Breaking News
Home / ಜಿಲ್ಲೆ / ಬೆಂಗಳೂರು (page 382)

ಬೆಂಗಳೂರು

ಬ್ರೇಕಿಂಗ್ : ರಾಜ್ಯದಲ್ಲಿ ಇಂದು 69 ಮಂದಿಗೆ ಕೊರೋನಾ ಪಾಸಿಟಿವ್, 2158 ಕ್ಕೇರಿದ ಸೋಂಕಿತರ ಸಂಖ್ಯೆ..!

ಬೆಂಗಳೂರು, ಮೇ 25- ನಿನ್ನೆ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಿದ ಪರಿಣಾಮ ಕೊರೊನಾ ಸೋಂಕಿತರ ಪ್ರಮಾಣ ತಗ್ಗಿದೆ. ಆದರೆ, ಇದುವರೆಗೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮನಗರಕ್ಕೆ ತಮಿಳುನಾಡು ನಂಜು ತಗುಲಿದ್ದು, 2 ವರ್ಷದ ಮಗುವಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕೋವಿಡ್-19ನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇಂದು 69 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.ಇಂದು ಒಂದೇ ದಿನ 26 ಮಂದಿ ರೋಗದಿಂದ ಗುಣಮುಖವಾಗುವುದರ …

Read More »

ಕರ್ನಾಟಕದಿಂದ ತಮ್ಮ ರಾಜ್ಯಗಳಿಗೆ ತೆರಳಿದ 1.50 ಲಕ್ಷಕ್ಕೂ ಹೆಚ್ಚು ವಲಸಿಗರು..!

ಬೆಂಗಳೂರು, ಮೇ 25- ರಾಜ್ಯದ ನಾನಾ ಭಾಗಗಳಿಂದ ಶ್ರಮಿಕ್ ರೈಲಿನ ಮೂಲಕ ಸುಮಾರು 1.50 ಲಕ್ಷ ವಲಸಿಗರು ತಮ್ಮೂರಿಗೆ ಸಂತಸದಿಂದ ತೆರಳಿದ್ದಾರೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಲವು ದಿನಗಳಿಂದ ಸುಮಾರು 150 ರೈಲುಗಳು ಬಿಹಾರ, ಜಾರ್ಖಂಡ್, ಒಡಿಸ್ಸಾ, ನವದೆಹಲಿ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ಭಾಗಗಳಿಗೆ ವಲಸಿಗರನ್ನು ಸುರಕ್ಷಿತವಾಗಿ ತಲುಪಿಸಿದೆ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಅವರಿಗೆ ಕುಡಿಯುವ ನೀರಿನ ಬಾಟಲ್, ಹಣ್ಣು, …

Read More »

ಒತ್ತಡಕ್ಕೆ ಮಣಿದ ಬಿಎಂಟಿಸಿ, ಪಾಸ್ ದರ ಪರಿಷ್ಕರಣೆ : ಇಲ್ಲಿದೆ ಹೊಸ ದರಗಳ ಪಟ್ಟಿ…

ಬೆಂಗಳೂರು, ಮೇ 25- ಸಾರ್ವಜನಿಕರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೈನಂದಿನ ಪಾಸ್ ದರವನ್ನು ಪರಿಷ್ಕರಣೆ ಮಾಡಿದೆ. 70ರೂ.ಗಳ ದಿನದ ಪಾಸ್ ದರವನ್ನು 50ರೂ.ಗೆ ಇಳಿಕೆ ಮಾಡಿದೆ. ಅದೇ ರೀತಿ ಹೊಸದಾಗಿ 30ರೂ., 20ರೂ., 15ರೂ., 10ರೂ., 5ರೂ.ಗಳ ಹೊಸ ಪಾಸ್‍ಗಳನ್ನು ಬಿಡುಗಡೆ ಮಾಡಿದ್ದು, ಟಿಕೆಟ್ ಬದಲಾಗಿ ಇವುಗಳನ್ನು ನೀಡಲು ನಿರ್ಧರಿಸಿದೆ. ಈವರೆಗೆ ದಿನದ ಪಾಸ್‍ಅನ್ನು 70ರೂ.ಗೆ ನೀಡಲಾಗಿತ್ತು. ಕೊರೊನಾ ಸಾಂಕ್ರಾಮಿಕ ಭೀತಿ ಹಿನ್ನೆಲೆಯಲ್ಲಿ …

