Breaking News
Home / ರಾಜಕೀಯ (page 238)

ರಾಜಕೀಯ

ಕುಂದಾನಗರಿಯಲ್ಲಿ ಕೋಟೆ ಕಟ್ಟಿ ಬೆಳಕಿನ ಹಬ್ಬ ಸಂಭ್ರಮಿಸುವ ಮಕ್ಕಳು

ಬೆಳಗಾವಿ: ದೀಪಾವಳಿ ಹಬ್ಬವನ್ನು ಒಂದೊಂದು ಭಾಗಗಳಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಕ್ಕಳು ಕೋಟೆ ಕಟ್ಟಿ ಸಂಭ್ರಮಿಸುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಸಾಹಸ, ಪರಾಕ್ರಮವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಿ, ದೀಪ ಬೆಳಗಿಸಿ, ಸಿಹಿ ಹಂಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಕುಂದಾನಗರಿಯ ಮಕ್ಕಳು ಮಾತ್ರ ಐತಿಹಾಸಿಕ ಕೋಟೆಗಳ ಮಾದರಿ ನಿರ್ಮಿಸಿ …

Read More »

ಕುಂದಾನಗರಿಯಲ್ಲಿ ಬೆಳಕಿನ ಹಬ್ಬದ ಸಂಭ್ರಮ ಹಸಿರು ಪಟಾಕಿ ಬಳಸುವಂತೆ ಡಿಸಿ ಮನವಿ

ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯನ್ನು ರಾಜ್ಯಾಧ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿ ವಿಶೇಷ ಎಂದರೆ ದೀಪ ಬೆಳಗಿಸುವುದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಪಡುವ ಹಬ್ಬ. ಆದರೆ ಈ ಸಡಗರ ಮಧ್ಯೆ ಪಟಾಕಿ ಸಿಡಿಸಲು ಹೋಗಿ ಅದೆಷ್ಟೋ ಅವಘಡಗಳು ಸಂಭವಿಸಿ ಯುವಕರು, ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ಪ್ರತಿವರ್ಷವೂ ನಡೆಯುತ್ತಲೇ ಇವೆ. ಜತೆಗೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಮನಗಂಡ ಬೆಳಗಾವಿ ಜಿಲ್ಲಾಡಳಿತ ಪರಿಸರಕ್ಕೆ ಮಾರಕವಾಗಿರುವ ಪಟಾಕಿಗಳನ್ನು ಬ್ಯಾನ್ ಮಾಡಿ …

Read More »

ಸಿದ್ದರಾಮಯ್ಯ ಡುಪ್ಲಿಕೇಟ್ ಸಿಎಂ: H.D.K.

ಬೆಂಗಳೂರು: ಮಾಜಿ ಸಿಎಂ ಮತ್ತು ಜೆಡಿಎಸ್​ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ನಾಲ್ಕು ಗ್ಯಾರಂಟಿಗಳ ವೈಫಲ್ಯದ ಬಗ್ಗೆ ದಾಖಲೆಗಳ ಸಮೇತ ಮಾಜಿ ಸಿಎಂ ಮಾತನಾಡಿದರು. ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್​ನ ಭರವಸೆಗಳನ್ನು ನಂಬಬೇಡಿ, ಗ್ಯಾರಂಟಿಗಳಿಗೆ ಮರುಳಾಗಬೇಡಿ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಹೆಚ್​ಡಿಕೆ ಆರೋಪಿಸಿದರು. …

Read More »

