ್ಮುಂದೆ 2ನೇ ಶನಿವಾರ ಮತ್ತು 4ನೇ ಶನಿವಾರ ಹಾಗೂ ಭಾನುವಾರದ ರಜೆ ದಿನಗಳಂದು ಕೂಡ ಕಾರ್ಯನಿರ್ವಹಿಸಲಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಈಗಾಗಲೇ ಎನಿವೇರ್ ರಜಿಸ್ಟ್ರೇಶನ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ವ್ಯಾಪ್ತಿಯ ಉಪ ನೋಂದಣಿ ಕಾರ್ಯಾಲಯಗಳು 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರದ …
Read More »ಸಿನಿಮಾ ಸ್ಟೈಲ್ನಲ್ಲಿ ಸುತ್ತುವರೆದು ವ್ಯಕ್ತಿಯ ಭೀಕರ ಕೊಲೆ
ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೃದಯ ಭಾಗವಾದ ಸಿಂಧನೂರು ಸರ್ಕಲ್ನಲ್ಲಿ ಭಾನುವಾರ ರಾತ್ರಿ ಸಿನಿಮಾ ಸ್ಟೈಲ್ನಲ್ಲಿ ನಡೆದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಕೊಲೆ ದೃಶ್ಯ ಸೆರೆ: ಸಿಂಧನೂರು ಸರ್ಕಲ್ನಲ್ಲಿರುವ ಬೇಕರಿಯೊಂದರ ಮುಂಭಾಗದಲ್ಲಿ ಚೆನ್ನಪ್ಪ ನಾರಿನಾಳ ಎಂಬ ವ್ಯಕ್ತಿಯ ಕೊಲೆಯಾಗಿದ್ದು, ಕೊಲೆಯ ಸಂಪೂರ್ಣ ಚಿತ್ರಣ ಬೇಕರಿಯಲ್ಲಿ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಮೇಲೆ ಬರುತ್ತಿದ್ದ ಚೆನ್ನಪ್ಪನನ್ನು ಅಟ್ಟಾಡಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು, ಎರಡೇ …
Read More »16 ವರ್ಷಗಳ ಹಿಂದೆ ಮುಚ್ಚಿದ್ದ ಸರ್ಕಾರಿ ಶಾಲೆ ಪುನರಾರಂಭ
ದಾವಣಗೆರೆ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳ ದಾಖಲಾತಿ ಕಡಿಮೆ ಇರುವ ನೆಪ ನೀಡಿ ಶಿಕ್ಷಣ ಇಲಾಖೆ ಶಾಲೆಗಳಿಗೆ ಬೀಗ ಹಾಕುತ್ತಿದೆ. ಆದರೆ, ಇಲ್ಲೊಂದು ಮುಚ್ಚಿದ್ದ ಸರ್ಕಾರಿ ಶಾಲೆ 16 ವರ್ಷಗಳ ಬಳಿಕ ಮತ್ತೆ ತೆರೆದಿದೆ. ಊರಿನಲ್ಲಿಯೇ ಶಾಲೆ ಇದ್ದರೂ ಮಕ್ಕಳು ದೂರದೂರಿಗೆ ನಡೆದುಕೊಂಡೇ ತೆರಳಿ ಶಾಲೆ ಸೇರುವ ಪರಿಸ್ಥಿತಿ ಇಲ್ಲಿತ್ತು. ಮಕ್ಕಳ ಕಷ್ಟ ನೋಡಲಾಗದೆ ಗ್ರಾಮಸ್ಥರು ಈ ಶಾಲೆಯನ್ನು ಮತ್ತೆ ತೆರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆ ಸ್ವಚ್ಛಗೊಳಿಸಿ, ಸಿಂಗರಿಸಿ …
Read More »ಮಹದಾಯಿಗೆ ಒಳ್ಳೆಯದಾಗಿದ್ದು ನಮ್ಮಿಂದ,:ಜೋಶಿ
