Breaking News
Home / ಮೂಡಲಗಿ (page 22)

ಮೂಡಲಗಿ

ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ನಂಬಿದ ಭಕ್ತರನ್ನು ಕಾಯುವ ವಿಶ್ವ ಚೇತನ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರರಿಂದ ಅನ್ನ ದಾಸೋಹ ಮಾಡಿದರು

ಗೋಕಾಕ್: ದೇಶದಲ್ಲಿ ದಿನದಿನಕ್ಕೆ ಅಟ್ಟಹಾಸ ಮೇರೆಯುವ ಮಹಾಮಾರಿ ಕೋರೊನಾ ವೈರಸ್ ಹರಡುವಿಕೆಯಿಂದ ದೇಶವ್ಯಾಪ್ತಿ ಲಾಕ್ ಡೌನ್ ಆಗಿದ್ದು ಗೋಕಾಕ್ ನಗರ್ ಪ್ರದೇಶ ದಲ್ಲಿ ಸಿಂಧೂಳ್ಳಿ ಮಠ ದವಾಖಾನೆಯ ಹಿಂದುಗಡೆ ಅಲೆಮಾರಿ ಜನಾಂಗದವರು ಕೂಲಿ ಕಾರ್ಮಿಕರು ವ್ಯಾಪಾರವಿಲ್ಲದೆ ಮತ್ತು ಊಟವಿಲ್ಲದೆ ಪರದಾಡುತ್ತಿದ್ದರು. ಅವರಿಗೆ ಶ್ರೀ ಬಸವಗೋಪಾಲ ನೀಲಮಾಣಿಕ ಬಂಡಿಗಣಿ ಮಠದ ದಾಸೋಹ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ ಅಪ್ಪಾಜಿ ಅವರಿಂದ ಅನ್ನದಾಸೋಹ ಮಾಡಲಾಯಿತು ಬಾಗಲಕೋಟ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಬಂಡಿಗಣಿಯ …

Read More »

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪೌರಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣೆ

ಮೂಡಲಗಿ: ವಿಶ್ವವ್ಯಾಪಿ ಜನ ಜೀವನ ಹದಗೆಟ್ಟಿರುವಾಗ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರ ಸೇವಾಕಾರ್ಯ ಮೆಚ್ಚುವಂತಹದು. ಇಂತಹ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆಯು ಶ್ಲಾಘನೀಯವಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ಎಂಬ ಮಹಾಮಾರಿ ವೈರಸ್ ವಿಶ್ವವನ್ನೆ ನಡುಗಿಸಿದೆ. ಸಾಮಾಜಿಕವಾಗಿ ನಗರದಲ್ಲಿ ಯಾವುದೇ ರೋಗಗಳು, …

Read More »

ಕೊರೋನಾ ಹಿನ್ನೆಲೆಯಲ್ಲಿ ಸೋಮವಾರ ದೂರವಾಣಿ ಮೂಲಕ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದರು. ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕಳೆದ ಜನೆವರಿಯಿಂದ ಬೆಂಗಳೂರಿನಲ್ಲಿರುವ  ಕೆಎಂಎಫ್ ಚೇರಮನ್  ಬಾಲಚಂದ್ರ ಜಾರಕಿಹೊಳಿ, ಕೊರೋನಾ ಹಿನ್ನೆಲೆಯಲ್ಲಿ ಸೋಮವಾರ ದೂರವಾಣಿ ಮೂಲಕ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದರು. ಮೂಡಲಗಿಯ ಈರಣ್ಣ ದೇವಸ್ಥಾನದ ಆವರಣದಲ್ಲಿ ಸೋಮವಾರ ದೂರವಾಣಿ ಮೂಲಕ ಮೂಡಲಗಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಲಾಕ್ ಡೌನ್ ಸಂಪೂರ್ಣವಾಗಿ ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪ್ರಸ್ತುತ ವಿಶ್ವದಾದ್ಯಂತ ಕಾಡುತ್ತಿರುವ ಪ್ರಬಲ ಕೊರೋನಾ ವೈರಸ್ ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ …

Read More »