ದೀಪಾವಳಿ ಹಬ್ಬ : ಮಣ್ಣಿನ ಹಣತೆಗಳ ಖರೀದಿಯಲ್ಲಿ ನಿರತರಾದ ಸಿಲಿಕಾನ್ ಸಿಟಿ ಮಂದಿ

ಬೆಂಗಳೂರು : ದೀಪಾವಳಿ ಹಬ್ಬದಲ್ಲಿ ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಮೂರು ದಿನಗಳ ಕಾಲ ಸಾಲು ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸುವುದು ಈ ಹಬ್ಬದ ಸಂಪ್ರದಾಯ. ಅಂಧಕಾರವ ಕಳೆದು ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀಪಗಳ ಹಬ್ಬವನ್ನು ಸ್ವಾಗತಿಸಲು ನಗರದ ಮಾರುಕಟ್ಟೆಯಲ್ಲಿ ಬಗೆಬಗೆಯ ಹಣತೆಗಳು ಬಂದಿವೆ. ಮಣ್ಣಿನ ದೀಪಗಳು ದುಬಾರಿ ಎನಿಸಿದರೂ ಪರಿಸರ ಸ್ನೇಹಿ ದೀಪಗಳಾಗಿರುವುದರಿಂದ ಬೇಡಿಕೆ ಹೆಚ್ಚಿದೆ. ನಗರದಲ್ಲಿ ಜೇಡಿ ಮಣ್ಣಿನಿಂದ ಹೂವು, ಆನೆಯ ಮಾದರಿಯ ದೀಪ, ನವಿಲುಗರಿ ಮತ್ತು ಮಹಿಳಾ ಪ್ರತಿರೂಪದ …

Read More »

ಭಾರತ vs ನೆದರ್ಲೆಂಡ್ಸ್‌ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸರಕು ಸಾಗಣೆ ವಾಹನಗಳಿಗೆ ನಿಷೇಧ

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಹಾಗೂ ನೆದರ್ಲೆಂಡ್ಸ್​ ನಡುವಿನ ಪಂದ್ಯಕ್ಕೆ ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಮೈದಾನದ ಸುತ್ತಮುತ್ತ ಸರಕು ಹಾಗೂ ಸಾಗಣಿಕೆ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ. ವಿಶ್ವಕಪ್‌ನಲ್ಲಿ ಲೀಗ್ ಹಂತದ ಮತ್ತು ಭಾರತ ತಂಡದ ಕೊನೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಯಾವುದೇ ರೀತಿಯ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗಿದೆ. ಕ್ಯಾಬ್​ಗಳಿಗೆ ಪಿಕ್ ಅಪ್ ಅಂಡ್ ಡ್ರಾಪ್ ಸ್ಥಳಗಳನ್ನ ಗುರುತಿಸಲಾಗಿದೆ. ವಾರಾಂತ್ಯ …

Read More »

ಯಡಿಯೂರಪ್ಪರನ್ನು ಬಳಸಿಕೊಳ್ಳಲು ವಿಜಯೇಂದ್ರಗೆ ಪಟ್ಟ: ಎಂ.ಬಿ ಪಾಟೀಲ್

ಬೆಂಗಳೂರು : ಯಡಿಯೂರಪ್ಪರನ್ನು ಬಳಸಿಕೊಳ್ಳಲು ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್‌ ನಾಯಕರು ನಾಟಕವಾಡ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ರಾಜ್ಯಾಧ್ಯಕ್ಷರು ಇದ್ದರು. ನಾವು ಕೇಳಿದ್ದು ವಿಪಕ್ಷ ನಾಯಕನನ್ನು. ಆದರೆ, ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಅದು ಅವರ ಪಕ್ಷದ ಆಂತರಿಕ ವಿಚಾರ. ಈ ಹಿಂದೆ ಲಿಂಗಾಯತರೇ ರಾಜ್ಯದ ಸಿಎಂ …

Read More »