ಮಹದಾಯಿಗೆ ಒಳ್ಳೆಯದಾಗಿದ್ದು ನಮ್ಮಿಂದ, ಧಾರವಾಡ: ಮಹದಾಯಿ ವಿಚಾರವಾಗಿ ಎಲ್ಲ ಕ್ಲಿಯರೆನ್ಸ್ ನಾವು ಮಾಡಿಸಿದ್ದೇವೆ. ಬೇರೆ ಯಾರ ಕಾಲದಲ್ಲೂ ಯೋಜನೆಗಾಗಿ ಒಂದು ಪೈಸೆ ಕೆಲಸ ಆಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಭಾಷಣ ಮಾಡೋರು ಮಾಡಲಿ, ಅದಕ್ಕೆ ನನ್ನ ತಕರಾರಿಲ್ಲ. ಹಿಂದೆ ಮನಮೋಹನ್ ಸಿಂಗ್, ಸೋನಿಯಾ ಅವರ ಸರ್ಕಾರ ಇದ್ದಾಗ ಅದನ್ನು ಟ್ರಿಬ್ಯುನಲ್ಗೆ ಕೊಡಲಾಗಿತ್ತು. ಆಗ ನಾವು ಅದನ್ನು ಬೇಡ ಎಂದಿದ್ವಿ. ಟ್ರಿಬ್ಯುನಲ್ಗೆ ಕೊಡುವುದಾದರೆ …
Read More »I PL ಫೈನಲ್ ಮೇನಿಯಾ: ದುಬಾರಿಕಾರಿಗೆ ವಿಶೇಷ ಅಲಂಕಾರ ಮಾಡಿದ ಆರ್‌ಸಿಬಿ ಫ್ಯಾನ್ಸ್
ಮೈಸೂರು: ಐಪಿಎಲ್ ಫೈನಲ್ ಗೆಲ್ಲಲು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಅಂತಿಮ ಘಟ್ಟದಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಲೆಂದು ಮೈಸೂರಿನ ಉದ್ಯಮಿಯೊಬ್ಬರು ತಮ್ಮ ದುಬಾರಿ ಬೆಲೆಯ ಕಾರಿಗೆ RCB ತಂಡದ ಆಟಗಾರರ ಪೋಸ್ಟರ್‌ಗಳನ್ನು ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ RCB ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲಲೆಂದು ಚಾಮುಂಡಿ ಬೆಟ್ಟಕ್ಕೆ ಹೋಗಿ ನಾಡಿನ …
Read More »ಕಮಲ್ ಹಾಸನ್ ವಿವಾದಿತ ಹೇಳಿಕೆ: ಬೂಕರ್ ಪುರಸ್ಕೃತೆ ಬಾನು ಮುಷ್ತಾಕ್, ದೀಪಾ ಭಾಸ್ತಿ ಹೇಳುವುದೇನು?
ಬೆಂಗಳೂರು: ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ, ಒಂದು ಬೂಕರ್ ಪ್ರಶಸ್ತಿ ಸಿಕ್ಕಿದೆ. ಅದೇ ಅದಕ್ಕೆ ಉತ್ತರ ಎಂದು ಕಮಲ್ ಹಾಸನ್ ಹೇಳಿಕೆಗೆ ಬಾನು ಮುಷ್ತಾಕ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೂಕರ್ ಪ್ರಶಸ್ತಿ ನನ್ನೊಬ್ಬಳಿಗೆ ಸಿಕ್ಕಿದ್ದು ಅಲ್ಲ, ಕನ್ನಡಕ್ಕೆ ಮತ್ತು ಕನ್ನಡದ ಜನತೆಗೆ ಸಿಕ್ಕಿದೆ. ಸರ್ಕಾರ ಅದಕ್ಕೆ ಅಭಿನಂದನೆ ಸಲ್ಲಿಸಿದೆ. ಕಮಲ್ ಹಾಸನ್ ಹೇಳಿಕೆ ಸಂಬಂಧ ನಾನು ಉತ್ತರ ಹೇಳಿದ್ದೇನೆ. ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ, ಒಂದು …
Read More »ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಟಾಸ್ಕ್ ಫೋರ್ಸ್ ರಚನೆ: ಆರ್.ಅಶೋಕ್