ದ್ರಾಕ್ಷಿ ಹಣ್ಣು ವಿತರಿಸಿ ಕೊರೋನಾ ಜಾಗೃತಿ ಮೂಡಿಸಿದ ಕರುನಾಡು ಸೈನಿಕರು

  ಮೂಡಲಗಿ: ಮಹಾ ಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟಣದ ಸರಕಾರಿ ಆಸ್ಪತ್ರೆಯ ಸೇವಾ ಸಿಬ್ಬಂದಿಗಳಿಗೆ, ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮತ್ತು ಶಿವಾಪೂರ, ಹಳ್ಳೂರ ಗ್ರಾಮದ ಬಡ ಕುಟುಂಬ ಮತ್ತು ಜನತಾ ಪ್ಲಾಟದ ಗುಡಿಸಲು ನಿವಾಸಿಗಳಿಗೆ ಇಲ್ಲಿಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಮತ್ತು ಅದ್ಯಕ್ಷರಾದ ಸವಿತಾ ತುಕ್ಕನ್ನವರ ಅವರು ಮನೆ ಮನೆಗೆ ತೆರಳಿ 4ಕ್ವಿಂಟಲ್ ದ್ರಾಕ್ಷಿ ಹಣ್ಣು ಉಚಿತವಾಗಿ ವಿತರಿಸಿ ಮಾನವೀಯತೆ …

Read More »

ಮೂಡಲಗಿ ತಾಲೂಕಾಗಿ ಮರು ಘೋಷಣೆ : ಒಡೆದ ಗಾಜುಗಳ ಮೇಲೆ ಉರುಳು ಸೇವೆ ಗೈದು ಹರಕೆ ತಿರಿಸಿದ ಯುವಕ

ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಹೊಸ ತಾಲೂಕಾಗಿ ಮರು ಘೋಷಣೆಯಾದ ಪರಿಣಾಮ ಯುವಕನೋರ್ವ ಒಡೆದ ಗಾಜುಗಳ ಮೇಲೆ ಉರುಳು ಸೇವೆ ಮಾಡಿ ಹರಕೆ ತೀರಿಸಿದ ಘಟನೆ ನಡೆದಿದೆ ಮೂಡಲಗಿಯ ಯುವಕ ಸುರೇಶ ಬೆಳವಿ ಎಂಬುವವನೇ ಒಡೆದ ಗಾಜಿನ ಮೇಲೆ ಉರುಳು ಸೇವೆ ಮಾಡಿರುವ ಯುವಕ. ಈತ ಮೂಡಲಗಿ ತಾಲೂಕು ಕೇಂದ್ರವಾಗಿ ಘೋಷಣೆಯಾದ್ರೆ ಒಡೆದ ಗಾಜಿನ ಮೇಲೆ ಉರುಳು ಸೇವೆ ಮಾಡುತ್ತೇನೆಂದು ಹರಕೆ ಹೊತ್ತಿಕೊಂಡಿದ್ದನಂತೆ. ಅದರಂತೆ ಮೂಡಲಗಿ ತಾಲೂಕು ಕೆಂದ್ರವಾದ …

Read More »

ಉಚಿತ ಮಾಸ್ಕ್ ವಿತರಣೆ ಎನ್ ಎಸ್ ಎಫ್ ತಂಡದಿಂದ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕರು ಮಾಜಿ ಸಚಿವರು, ಕೆಎಂಎಫ್ ಅಧ್ಯಕ್ಷರು ಶ್ರೀಬಾಲಚಂದ್ರಅಣ್ಣಾ ಜಾರಕಿಹೊಳಿ ಅವರ ಎನ್ ಎಸ್ ಎಫ್ ತಂಡದಿಂದ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು… ಈ ಸಂದರ್ಭದಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ್,ಕ್ಷೇತ್ರ ಶಿಕ್ಷಣ ಅಧಿಕಾರಿ ಅಜಿತ್ ಮನ್ನಿಕೇರಿ ಸರ್, ಸಿಪಿಐ ವೆಂಕಟೇಶ್ ಮುರನಾಳ ಸರ್, ಹಾಗೂ ಸಮಸ್ತ ಪಟಗುಂದಿ ಗ್ರಾಮದ ಹಿರಿಯರು, ಬಿಜೆಪಿ ಕಾರ್ಯಕರ್ತರು, …

Read More »

ಸರ್ಕಾರದ ಆದೇಶವನ್ನು ಪಾಲಿಸಿ:ಎನ್ ಎಸ್ ಎಫ್ ತಂಡದಿಂದ ಮನವಿ

ಮೂಡಲಗಿ: ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಕೊರೊನಾ ಸೊಂಕು ಧೃಡಪಟ್ಟಿರುವ ಹಿನ್ನಲೆಯಲ್ಲಿ ಮೂಡಲಗಿ ತಾಲೂಕಿನ ಕೊನೆಯ ಭಾಗವಾಗಿರುವ ಯಾದವಾಡ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ತಾಲೂಕಾಡಳಿತ ಮತ್ತು ಟೀಮ್ ಎನ್‍ಎಸ್‍ಎಫ್ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಬುಧವಾರದಂದು ಮುಧೋಳದ ವ್ಯಕ್ತಿಯೊರ್ವನಿಗೆ ಕೊರೊನಾ ವೈರಸ್ ಕಂಡುಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮುಧೋಳಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ವಿಶೇಷ ಮನವಿಯನ್ನು ಅಧಿಕಾರಿಗಳ ತಂಡ ಮಾಡಿಕೊಂಡಿತ್ತು. ಕೊರೊನೊ ಹಿನ್ನಲೆಯಲ್ಲಿ …

