Breaking News

ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿ

Spread the love

ಮೂಡಲಗಿ ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿಯಾಗಿದ್ದು ಮಾದರಿ ಕೂಡ ವಾಗಿದೆ. ಈಗ ಕರೋನಾ ಕಂಟಕದಿಂದ ದೇಶ ಗಂಡಾಂತರದಲ್ಲಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾ ಮಾರಿಯನ್ನು ಓಡಿಸಲು ನಮಗೆ ಸಹಕಾರ ನೀಡಿ . ದಿನದಿಂದ ದಿನಕ್ಕೆ ಕೊರೋನಾ ಸೋಂಕು ನಿರಂತರ ಹರಡುತ್ತಿದೆ ಆದ ಕಾರಣ ಮುಸ್ಲಿಂ ಬಾಂಧವರು ನಾಳೆ

ದಿ.9ರಂದು ಆಚರಿಸುವ ಶಭೆ ಏ ಬಾರಾತ ನ್ನು ಮಸೀದಿ ಕಬ್ರಸ್ಥಾನಗಳಿಗೆ ಹೋಗದೆ ತಮ್ಮ ತಮ್ಮ ಮನೆಯಲ್ಲಿ ನಮಾಜ ಮಾಡಬೇಕು ಅದರಂತೆ ಕ್ರೈಸ್ತ ಬಾಂಧವರು ಆಚರಿಸುವ ಗುಡ್ ಫ್ರೈಡೆಯ ದಿವಸ ಚರ್ಚ್ ಗೆ ಹೋಗದೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ವೃತ್ತ ನೀರೀಕ್ಷಕ ವೇಂಕಟೇಶ ಮುರನಾಳ ಹೇಳಿದರು.

ಮೂಡಲಗಿ ಪೋಲಿಸ್ ಠಾಣೆಯಲ್ಲಿ ಕೊರೋನಾ ಕುರಿತು ಮುಸ್ಲಿಂ ಮತ್ತು ಕ್ರೈಸ್ತ ಭಾಂದವರಿಗೆ ನಡೆಸಿದ ಸಭೆಯಲ್ಲಿ ಮಾತನಾಡಿ ಮಸೀದಿ,ಚರ್ಚ್ ಗಲ್ಲಿ ಸಾಮೂಹಿಕ ಪ್ರಾರ್ಥನೆ

ಮಾಡಬಾರದು . ಎಂದು ಸರಕಾರ ಆದೇಶ ನೀಡಿದೆ ಆದ್ದರಿಂದ. ತಾವು ತಮ್ಮ ಮನೇಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಲಹೆ ನೀಡಿದರು.

ಸಭೆಯಲ್ಲಿ ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ,ಸಮಾಜ ಮುಖಂಡರು ಇದ್ದರು


Spread the love

About Laxminews 24x7

Check Also

ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ

Spread the loveವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ   ಬೆಂಗಳೂರು : ವಸತಿ ರಹಿತರಿಗೆ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