Breaking News
Home / ರಾಜಕೀಯ (page 232)

ರಾಜಕೀಯ

ಭಾರತ-ಆಸೀಸ್ ಪಂದ್ಯ; ಟಿಕೆಟ್‌ಗಾಗಿ ಮುಗಿಬಿದ್ದ ಯುವಜನತೆ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯದ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆ ಆಫ್‌ಲೈನ್‌ನಲ್ಲಿ ಪ್ರಾರಂಭವಾಗಿದ್ದು, ಖರೀದಿಗೆ ಯುವಜನತೆ ಮುಗಿಬಿದ್ದ ದೃಶ್ಯ ಕಂಡುಬಂತು. ವಿಶಾಖಪಟ್ಟಣಂ(ಆಂಧ್ರಪ್ರದೇಶ): ನಗರದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ಟಿಕೆಟ್‌ಗಳ ಮಾರಾಟ ಆಫ್‌ಲೈನ್‌ನಲ್ಲಿ ಶುರುವಾಗಿದೆ. ಇದೇ ತಿಂಗಳ 23ರಂದು ನಗರದ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಆನ್‌ಲೈನ್ ಟಿಕೆಟ್‌ಗಳ ಮಾರಾಟ ಈಗಾಗಲೇ ಪೂರ್ಣಗೊಂಡಿದೆ. ಇಂದಿನಿಂದ ಆಫ್‌ಲೈನ್‌ನಲ್ಲಿ ಸೇಲ್ ನಡೆಯುತ್ತಿದ್ದು, ಕ್ರಿಕೆಟ್‌ ಪ್ರೇಮಿಗಳು ಕೌಂಟರ್‌ಗಳತ್ತ ಮುಗಿಬಿದ್ದರು. …

Read More »

ದಂಡ ಕಟ್ಟಿದ್ದೇನೆ, ಕರೆಂಟ್​ ಕಳ್ಳ ಎನ್ನುವುದನ್ನು ನಿಲ್ಲಿಸಿ: H.D.K.

ಬೆಂಗಳೂರು: “ದೀಪಾವಳಿ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಅಚಾತುರ್ಯದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈಗಾಗಲೇ ನನಗೆ ಕರೆಂಟ್​ ಕಳ್ಳ ಎನ್ನುವ ಲೇಬಲ್​ ಅನ್ನು ಸಿಎಂ, ಡಿಸಿಎಂ ಹಾಗೂ ಅವರ ಪಟಾಲಂ ಸೇರಿ ಇಟ್ಟಿದ್ದಾರೆ. ನನ್ನನ್ನು ಕರೆಂಟ್​ ಕಳ್ಳ ಎನ್ನುವ ಇವರ ಆರೋಪಗಳಿಗೆಲ್ಲ ನಾನು ಹೆದರಲ್ಲ. ನಿಮ್ಮಷ್ಟು ಕಳ್ಳತನ ನಾನು ಮಾಡಿಲ್ಲ. ಬೆಸ್ಕಾಂ ನೀಡಿರುವ ಬಿಲ್​ ಹಾಗೂ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ಕರೆಂಟ್​ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು” ಎಂದು ಮಾಜಿ …

Read More »

ಜಮೀರ್ ಹೇಳಿಕೆ ಖಂಡನೀಯ, ಇಂಥ ತಪ್ಪಾಗದಂತೆ ಎಚ್ಚರಿಕೆ ವಹಿಸಲಿ: ವಿಜಯೇಂದ್ರ

ಬೆಂಗಳೂರು: “ಜಮೀರ್ ಅಹಮದ್ ಯಾವುದೋ ಒಂದು ಸಮುದಾಯದ ಜವಾಬ್ದಾರಿ ತಗೊಂಡಿಲ್ಲ. ನೀವು ನಿಮ್ಮ ಅಂತರಾಳದ ಮಾತು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಇನ್ನು ಮುಂದೆ ಈ ರೀತಿ ಮಾತಾಡದಂತೆ ಎಚ್ಚರಿಕೆ ವಹಿಸಿ” ಎಂದು ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು. ಜಮೀರ್ ಅಹಮ್ಮದ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಕುರಿತು ಶಿವಾನಂದ ವೃತ್ತದಲ್ಲಿರುವ ಅಪಾರ್ಟ್​ಮೆಂಟ್​​ನಲ್ಲಿ …

Read More »

