Home / ಜಿಲ್ಲೆ (page 699)

ಜಿಲ್ಲೆ

ಉಪಚುನಾವಣೆ ರಂಗೇರುತ್ತಿದ್ದು, ಸ್ಟಾರ್ ಪ್ರಚಾರಕ್ಕಾಗಿ  ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೆರಳಲಿದ್ದಾರೆ.

ಬೆಂಗಳೂರು : ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದ್ದು, ಸ್ಟಾರ್ ಪ್ರಚಾರಕ್ಕಾಗಿ  ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೆರಳಲಿದ್ದಾರೆ. ಈಗಾಗಲೇ ಮೂರು ದಿನಗಳ ಕಾಲ ಪ್ರಚಾರ ನಡೆಸಿದ ಶಾಸಕ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಮತ್ತೆ ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಎರಡು ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ. ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಇದೇ ದಿನಾಂಕ 30 ಹಾಗೂ 31 ರಂದು  …

Read More »

ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇವಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಅಂಜಲಿ, ದೀಪಕ್, ಪ್ರೇಮನಾಥ್, ಟೈಸನ್, ವಿನೋದ್, ಪ್ರಕಾಶ್, ಈಶ್ವರಿ ಎಂಬುವವರನ್ನು ಬಂಧಿಸಿದ್ದಾರೆ. ಪೈ ಲೇಔಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಂಧಿತರು ಶ್ರೀಮಂತರನ್ನು ಟಾರ್ಗೇಟ್ ಮಾಡಿ, ಪೈ ಲೇಔಟ್ ಗೆ ಕರೆತರುತ್ತಿದರು. ಅಲ್ಲಿಗೆ ಬಂದ ಬಳಿಕ ವ್ಯಕ್ತಿ ಯುವತಿ ಜೊತೆ ಇದ್ದಾಗ ಯುವತಿಯ ಪತಿ ಹಾಗೂ ಸ್ನೇಹಿತರೆಂದು ದಾಳಿ ಮಾಡಿ …

Read More »

ರಮೇಶ್ ನನಗೆ ಬಿಜೆಪಿಗೆ ಬರುವಂತೆ ಹೇಳಿದರು. ಆದರೆ ಎಲ್ಲರ ಮುಂದೆ ಕೈಮುಗಿದು ಅವರಿಗೆ ನಮಸ್ಕಾರ ಮಾಡಿದೆ.:ವಿನಯ್ ಕುಲ್ಕರ್ಣಿ

ಬೆಳಗಾವಿ: ಬಿಜೆಪಿಗೆ ಬರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕರೆದರು. ಆದರೆ ನಾನು ಅವರಿಗೆ ಕೈಮುಗಿದು ನಮಸ್ಕಾರ ಮಾಡಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲ್ಕರ್ಣಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ವಿನಯ್ ಕುಲ್ಕರ್ಣಿಗೆ ಬಿಜೆಪಿಗೆ ಬರುತ್ತೀಯಲ್ಲ ಎಂದು ಆಹ್ವಾನ ನೀಡಿದ ಪ್ರಸಂಗ ನಡೆಯಿತು. ಈ ವೇಳೆ ವಿನಯ್ ಕುಲ್ಕರ್ಣಿ, ಸಚಿವ ಜಾರಕಿಹೊಳಿಗೆ ಕೈಮುಗಿದು ಕುಳಿತುಕೊಂಡರು. …

Read More »

ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ 65 ಜನರಿಗೆ ರಾಜ್ಯೋತ್ಸವ ಪ್ರಕಟಿಸಿದೆ.

ಬೆಳಗಾವಿ:  ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ 65 ಜನರಿಗೆ ರಾಜ್ಯೋತ್ಸವ ಪ್ರಕಟಿಸಿದೆ. ಅದರಲ್ಲಿ  ಉತ್ತರ ಕರ್ನಾಟಕ 16 ಈ  ಪ್ರಶಸ್ತಿ ಭಾಜನರಾಗಿದ್ದಾರೆ. ಕಲೆ, ಸಾಹಿತ್ಯ, ಹಾಗೂ ಸಂಗೀತ, ಮಾಧ್ಯಮ ಸೇರಿ ವಿವಿಧ   ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ  ಹೆಸರು ಪ್ರಕಟಿಸಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು. ಸಾಹಿತ್ಯ  ಕ್ಷೇತ್ರ ಪ್ರೊ. ಸಿ.ಪಿ ಸಿದ್ದರಾಮ್- ಧಾರವಾಡ ವಿ. ಮುನಿ ವೆಂಕಟಪ್ಪ- ಕೋಲಾರ ರಾಮಣ್ಣ ಬ್ಯಾಟಿ(ವಿಶೇಷ …

