ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ನಾಳೆ ಸಂಜೆ 4 ಗಂಟೆಗೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದು, ಜಿಲ್ಲಾಸ್ಪತ್ರೆಗಳ ಸ್ಥಿತಿಗತಿ, ಆಕ್ಸಿಜನ್ ವ್ಯವಸ್ಥೆ, ಬೆಡ್, ಚಿಕಿತ್ಸೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ತಮ್ಮದೇ ಉಸ್ತುವಾರಿ ಜಿಲ್ಲೆಯಲ್ಲಿ …
Read More »ಕರ್ನಾಟಕದಲ್ಲೂ SSLC ಮತ್ತು PUC ಪರೀಕ್ಷೆ ರದ್ದು ಆಗಲಿದೆಯೇ ?
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಗದಿಯಂತೆ ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಇಂದು ಪಿಯುಸಿ ಮತ್ತು ಎಸ್‌ಎಸ್‌ಎಲ್ಸಿ ಪರೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗ್ತಿದೆ. ಹೀಗಾಗಿ ನಿಗದಿಯಾದ ದಿನಾಂಕದಲ್ಲಿ ಪರೀಕ್ಷೆ ನಡೆಸುವ ಕುರಿತು …
Read More »ಫೇಸ್ಬುಕ್ನಲ್ಲಿ ಪರಿಚಯ ಮಾಡ್ಕೊಂಡು ವಿಡಿಯೋ ಕಾಲ್ನಲ್ಲಿ ನೀಚ ಕೃತ್ಯ :ಈ ಕಿಲಾಡಿ ಲೇಡಿ ಇಂದ ಹುಷಾರಾಗಿರಿ….
ನಲ್ಗೊಂಡ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು, ನಂಬಿಸಿ ಹಣ ಪಡೆದುಕೊಂಡು ವಂಚಿಸುತ್ತಿದ್ದ ಕಿಲಾಡಿ ಲೇಡಿಯನ್ನು ನಲ್ಗೊಂಡ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಆರೋಪಿಯನ್ನು ತೆಲಂಗಾಣದ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿ ನಿವಾಸಿ ಪಂತಂಗಿ ಮಹೇಶ್ವರಿ ಅಲಿಯಾಸ್ ಧರಣಿ ರೆಡ್ಡಿ ಎಂದು ಗುರುತಿಸಲಾಗಿದೆ. ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿರುವ ಮಹೇಶ್ವರಿ, ಅನೇಕ ಯುವಕರಿಗೆ ಮದುವೆ ಹೆಸರಿನಲ್ಲಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾಳೆ. ಇತ್ತೀಗೆಚೆ ಈಕೆ ಹೈದರಾಬಾದ್ನ ಕೊಂಪಲ್ಲಿ ಮೂಲದ …
Read More »ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ.
ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ. ಫಲಿತಾಂಶ ಬಿಜೆಪಿ ಆತ್ಮಾವಲೋಕನ ಮಾಡುವಂತೆ ಮಾಡಿದೆ. ಜನರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕೇವಲ ಅನುಕಂಪದ ಮತಗಳಿಂದ ಮಂಗಲಾ ಅಂಗಡಿ ಗೆದ್ದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮತ್ತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ. ಗೋಕಾಕ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬಿಜೆಪಿ ಶಾಸಕರೇ ಇರುವ …
Read More »ಬೆಳಗಾವಿಯಲ್ಲಿ ಬದಲಾದ ಚಿತ್ರಣ ; ಮಂಗಳಾ ಅಂಗಡಿಗೆ ಹಿನ್ನಡೆ, ಜಾರಕಿಹೊಳಿಗೆ ಮುನ್ನಡೆ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆ ಗಳಿಸಿದ್ದಾರೆ. ಎರಡರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ಬೆಳಗಾವಿ ದಕ್ಷಿಣ ಹಾಗೂ ಗೋಕಾಕ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮುಂದಿದ್ದಾರೆ. ಉಳಿದಂತೆ ಅರಭಾವಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ- ಯಲ್ಲಮ್ಮ ಹಾಗೂ ರಾಮದುರ್ಗದಲ್ಲಿ ಕಾಂಗ್ರೆಸ್ ಮುನ್ನಡೆ …
Read More »ಸೋಲು, ಗೆಲುವನ್ನು ಒಪ್ಪಬೇಕು, ಮಮತಾಗೆ ಕೊಡಬಾರದ ಕಾಟ ನೀಡಿದ್ದರು – ಡಿಕೆಶಿ
ಬೆಂಗಳೂರು: ನಾವು ನೀವೆಲ್ಲಾ ಫಲಿತಾಂಶ ನೋಡ್ತಿದಿವಿ ಸೋಲನ್ನು ಒಪ್ಪಬೇಕು. ಗೆಲುವನ್ನು ಒಪ್ಪಬೇಕು ಇದು ಪ್ರಜಾಪ್ರಭುತ್ವದ ನಿಯಮವಾಗಿದೆ. ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಕಾರ್ಯಕರ್ತರು ಯಾರೂ ಸಂಭ್ರಮ ಮಾಡಬಾರದು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ. ಬೈ ಎಲೆಕ್ಷನ್ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ್‍ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ. …
Read More »ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ ಇಲ್ಲಾ ಸಾರ್ 30 ಸಾವಿರ ಓಟ್‍ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ
ಬೆಂಗಳೂರು: ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ ಉಪಚುನಾವಣೆಯಲ್ಲಿ ಇಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಗೆಲುವಿನ ನಗೆಬೀರಿರುವ ಕಾಂಗ್ರೆಸ್ ಬೆಳಗಾವಿ ಕ್ಷೇತ್ರದ ರಿಸಲ್ಟ್‍ಗಾಗಿ ಕಾಯುತ್ತಿದೆ. ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ. ಇಲ್ಲಾ ಸಾರ್ 30 ಸಾವಿರ ಓಟ್‍ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಒಳ್ಳೆದಾಗಲಿ ಗೆದ್ದು ಬಾ ಎಂದ ಸಿದ್ದರಾಮಯ್ಯ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಮಸ್ಕಿ …
Read More »30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಅಂತ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರಿಗೆ ಫೋನ್ ಕಾಲ್..