ಈ ಸಾರಿ ವರ್ಲ್ಡ್​ ಕಪ್​ ನಮ್ದೇ’: ರಜಿನಿಕಾಂತ್​ ವಿಶ್ವಾಸ

ಅಹಮದಾಬಾದ್(ಗುಜರಾತ್)​: ತಮಿಳು ಸೂಪರ್ ​ ಸ್ಟಾರ್ ರಜಿನಿಕಾಂತ್ ಅವರು ಕ್ರಿಕೆಟ್​ನ ಕಟ್ಟಾ ಅಭಿಮಾನಿ. ತಮ್ಮ ನೆಚ್ಚಿನ ಕ್ರಿಕೆಟಿಗರ ಬಗ್ಗೆಯೂ ಆಗಾಗ ಅವರು ಮಾತನಾಡುತ್ತಾರೆ. ಇತ್ತೀಚೆಗೆ ನಡೆದ ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯಕ್ಕೆ ಕುಟುಂಬಸಮೇತರಾಗಿ ಆಗಮಿಸಿ ಸಂಭ್ರಮಿಸಿದ್ದರು. ಮುಂಬೈನಿಂದ ಚೆನ್ನೈಗೆ ಮರಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಕಪ್ ಫೈನಲ್​ ಕುರಿತು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು. ರಜಿನಿಕಾಂತ್​ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಕುರಿತು ಮಾತನಾಡುತ್ತಾ, ನಾವು ಮೊದಲು ಸ್ವಲ್ಪ ಹೊತ್ತು ಟೆನ್ಷನ್ ಆಗಿದ್ದೆವು. ಪ್ರತಿ ವಿಕೆಟ್ …

Read More »

ಡಿಸೆಂಬರ್ ನಿಂದ ಒಂದು ಲೋಟ ರಾಗಿ ಮಾಲ್ಟ್ ಶಾಲಾ ವಿದ್ಯಾರ್ಥಿ’ಗಳಿಗೆ

ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆಯನ್ನು ನಿವಾರಿಸೋ ನಿಟ್ಟಿನಲ್ಲಿ ಶೀಘ್ರವೇ ಪೌಷ್ಠಿಕಾಂಶ ಯುಕ್ತ ಆಹಾರ ನೀಡೋದಾಗಿ ಸರ್ಕಾರ ಹೇಳಿತ್ತು. ಅದರ ಭಾಗವಾಗಿ ಡಿಸೆಂಬರ್ ನಿಂದ ಒಂದು ಲೋಟ ರಾಗಿ ಮಾಲ್ಟ್ ವಿತರಿಸೋದಕ್ಕೆ ನಿರ್ಧರಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡೀದಂತ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಅವರು, ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ವಾರದಲ್ಲಿ 2 ದಿನ ಮೊಟ್ಟ, ಚಿಕ್ಕಿ-ಬಾಳೆಹಣ್ಣು ನೀಡಲಾಗುತ್ತಿದೆ. ಇದಲ್ಲದೇ ಡಿಸೆಂಬರ್ …

Read More »

ವಿಧಾನಸಭೆ ಚುನಾವಣೆ: ಮಧ್ಯಪ್ರದೇಶದ 230, ಛತ್ತೀಸ್​ಗಢದ 70 ಕ್ಷೇತ್ರಗಳಿಗೆ ಮತದಾನ

ಭೋಪಾಲ್/ರಾಯಪುರ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇಂದು ಮಹತ್ವದ ದಿನ. ಮಧ್ಯಪ್ರದೇಶದ ಎಲ್ಲ 230 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್​ಗಢ 70 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ಪ್ರಗತಿಯಲ್ಲಿದೆ. ಇದರೊಂದಿಗೆ ಮಿಜೋರಾಂ ಸೇರಿ ಮೂರು ರಾಜ್ಯಗಳ ಮತ ಸಮರಕ್ಕೆ ತೆರೆ ಬೀಳಲಿದೆ. ರಾಜಸ್ಥಾನ (ನ.25) ಹಾಗೂ ತೆಲಂಗಾಣದಲ್ಲಿ (ನ.30) ಮತದಾನ ಇನ್ನಷ್ಟೇ ನಡೆಯಬೇಕಿದೆ.     ನವೆಂಬರ್​ 7ರಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 78ರಷ್ಟು …

Read More »