Read More »

ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿ

ಮೂಡಲಗಿ ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿಯಾಗಿದ್ದು ಮಾದರಿ ಕೂಡ ವಾಗಿದೆ. ಈಗ ಕರೋನಾ ಕಂಟಕದಿಂದ ದೇಶ ಗಂಡಾಂತರದಲ್ಲಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾ ಮಾರಿಯನ್ನು ಓಡಿಸಲು ನಮಗೆ ಸಹಕಾರ ನೀಡಿ . ದಿನದಿಂದ ದಿನಕ್ಕೆ ಕೊರೋನಾ ಸೋಂಕು ನಿರಂತರ ಹರಡುತ್ತಿದೆ ಆದ ಕಾರಣ ಮುಸ್ಲಿಂ ಬಾಂಧವರು ನಾಳೆ ದಿ.9ರಂದು ಆಚರಿಸುವ ಶಭೆ ಏ ಬಾರಾತ ನ್ನು ಮಸೀದಿ ಕಬ್ರಸ್ಥಾನಗಳಿಗೆ ಹೋಗದೆ ತಮ್ಮ ತಮ್ಮ ಮನೆಯಲ್ಲಿ ನಮಾಜ …

Read More »

ಏಪ್ರಿಲ್ 14ರವರೆಗೆ ಬಡ ಕುಟುಂಬಗಳಿಗೆ ಉಚಿತವಾಗಿ ಒಂದು ಲೀಟರ್ ಹಾಲನ್ನು ವಿತರಿಸಲಾಗುತ್ತಿದೆ..

ಮೂಡಲಗಿ: ಮಹಾಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅರಭಾವಿ ಕ್ಷೇತ್ರದ ಪಟ್ಟಣ ಪಂಚಾಯತಿಗಳಾದ ಅರಭಾವಿ, ಕಲ್ಲೋಳಿ ಹಾಗೂ ನಾಗನೂರ ಪಟ್ಟಣದ ಬಡ ಕುಟುಂಬಗಳು ಮತ್ತು ಕೊಳಗೇರಿ ನಿವಾಸಿಗಳಿಗೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉಚಿತವಾಗಿ 2450 ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ವಿತರಿಸಲು ಸೂಚನೆ ನೀಡಿದ್ದಾರೆ ಎಂದು ಯುವ ಧುರೀಣ ನಾಗೇಶ ಶೇಖರಗೋಳ ತಿಳಿಸಿದರು. ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆ.ಎಮ್.ಎಫ್ ದಿಂದ ಉಚಿತ ನಂದಿನಿ …

Read More »

ಕೆ.ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿ ಪಟ್ಟಣದಲ್ಲಿ ಉಚಿತವಾಗಿ ನಂದಿನಿ ಹಾಲನ್ನು ವಿತರಿಸಲಾಯಿತು.

ಮೂಡಲಗಿ: ಕೋವಿಡ್19 ಸೊಂಕಿನ ಹಿನ್ನೆಲೆಯಲ್ಲಿ ರಾಜದಲ್ಲಿ ಲಾಕ್ ಡೌನ್ ಘೋಷಿಸಲಾಗಿದು, ಹಾಲು ಒಕ್ಕೂಟದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ಕೆ.ಎಮ್ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿ ಪಟ್ಟಣದಲ್ಲಿರುವ ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೋಳಗೇರಿ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಉಚಿತವಾಗಿ ನಂದಿನಿ ಹಾಲನ್ನು ವಿತರಿಸಲಾಯಿತು. ಪಟ್ಟಣದ ಈರಣ್ಣಾ ನಗರ, ವಿಜಯ ನಗರ, ವಿದ್ಯಾನಗರ, ವೆಂಕಟೇಶ್ವರ ನಗರ, ಗಂಗಾ ನಗರ, ರಾಜೀವ ಗಾಂಧಿ ನಗರ, ಕಜಾಳ ಮಡ್ಡಿ, ವಡ್ಡರ ಓಣಿಯಲ್ಲಿರುವ …

Read More »