Breaking News
Home / ಜಿಲ್ಲೆ / ಬೆಳಗಾವಿ (page 418)

ಬೆಳಗಾವಿ

ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿಟಾಸ್ಕ್ ಪೋರ್ಸ್ ಸಭೆ ನಡೆಯಿತು.

ಗೋಕಾಕ: ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಇವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಯಿತು. ನಗರಸಭೆಯ ಟಾಸ್ಕ ಪೋರ್ಸ ಅಧಿಕಾರಿಯಾದ ಎಂ,ಎಚ್,ಗಜಾಕೋಶ ಇವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಹಲವು ಇಲಾಖೆ ಮತ್ತು ಸ್ಥಳಿಯ ಸದಸ್ಯರನ್ನು ಒಳಗೊಂಡು ಟಾಸ್ಕ್ ಪೊರ್ಸ ರಚನೆಯಾಗಿರುತ್ತದೆ. ಇದರ ಉದ್ದೇಶ ಕೊರಾನಾ ರೋಗ ಹರಡದಂತೆ ರೋಗದ ವಿರುದ್ದ ಹೊರಾಟ ಮಾಡುವುದು ಹೊರತು ರೋಗಿಯ ವಿರುದ್ದ ಅಲ್ಲ. ಅದಕ್ಕಾಗಿ ಯಾರು ಕೊರಾನಾಗೆ …

Read More »

ಮಾನವ ಬಂಧುತ್ವ ವೇದಿಕೆ ಮೂಲಕ ಯಶಸ್ವಿಯಾಗಿ ಬಸವ ಪಂಚಮಿ ಆಚರಣೆ.

ಗೋಕಾಕ: ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಯಶಸ್ವಿಯಾಗಿ ಬಸವ ಪಂಚಮಿ ಆಚರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರ ಪಂಚಮಿಯಂದು ಪ್ರತಿ ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ. ಹಾವುಗಳು ಎಂದು ಹಾಲು ಕುಡಿಯುವುದಿಲ್ಲ. ಮೂಢನಂಬಿಕೆ ಆಚರಿಸುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುಲು ಅಭಿಯಾನ ಆರಂಭಿಸಿದ್ದೇವೆ. ರಾಜ್ಯಾದ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ್ರು.

Read More »

ನಾಳೆ ಬೆಳಗಾವಿ ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ……..

ಬೆಳಗಾವಿ: ನಾಳೆ (ಭಾನುವಾರ) ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ ಇರಲಿದೆ. ಅಗತ್ಯ ಸೇವೆಗಳಾದ ಮೆಡಿಕಲ್ ಶಾಪ್, ಹಾಲು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೋಟೆಲ್, ಬಸ್, ಆಟೋ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟು, ಎಲ್ಲವೂ ಬಂದ್ ಆಗಲಿವೆ. ಅನಗತ್ಯವಾಗಿ ಬೀದಿಗಿಳಿಯುವವರ ವಿರುದ್ದ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ತೆರವುಗೊಳಿಸಿದ್ದಾರೆ. ಆದ್ರೆ ಭಾನುವಾರದ ಲಾಕ್ ಡೌನ್ ಮುಂದುವರೆಯಲಿದೆ.

Read More »

ನೂರಾರು ಪಾರಿವಾಳಗಳಿಗೆ ಕಾಳು ನೀಡುವ ಕೆಲಸ:ನಿಡಸೋಸಿ ಗ್ರಾಮದಶಿವಲಿಂಗೇಶ್ವರ ಸ್ವಾಮೀಜಿ

ಚಿಕ್ಕೋಡಿ(ಬೆಳಗಾವಿ): ಮಳೆಗಾಲ ಸಂದರ್ಭದಲ್ಲಿ ಪಕ್ಷಿಗಳಿಗೆ ಆಹಾರ ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುತ್ತೆ. ಇಂಥ ಸಂದರ್ಭದಲ್ಲಿ ನೂರಾರು ಪಾರಿವಾಳಗಳಿಗೆ ಕಾಳು ನೀಡುವ ಕೆಲಸವನ್ನ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾಡುತ್ತಿದ್ದಾರೆ. ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಶ್ರೀಗಳು ಬಂದರೆ ಅವರ ಸುತ್ತ ನೂರಾರು ಪಾರಿವಾಳಗಳು ಜಮಾವಣೆಗೊಳ್ಳುತ್ತವೆ. ಆ ಪಾರಿವಾಳಗಳಿಗೆ ಸ್ವಾಮಿಜಿ ಜೋಳ ಹಾಗೂ ಅಕ್ಕಿ ಕಾಳುಗಳನ್ನ ಹಾಕುತ್ತಿದ್ದಾರೆ. …

Read More »

ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕೊರೊನಾ ವಾರಿಯರ್ಸ್ ಶನಿವಾರ ಸನ್ಮಾನ

ಹುಕ್ಕೇರಿ:  ತಾಲ್ಲೂಕಿನ ಬಸಾಪೂರ ಆರೋಗ್ಯ ಕೇಂದ್ರದಲ್ಲಿ  ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕೊರೊನಾ ವಾರಿಯರ್ಸ್ ಶನಿವಾರ ಸನ್ಮಾನ ಮಾಡಲಾಯಿತು. ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ಹಗಲಿರುಳ ಶ್ರಮ ಪಡುತ್ತಿರುವ  ಅಂಗನವಾಡಿ ಆಶಾ  ಕಾರ್ಯಕರ್ತರು, ಆರೋಗ್ಯ ಇಲಾಖೆ ಅಧಿಕಾರಿಗಳು , ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪಾಟೀಲ ಹೇಳಿದರು. ಈ ಸಂದರ್ಭದಲ್ಲಿ ಕರಗುಪ್ಪಿ ಬಸಾಪೂರ ತಾಲ್ಲೂಕು ಪಂಚಾಯಿತಿ ಸದಸ್ಯ  ಸೋಮನಗೌಡ ಪಾಟೀಲ …

Read More »

ಹಿಡಕಲ್ ಡ್ಯಾಂನಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಿದರು.

ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಮಕ್ಕಳಿಗೆ ಹಾಲು ನೀಡುವ  ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಿದರು. ಜನರು ವೈಜ್ಞಾನಿಕವಾಗಿ ಯೋಚಿಸುವ ಮಟ್ಟದಲ್ಲಿದ್ದಾರೆ. ಮೂಲತಃ ಮಾಂಸಾಹಾರಿಯಾದ ಹಾವಿನ ಆಹಾರ ಹಾಲಲ್ಲ ಎಂಬ ಜಾಗೃತಿ ಮೂಡುತ್ತಿದೆ. ಹುತ್ತಕ್ಕೆ ಹಾಲೆರೆಯುವ ಬದಲು ಅದೇ ಹಾಲನ್ನು ಅಪೌಷ್ಟಿಕತೆಯಿಂದ ನರಳುವ ಮಕ್ಕಳು, ಅನಾಥರು ಹಾಗೂ ಬಡ ಜನರಿಗೆ ಹಂಚಿದರೆ ಪಂಚಮಿಗೆ ಅರ್ಥ ಬರುತ್ತದೆ ಮಾನವ ಬಂಧುತ್ವ ವೇದಿಕೆಯ ಸಂಚಾಲಕ …

Read More »

ಜಗಜ್ಯೋತಿ ಬಸವಣ್ಣನವರು ಐಕ್ಯರಾದ ದಿನವನ್ನು ನಾಗರಪಂಚಮಿ ಆಚರಿಸುವ ಬದಲು ಬಸವ ಪಂಚಮಿ ಯನ್ನಾಗಿ ಆಚರಿಸಬೇಕು ಎಂದು ಕರೆಕೊಟ್ಟರು ಸತೀಶ್ ಶುಗರ್ಸ್ ಫೌಂಡೇಶನ್

  ಗೋಕಾಕ ನಗರದಲ್ಲಿ   ಪ್ರತಿವರ್ಷದಂತೆ ಈ ವರ್ಷವೂ ಸಹ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಗೋಕಾಕ್ ಶಾಖೆ ಹಾಗೂ ಸತೀಶ್ ಶುಗರ್ಸ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 25.07. 2020 ರಂದು ನಾಗರ ಪಂಚಮಿ ಹಬ್ಬದ ನಿಮಿತ್ಯ ಪೌಷ್ಟಿಕ ಆಹಾರ ಹಾಲನ್ನು ಹಾವಿನ ಹುತ್ತಗಳಿಗೆ ಎರೆಯುವ ಬದಲು ಗೋಕಾಕ ನಗರದ ಶಿವಾ ಫೌಂಡೇಶನಲ್ಲಿರುವ ಅನಾಥ ಮಕ್ಕಳಿಗೆ ಹಾಲನ್ನು ಕೊಟ್ಟು ಮಾನವೀಯತೆಯ ಮೆರೆದಿರುವ ಮಾನವ ಬಂಧುತ್ವ ವೇದಿಕೆ ಗೋಕಾಕ್ …

Read More »

ಗೋಕಾಕ ಜೇ ಏಮ್ ಯೆಫ್ ಸಿ ಕೋರ್ಟ್ ನಲ್ಲಿ ಮುಖ್ಯಮಂತ್ರಿ ವಿರುದ್ಧ ಕೋರ್ಟ್ ಸಮನ್ಸ್

ಬೆಳಗಾವಿ- ಗೋಕಾಕ ಉಪ ಚುನಾವಣೆಯಲ್ಲಿ ದಾಖಲಾದ ಚುನಾವಣಾ ನೀತಿ ಸಂಹಿತೆ ಪ್ರಕರಣವೊಂದಕ್ಕೆ ಸಮಂಧಿಸಿದಂತೆ ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೋಕಾಕ ಸಿವ್ಹಿಲ್ ಜಡ್ಜ್ JMFC ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಗೋಕಾಕ ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕಬೇಕೆಂದು,ಚುನಾವಣಾ ಪ್ರಚಾರದ ಸಭೆಯಲ್ಲಿ ಮತಯಾಚಿಸಿದ್ದರು,ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಗೋಕಾಕ್ ಪೋಲೀಸ್ ಠಾಣೆಯಲ್ಲಿ …

Read More »

ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು’

ಬೆಳಗಾವಿ: ‘ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ನಗರದ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವುದರಿಂದ ಇದನ್ನು ತಡೆಗಟ್ಟುವ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಸರ್ಕಾರದ ನಿರ್ದೇಶನದ ಮೇರೆಗೆ ಅವಕಾಶ ಕಲ್ಪಿಸಲಾಗುವುದು. ‘ಗಣೇಶೋತ್ಸವ ಮಂಡಳಿಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು116 ಜನರಿಗೆ ಸೊಂಕುದೃಡ

ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ 116 ಜನರಿಗೆ ಸೊಂಕು ತಗಲಿದ್ದು ದೃಡವಾಗಿದೆ.   ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಪತ್ತೆಯಾದ 116ಜನ ಸೊಂಕಿತರು ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕಿನವರಾಗಿದ್ದಾರೆ.ಇವತ್ತಿನವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1645 ಕ್ಕೆ ಏರಿಕೆಯಾಗಿದೆ  

Read More »