ನೇಜಾರು ಕೊಲೆ ಪ್ರಕರಣ: ಮಹಜರು ವೇಳೆ ಸಾರ್ವಜನಿಕರ ಆಕ್ರೋಶ, ಪೊಲೀಸರಿಂದ ಲಾಠಿ ಪ್ರಹಾರ

ಉಡುಪಿ: ನೇಜಾರು ಕೊಲೆ ಪ್ರಕರಣದ ಆರೋಪಿಯನ್ನು ಮಹಜರು ಮಾಡಲು ನೇಜಾರು ಕೊಲೆ ನಡೆದ ಸ್ಥಳಕ್ಕೆ ಕರೆ ತರಲಾಗಿತ್ತು. ಮಹಜರು ಬಳಿಕ ಆರೋಪಿ ಹಿಂದಕ್ಕೆ ಕರೆದುಕೊಂಡು ಹೋಗುವ‌ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಪೊಲೀಸ್ ವಾಹನದತ್ತ ನುಗ್ಗಿ ಆರೋಪಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಆಕ್ರೋಶಿತ ಗುಂಪನ್ನು ಚದುರಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಆರೋಪಿಯನ್ನು ಗಲ್ಲಿಗೇರಿಸಿ ಎಂದು ರಸ್ತೆ ತಡೆದು ಪ್ರತಿಭಟನೆ …

Read More »

ಪತ್ರಕರ್ತರ ಬಗ್ಗೆ ಸಚಿವೆ ಹೆಬ್ಬಾಳ್ಕರ ಅವಮಾನಕರ ಹೇಳಿಕೆ: ಎಐಸಿಸಿ ಹಾಗೂ ಸಿಎಂಗೆ ದೂರು ನೀಡಲು ಪತ್ರಕರ್ತರ ನಿರ್ಧಾರ

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಪತ್ರಕರ್ತರು ಅಪ್ರಭುದ್ಧರು ಎನ್ನುವ ಅರ್ಥದಲ್ಲಿ ನೀಡಿದ್ದ ಹೇಳಿಕೆಯನ್ನ ಖಂಡಿಸಿ ಇವತ್ತು ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಕರ್ತರಿಂದ ಖಂಡನಾ ಸಭೆ ನಡೆಸಲಾಯಿತು. ಸಭೆಯಲ್ಲಿ 42 ಕ್ಕೂ ಅಧಿಕ ಹಿರಿಯ ಪತ್ರಕರ್ತರು ಭಾಗಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಲಾಯಿತು. ಸಚಿವೆ ಹೆಬ್ಬಾಳ್ಕರ ಅವರು ಇತ್ತೀಚೆಗೆ ಪತ್ರಕರ್ತರ ಜೊತೆ ನಡೆದುಕೊಳ್ಳುತ್ತಿರುವ ನಡುವಳಿಕೆ ಬಗ್ಗೆ ಹಿರಿಯ ಪತ್ರಕರ್ತರು …

Read More »

ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಹಸೆಮಣೆ ಏರಿದ ವಾಸುಕಿ ವೈಭವ್

 ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರಿಂದು ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಅವರ ಕೈ ಹಿಡಿದಿದ್ದಾರೆ. ‘ರಾಮಾ ರಾಮಾ ರೇ’ ಸಿನಿಮಾ ಮೂಲಕ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಾಸುಕಿ ವೈಭವ್ ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಹಸೆಮಣೆ ಏರಿದ್ದಾರೆ. ರಾಮಾ ರಾಮಾ ರೇ ಸಿನಿಮಾದ ಸಕ್ಸಸ್ ಜೊತೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ವಾಸುಕಿ ವೈಭವ್ ಅವರೀಗ ದಾಂಪತ್ಯ …

Read More »

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ, ನಾಳೆಯೇ ಹೆಸರು ಪ್ರಕಟವಾಗಲಿದೆ: ಆರ್ ಅಶೋಕ್

ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಆಯ್ಕೆ ಆಗಿ ಒಂದು ವಾರ ಕಳೆದಿದೆ. ಇದರ ಬೆನ್ನಲ್ಲೇ ಈವರೆಗೆ ಖಾಲಿ ಉಳಿದಿರುವ ಪ್ರತಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆದಿದೆ.”ಹೈಕಮಾಂಡ್ ವೀಕ್ಷಕರ ಸಮ್ಮುಖದಲ್ಲಿ ನಾಳೆ ಪ್ರತಿಪಕ್ಷ ನಾಯಕರ ಆಯ್ಕೆಯಾಗಲಿದೆ. ನನ್ನನ್ನೂ ಸೇರಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದೇವೆ. ಪಕ್ಷ ಯಾರಿಗೇ ಅವಕಾಶ ನೀಡಿದರೂ ನಾನು ಸ್ವಾಗತ ಮಾಡುತ್ತೇನೆ. ಅವರಿಗೆ ಸಂಪೂರ್ಣ ಸಹಕಾರವನ್ನೂ …

Read More »