ಸತೀಶ್ ಜಾರಕಿಹೊಳಿಗೆ ಕರೆ ಮಾಡಿದ ಸಿದ್ದರಾಮಯ್ಯ ಏನಯ್ಯ ಟೆನ್ಶನ್ ಕೊಡ್ತಿದಿಯ ಅಂದರಂತೆ, ಏನಿಲ್ಲ ಸರ್ ಮೂವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಅಂದ ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಚುನಾವಣೆ ಕ್ಷಣ ಕ್ಷಣಕ್ಕೂ ಹೊಸ ತಿರುವು ಮೂಡಿಸುತ್ತಿದೆ ಇಲ್ಲಿಯವರೆಗೂ 64 ರೌಂಡ ಮತದಾನ ಮುಗಡಿದ್ದು ಇನ್ನು ಕೆಲವು ಸುತ್ತುಗಳು ಬಾಕಿ ಇವೆ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಅಂತ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರಿಗೆ ಫೋನ್ …
Read More »B negative ಪ್ಲಾಸ್ಮಾಗಾಗಿ ಡಿಸಿಪಿ ಇಶಾ ಪಂತ್ ಹುಡುಕಾಟ.. ಸಹಾಯಕ್ಕಾಗಿ ಮನವಿ
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಬೆಡ್ ಇಲ್ಲ, ಆಕ್ಸಿಜನ್ ಕೊರತೆ ಮುಂತಾದ ಸಮಸ್ಯೆಗಳಿಂದ ಕೊರೊನಾ ವಾರಿಯರ್ಸ್ ಪರದಾಡುವಂತಾಗಿದೆ. ಇದೀಗ ಸ್ವತಃ ಐಪಿಎಸ್ ಅಧಿಕಾರಿ ಇಶಾ ಪಂತ್ ಅವರಿಗೂ ಸೂಕ್ತ ಪ್ಲಾಸ್ಮಾ ದಾನಿಗಳು ಸಿಗುತ್ತಿಲ್ಲ. ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂತ್ ಕಳೆದ ಎರಡು ದಿನಗಳಿಂದ B-(ಬಿ ನೆಗೆಟಿವ್) ಪ್ಲಾಸ್ಮಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಎಲ್ಲಿಯೂ ಕೂಡ ಸಿಕ್ತಿಲ್ಲವಂತೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ …
Read More »ಉಪ ಚುನಾವಣೆ ಮತ ಎಣಿಕೆ ದಿನವೇ ಬೆಳಗಾವಿ ನಾಯಕರಿಗೆ ಸಿಎಂ ಶಾಕ್
ಬೆಂಗಳೂರು: ಉಪಚುನಾವಣೆ ಮತ ಎಣಿಕೆಯ ದಿನವೇ ಬೆಳಗಾವಿಯ ನಾಯಕರಿಗೆ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ. ಕರ್ನಾಟಕ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಇಂದು ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿ ಗೋವಿಂದ ಕಾರಜೋಳ, ಉಮೇಶ್ ಕತ್ತಿಗೆ ಬಾಗಲಕೋಟೆ, ಅರವಿಂದ ಲಿಂಬಾವಳಿಗೆ ಬೀದರ್, ಮುರುಗೇಶ್ ನಿರಾಣಿಗೆ ಕಲಬುರಗಿ, ಅಂಗಾರಗೆ ಚಿಕ್ಕಮಗಳೂರು, ಎಂಟಿಬಿ ನಾಗರಾಜ್ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ವಿಶೇಷ ಏನೆಂದರೆ ಬೆಳಗಾವಿ ಜಿಲ್ಲೆಯ 4 …
Read More »
Laxmi News 24×7