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿ, ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಕೋಮುವಾದದ ವಿರುದ್ಧ ಅಲ್ಲ, ಹಿಂದೂಗಳ ವಿರುದ್ಧ ಇರುವ ಫೋರ್ಸ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಘಟನೆ ನಡೆದು ಎಷ್ಟೋ ದಿನಗಳಾದ ನಂತರ ಪ್ರಕರಣ ದಾಖಲಿಸಲಾಗುತ್ತಿದೆ. ಸುಳ್ಳು ಆಪಾದನೆ ಮಾಡಿ ಹಿಂದೂ ಕಾರ್ಯಕರ್ತರ …
Read More »ಪುನೀತ್ ರಾಜ್ಕುಮಾರ್ ಮೂರ್ತಿಗೆ ಪೂಜೆ ಸಲ್ಲಿಸಿ, ಆರ್‌ಸಿಬಿ ಗೆಲುವಿಗೆ ಪ್ರಾರ್ಥನೆ
ಹಾವೇರಿ: ದಿವಂಗತ ಪುನೀತ್ ರಾಜ್ಕುಮಾರ್ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ಕನಸು ಕಂಡಿದ್ದರು. ನಮ್ಮ ತಂಡ ಫೈನಲ್ ಪ್ರವೇಶಿಸಬೇಕು, ಮೈದಾನದಲ್ಲಿ ಫೈನಲ್ ಪಂದ್ಯವನ್ನು ಕುಳಿತು ನೋಡಬೇಕು ಎಂದು ಅವರು ಹೇಳುತ್ತಿದ್ದರು. ಆದರೆ, ಆ ಆಸೆ ಈಡೇರಲಿಲ್ಲ. ಇದೀಗ ಆರ್‌ಸಿಬಿ ಫೈನಲ್ ತಲುಪಿದೆ. ನಾಳೆ ಸಂಜೆ ನಡೆಯುವ ಪಂದ್ಯದಲ್ಲಿ ಎದುರಾಳಿ ಪಂಜಾಬ್ ಕಿಂಗ್ಸ್ ಜೊತೆ ಸೆಣಸಲಿದೆ. ಈ ಮಧ್ಯೆ ಹಾವೇರಿ ತಾಲೂಕು ಯಲಗಚ್ಚ ಗ್ರಾಮದಲ್ಲಿ ಪುನೀತ್ ರಾಜ್ಕುಮಾರ್ ದೇವಾಲಯ ಕಟ್ಟಿಸಿರುವ ಪ್ರಕಾಶ್ …
Read More »ಬೆಳಗಾವಿ ಸುಪ್ರಸಿದ್ಧ ಆಪ್ಟೆಕ್ ಇನ್ನೋವ್ಹೇಷನ್’ನ ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ಮತ್ತು ಗೋವಾ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸಲು ಆಯ್ಕೆ
ಬೆಳಗಾವಿ ಸುಪ್ರಸಿದ್ಧ ಆಪ್ಟೆಕ್ ಇನ್ನೋವ್ಹೇಷನ್’ನ ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ಮತ್ತು ಗೋವಾ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸಲು ಆಯ್ಕೆ ಬೆಳಗಾವಿ ಸುಪ್ರಸಿದ್ಧ ಆಪ್ಟೆಕ್ ಇನ್ನೋವ್ಹೇಷನ್’ನ ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ಮತ್ತು ಗೋವಾ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ. ಬೆಳಗಾವಿ ನಗರದ ಆಪ್ಟೆಕ್ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರಾದ ಬೆಳಗಾವಿಯ ಕರುಣಾ ಭೂದರ್ಗಡೆ ಮತ್ತು ದಾಂಡೇಲಿಯ ನೇಹಾ ನಾಯರ್ ದಾಂಡೇಲಿ ಗೋವಾ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ. …
Read More »
Laxmi News 24×7