Read More »

ವೆಚ್ಚಕ್ಕೆ ಬ್ರೇಕ್ ಹಾಕ್ಳು ಕೆಲ ಇಲಾಖೆಗಳನ್ನು ವಿಲೀನನಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು, ಮೇ 25- ಲಾಕ್‍ಡೌನ್ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ರಾಜ್ಯ ಸರ್ಕಾರ ವೆಚ್ಚ ಕಡಿತದ ಮೊರೆ ಹೋಗಿದೆ. ಸರ್ಕಾರ ಕೆಲ ಇಲಾಖೆಗಳನ್ನು ವಿಲೀನ ಮಾಡಲು ಚಿಂತನೆ ನಡೆಸಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಇಲಾಖೆ, ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ ಮತ್ತು ಲೆಕ್ಕ ಪತ್ರ ಇಲಾಖೆ ಸೇರಿದಂತೆ ಇಲಾಖೆಗಳನ್ನು ವಿಲೀನ ಮಾಡಲು …

Read More »

ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಇಂದು ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ. ಐದು ವರ್ಷದ ವಿವಾಂತ್ ಶರ್ಮಾ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ. ಲಾಕ್‍ಡೌನ್ ನಂತರ ಇಂದು ರಾಷ್ಟ್ರ ರಾಜಧಾನಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಈ ಬಾಲಕ ಬಂದು ಬೆಂಗಳೂರಿನಲ್ಲಿರುವ ತನ್ನ ಪೋಷಕರನ್ನು ಸೇರಿದ್ದಾನೆ. ಮಗನ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತಿದ್ದ ಆತನ ತಾಯಿ ಮಂಜೀತ್ ಶರ್ಮಾ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ವಿವಾಂತ್ …

Read More »

ಏರ್‌ಪೋರ್ಟಿನಲ್ಲಿ ಮಹಿಳೆ ರಂಪಾಟ – ಹೋಂ ಕ್ವಾರಂಟೈನ್‍ಗೆ ತೆರಳಿದ ಸದಾನಂದ ಗೌಡ

ಬೆಂಗಳೂರು: ಇಂದಿನಿಂದ ದೇಶಿಯ ವಿಮಾನಗಳ ಹಾರಾಟ ಆರಂಭವಾಗಿದ್ದು, ಚೆನ್ನೈ ಹಾಗೂ ದೆಹಲಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಆಗಮಿಸಿವೆ. ಎರಡು ತಿಂಗಳ ಬಳಿಕ ಮೊದಲ ಬಾರಿಗೆ ದೇಶಿಯ ವಿಮಾನ ಹಾರಾಟ ನಡೆಸಿದ್ದು, ಇಂದು 120 ಜನ ಪ್ರಯಾಣಿಕರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬಂದವರನ್ನೆಲ್ಲ ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇದಕ್ಕೆ ಒಪ್ಪದ ಕೆಲ ಪ್ರಯಾಣಿಕರು ದೆಹಲಿಗೆ ವಾಪಸ್ಸಾಗಿದ್ದಾರೆ. ಎಲ್ಲಾ ಪ್ರಯಾಣಿಕರಿಗೆ ಏಳು ದಿನ ಹೋಟೆಲ್ ಕ್ವಾರಂಟೈನ್ ಇನ್ನೂ ಏಳು ದಿನ …

Read More »

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,977 ಹೊಸ ಕೊರೋನಾ ಪ್ರಕರಣ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,977 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 1,38,845 ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿ 54 ಲಕ್ಷ ಜನರಲ್ಲಿ ಕೊರೋನಾ ವೈರಸ್​ ಇದೆ. ಈ ಪೈಕಿ 3.46 ಲಕ್ಷ ಜನರು ಕೊರೋನಾ ವೈರಸ್​ಗೆ ಮೃತಪಟ್ಟಿದ್ದಾರೆ. ಈ ಪೈಕಿ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1.38 …

Read More »