Read More »

ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಪ್ರವರ್ಗ ‘ 2ಎ’ ಮೀಸಲಾತಿ ನೀಡುವಂತೆ ಆಗ್ರಹಿಸಿ ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಇಂದು ಬೃಹತ್ ಪ್ರತಿಭಟನೆ 

ಬೆಳಗಾವಿ : ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಪ್ರವರ್ಗ ‘ 2ಎ’ ಮೀಸಲಾತಿ ನೀಡುವಂತೆ ಆಗ್ರಹಿಸಿ ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಇಂದು ಬೃಹತ್ ಪ್ರತಿಭಟನೆ  ಆರಂಭವಾಗಿದೆ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಅಂಗವಾಗಿ ತಾಲ್ಲೂಕಿನ ಹಿರೇಬಾಗೇವಾಡಿಯಿಂದ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಸಮಾಜದವರು ಮೆರವಣಿಗೆ ಆರಂಭಿಸಿದ್ದರು. ಆ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸ್ವಾಮೀಜಿ, …

Read More »

ಮಳೆ ಪರಿಹಾರ ವಿತರಣೆಯಲ್ಲಿ ಯಡವಟ್ಟು ಮಾಡಿದ ಬಿಬಿಎಂಪಿ ಅಧಿಕಾರಿಗಳು

ಬೆಂಗಳೂರು, ಅ.27- ಮಳೆ ಅನಾಹುತಕ್ಕೆ ಕಾರಣವಾಗುವ ಒತ್ತುವರಿಯನ್ನು ನಿರ್ದಾಕ್ಷಿಣ್ಯ ವಾಗಿ ತೆರವು ಮಾಡಲಾಗುವುದು ಎಂದು ಸಿಎಂ ಬೊಬ್ಬೆ ಹೊಡೆದಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಒತ್ತುವರಿ ಮಾಡಿಕೊಂಡಿರುವ ಮನೆಗಳಿಗೆ ಪರಿಹಾರ ನೀಡಿ ಯಡವಟ್ಟು ಮಾಡಿದ್ದಾರೆ. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಹೊಸಕೆರೆ ಹಳ್ಳಿಯ ದತ್ತಾತ್ರೇಯ ಬಡಾವಣೆ ಮತ್ತಿತರ ಪ್ರದೇಶಗಳಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ಮಳೆ ಸಂತ್ರಸ್ತರಿಗೆ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಯೋಜನೆಯಡಿ ಪರಿಹಾರ ಧನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಇದೇ …

Read More »

ಬೆಂಗಳೂರು ಉತ್ತರ ವಿಭಾಗಕ್ಕೆ ಕೇರಳದ ಪೊಲೀಸ್ ಪಡೆ

ಬೆಂಗಳೂರು,ಅ.27- ಚುನಾವಣಾ ಬಂದೋಬಸ್ತ್‍ಗಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉತ್ತರ ವಿಭಾಗಕ್ಕೆ ಕೇರಳದ ಪೊಲೀಸ್ ಪಡೆ ಆಗಮಿಸಿದೆ. ನಿನ್ನೆ ನಗರಕ್ಕೆ ಆಗಮಿಸಿರುವ ಕೇರಳ ರಾಜ್ಯದ ಸಶಸ್ತ್ರ ಮೀಸಲು ಪಡೆ(ಕೆಎಸ್‍ಎಪಿ) ಇಂದು ಉತ್ತರ ವಿಭಾಗದ ಜಾಲಹಳ್ಳಿ, ಆರ್‍ಎಂಸಿಯಾರ್ಡ್ ಮುಂತಾದ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಪಥಸಂಚಲನ ನಡೆಸಲಿದೆ. ಈಗಾಗಲೇ ಈ ವಿಭಾಗಕ್ಕೆ ಸಿಐಎಸ್‍ಎಫ್ ಒಂದು ಕಂಪನಿ ಬಂದಿದ್ದು, ಅದನ್ನು ಚುನಾವಣಾ ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ. ಉತ್ತರ ವಿಭಾಗದ 8 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮತದಾನ …

Read More »

ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್

ನಟನೆಯ ವ್ಯಾಮೋಹಕ್ಕೆ ಸಿಲುಕಿ ಕೈಯಲ್ಲಿ ಸ್ವಂತ ಕೆಲಸವಿದ್ರೂ ಕಲಾ ಸರಸ್ವತಿಯ ಆರಾಧನೆಗೆ ಬಣ್ಣದ ಲೋಕಕ್ಕೆ ಕಾಲಿಟ್ಟು ಚಿಕ್ಕ ಚಿಕ್ಕ ಪಾತ್ರಗಳಲ್ಲೇ ಖುಷಿಪಡುತ್ತಾ ಇಂದು ಸಾಕಷ್ಟು ಹೆಸರು ಗಳಿಸಿರುವ ನಟ ಗಣೇಶ್ ರಾವ್ ಕೇಸರ್ಕರ್. ತಮ್ಮ 20 ವರ್ಷಗಳ ಕಿರುತೆರೆ, ಹಿರಿತೆರೆ ಜರ್ನಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ. * ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ.. ಮೂಲತಃ ಕೊಳ್ಳೆಗಾಲದವನು. ನಮ್ಮ ತಂದೆ ಮಿಲಿಟರಿ ಅಧಿಕಾರಿ. ನಾನು ಡಿಪ್ಲೋಮ ಇನ್ ಆಟೋಮೊಬೈಲ್ ಎಂಜಿನಿಯರಿಂಗ್ ಮುಗಿಸಿದ್ದೇನೆ. …

Read More »

ಕಾರ್, ಬೈಕ್‍ನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ

ಬೆಂಗಳೂರು: ಕಾರಿನಲ್ಲಿ ಅಥವಾ ಬೈಕ್‍ನಲ್ಲಿ ಒಬ್ಬರೇ ಇದ್ದೇವೆ ಎಂದು ಮಾಸ್ಕ್ ಧರಿಸದೆ ಸಂಚರಿಸುವಂತಿಲ್ಲ. ಒಬ್ಬರೇ ಇದ್ದರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲೇಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಕಾರಿನಲ್ಲಿ ಒಬ್ಬರೇ ಇದ್ದೇವೆಂದು ಮೈಮರೆತು ಕುಳಿತರೆ ದಂಡ ಬೀಳುವುದು ಪಕ್ಕಾ. ಬೈಕಿನಲ್ಲಿ ಸಹ ಒಬ್ಬರೇ ಇದ್ದೇವೆ ಎಂದು ಮಾಸ್ಕ್ ಧರಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಮಾಸ್ಕ್ ಧರಿಸುವ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸ್ಪಷ್ಟ ಆದೇಶ ಹೊರಡಿಸಿದ್ದು, ತಿನ್ನುವಾಗ, ಕುಡಿಯುವಾಗ, ಈಜುವಾಗ ಮಾತ್ರ ಮಾಸ್ಕ್ …

Read More »

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿ ಮತದಾರರಿಂದ ವೋಟು ಯಾಚಿಸಿದರು .

ನವೆಂಬರ್ 3 ರಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿ ಮತದಾರರಿಂದ ವೋಟು ಯಾಚಿಸಿದರು . ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತಾಡಿದ ಸಿದ್ದರಾಮಯ್ಯ , ಬಿಜೆಪಿಯ ಅಭ್ಯರ್ಥ ಮುನಿರತ್ನ ನಾಯ್ಡು ಎಲ್ಲ ಮತದಾರರಿಗೆ ಮೋಸ ಮಾಡಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸಲು ಇದು ಉತ್ತಮ ಅವಕಾಶ , ಪ್ರಜಾಪ್ರಭುತ್ವ ಉಳಿಯಬೇಕಾದರೆ ಮುನಿರತ್ನರನ್ನು ಸೋಲಿಸಲೇಬೇಕು ಎಂದು …

Read More »