ಡಿಕೆಶಿಯವರೊಂದಿಗೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದ ಜಾರಕಿಹೊಳಿ

ಬೆಳಗಾವಿ: ನಾನು ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ (D.K. Shivakumar) ಅವರೊಂದಿಗೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸತೀಶ್​ ಜಾರಕಿಹೊಳಿ (Sathish jarakiholi) ಹೇಳಿದರು. ಬೆಳಗಾವಿ (belagavi) ರಾಜಕಾರಣದಲ್ಲಿ ಬೇರೆಯವರ ಹಸ್ತಕ್ಷೇಪದ ಕುರಿತು ಮುನಿಸಿಕೊಂಡಿರುವ ಜಾರಕಿಹೊಳಿ ಬೆಳಗಾವಿಯಲ್ಲಿ ಮಾತನಾಡಿ, ಈ ಬಗ್ಗೆ ಪಕ್ಷದ ವತಿಯಿಂದ ಚರ್ಚೆ ನಡೆಯಬೇಕು. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದರು. ಡಿ.ಕೆ. ಶಿವಕುಮಾರ್ ಅವರು ಹಲವು ಬಾರಿ …

Read More »

ಸರ್ಕಾರದಲ್ಲಿ ಹಣ ಇಲ್ಲ, ದಿವಾಳಿಯಾಗಿರುವುದು ಸ್ಪಷ್ಟ:B.S.Y.

ಬೆಂಗಳೂರು: ರಾಜ್ಯದಲ್ಲಿ ಬರಗಾಲ (Drought) ಆವರಿಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ (BJP) ಮುಖಂಡರು ಬರ ಅಧ್ಯಯನ ನಡೆಸುತ್ತಿದ್ದಾರೆ. ಬರ ಅಧ್ಯಯನದ ನಂತರ ಸರ್ಕಾರಕ್ಕೂ ಒಂದು ವಾಸ್ತವದ ಚಿತ್ರಣ ನೀಡುತ್ತೇವೆ. ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಸರ್ಕಾರದಲ್ಲಿ ಹಣ ಇಲ್ಲ, ದಿವಾಳಿಯಾಗಿರುವುದು ಸ್ಪಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಎಸ್ ವೈ, …

Read More »

ಯಾರೋ ಒಬ್ಬನಿಂದ ಪಕ್ಷ ಬೆಳೆಯಲ್ಲ: ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾಗಿರುವ ಬಗ್ಗೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ. ಭಾರತೀಯ ಜನತಾ ಪಾರ್ಟಿ ಯಾರ ಮೇಲೂ ನಿಂತಿಲ್ಲ ಎಂದಿದ್ದಾರೆ.   ಪ್ರಧಾನಿ ನರೇಂದ್ರ ಮೋದಿ ಅವರೂ ಬಿಜೆಪಿಯಲ್ಲಿ ಒಬ್ಬ ಕಾರ್ಯಕರ್ತರು. ನಾನು ಕೂಡ ಕಾರ್ಯಕರ್ತ. ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ 28 ಸ್ಥಾನ ಗೆಲ್ಲುತ್ತೇವೆ. ಸಾಮೂಹಿಕ ನೇತೃತ್ವದಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿ …

Read More »

ಹೊಸ ಬಾಟಲಿಯಲ್ಲಿ ಹಳೆ ವೈನ್: ವಿಜಯೇಂದ್ರ ನೇಮಕಕ್ಕೆ ಸಚಿವ ಸುಧಾಕರ್ ವ್ಯಂಗ್ಯ

ಚಿತ್ರದುರ್ಗ : ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಡಿ. ಸುಧಾಕರ್ ‘ಹೊಸ ಬಾಟಲಿಯಲ್ಲಿ ಹಳೆ ವೈನ್’ ಎಂದು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಆಂತರಿಕ ವಿಚಾರದಲ್ಲಿ ನಾವು ಮೂಗು ತೋರಿಸುವುದಿಲ್ಲ. ಕಾಂಗ್ರೆಸ್‌ನ ಸಿದ್ಧಾಂತವೇ ಬೇರೆ ಬಿಜೆಪಿಯ ಸಿದ್ಧಾಂತವೇ ಬೇರೆ. ಬಿಜೆಪಿ ಸಮಾಜ ಒಡೆಯುವ ನೀತಿ ಹೊಂದಿದೆ. ಯಾರೇ ಬಂದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಂದರು.

Read More »