ಇಂದಿನಿಂದ ವಿಮಾನ ಸಂಚಾರ ಶುರು- ಬೆಂಗ್ಳೂರಿಂದ 215 ವಿಮಾನಗಳ ಓಡಾಟ

ಬೆಂಗಳೂರು: ಎರಡು ತಿಂಗಳಿಂದ ಬಂದ್ ಆಗಿದ್ದ ವಿಮಾನ ಸೇವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇಂದಿನಿಂದ ಆಗಸದಲ್ಲಿ ವಿಮಾನಗಳ ಹಾರಾಟ ಶುರುವಾಗಿಲಿದೆ. ಜೊತೆಗೆ ಕೊರೊನಾ ವೈರಸ್ ಭಯವೂ ಸಹ ಶುರುವಾಗಲಿದೆ. ಹೌದು. ವಿದೇಶದಿಂದ ಹಿಂದಿರುಗಿ ಬಂದವರಿಂದಲೇ ನಮ್ಮ ದೇಶಕ್ಕೆ ಮಾತ್ರವಲ್ಲ ನಮ್ಮ ರಾಜ್ಯಕ್ಕೂ ಹಾಗೂ ಬೆಂಗಳೂರಿಗೂ ಮೊದಲಿಗೆ ಕೊರೊನಾ ಪಾಸಿಟಿವ್ ಬಂದಿದ್ದು. ಆಗ ಕೊರೊನಾ ಕೇಕೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿ ವಿಮಾನ ಸೇವೆಗೆ …

Read More »

ಕೊರೊನಾ ವಾರಿಯರ್ಸ್‌ಗೆ ಅಂಟಿಕೊಳ್ತು ವೈರಸ್ – ಒಂದೇ ದಿನ 6 ಪೊಲೀಸರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವಾರಿಯರ್ಸ್‌ಗೆ ವೈರಸ್ ಹಬ್ಬಿದೆ. ರಾಜ್ಯದ 6 ಮಂದಿ ಪೊಲೀಸರಿಗೆ ಕೊರೊನಾ ಬಂದಿದ್ದು, ಭಾರೀ ಆತಂಕ ಹೆಚ್ಚಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 2 ಸಾವಿರ ದಾಟಿದ್ದು, 2089ಕ್ಕೆ ಏರಿದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಹೆಗಲು ಕೊಟ್ಟ ಕೊರೊನಾ ವಾರಿಯರ್ಸ್ ಪೊಲೀಸರಿಗೆ ಸೋಂಕು ಹಬ್ಬಿದೆ. ತಾವು ಇದ್ದಲ್ಲಿಯೇ ಕೊರೊನಾ ಸೋಂಕು ಇವರನ್ನು ಆವರಿಸಿದೆ. ಹಗಲಿರುಳು ದುಡಿಯುವ, ಜನರ ಮಧ್ಯೆ ಇರುವ …

Read More »

ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ರಾಬರ್ಟ್ ಚಿತ್ರದ ಪೋಸ್ಟರ್ ಸೋಮವಾರ ಬೆಳಗ್ಗೆ ಬಿಡುಗಡೆ

ಬೆಂಗಳೂರು: ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ರಾಬರ್ಟ್ ಚಿತ್ರದ ಪೋಸ್ಟರ್ ಸೋಮವಾರ ಬೆಳಗ್ಗೆ ಬಿಡುಗಡೆಯಾಗಲಿದೆ. ಹೌದು, ಈ ಸಂಬಂಧ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮೇ 25ರ 11 ಗಂಟೆ 5 ನಿಮಿಷಕ್ಕೆ ದರ್ಶನ್ ಅವರ ಖಾತೆಯಿಂದ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ರಾಬರ್ಟ್ ಸಿನಿಮಾ ರಿಲೀಸ್ ಆಗಿ, ಐವತ್ತು ದಿನ ಮುಗಿಸಿ, ನೂರನೇ ದಿನದತ್ತ ಭರ್ಜರಿಯಾಗಿ ಓಡುತ್ತಿರಬೇಕಿತ್ತು. ಆದರೆ ಕೊರೊನಾ ಕ್ರಿಮಿಯಿಂದ ಎಲ್ಲವೂ …

Read More »