Home / ಜಿಲ್ಲೆ / ಬೆಂಗಳೂರು (page 348)

ಬೆಂಗಳೂರು

ಒಂದು ವಾರ ಸಚಿವ ಬಿ.ಸಿ.ಪಾಟೀಲ್ ಕ್ವಾರಂಟೈನ್

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಕೆಲ ರಾಜಕೀಯ ನಾಯಕರು ಕೂಡ ಕ್ವಾರಂಟೈನ್ ಆಗಿದ್ದಾರೆ. ಇದೀಗ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೂಡ ಒಂದು ವಾರಗಳ ಕಾಲ ಕ್ವಾರಂಟೈನ್ ಆಗಿದ್ದಾರೆ. ಬಿ.ಸಿ.ಪಾಟೀಲ್ ಅವರ ಸಂಬಂಧಿಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರು ಬೆಂಗಳೂರಿನ ಮಿನಿಸ್ಟರ್ ಕ್ವಾರ್ಟರ್ಸ್ ನಲ್ಲಿದ್ದರು. ಈ ಹಿನ್ನೆಲೆಯಲ್ಲಿ ಬಿ.ಸಿ.ಪಾಟೀಲ್ ಒಂದು ವಾರ ಕ್ವಾರಂಟೈನ್ ಆಗಿದ್ದಾರೆ. ಬಿ.ಸಿ.ಪಾಟೀಲ್ ಮಾತ್ರವಲ್ಲದೇ ಅವರ ಕುಟುಂಬಸ್ಥರು ಮತ್ತು ಸಿಬ್ಬಂದಿ ವರ್ಗ ಕೂಡ ಕ್ವಾರಂಟೈನ್ ಆಗಿದ್ದಾರೆ. ಈ …

Read More »

ಏಳು ದಿನಗಳ ಕಾಲ ಲಾಕ್ ಡೌನ್ ಸಂಪೂರ್ಣ ವಿಭಿನ್ನ ಹಾಗೂ ಕಠಿಣವಾಗಿರುತ್ತೆ:ಬಸವರಾಜ ಬೊಮ್ಮಾಯಿ

ಬೆಂಗಳೂರು: ಲಾಕ್‍ಡೌನ್‍ನಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾಳೆ ಮತ್ತು ನಾಡಿದ್ದು ಸಂಜೆಯವರೆಗೂ ಬೆಂಗಳೂರು ಮಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು, ಊರಿಗೆ ಹೋಗೋರಿದ್ರೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿಗೆ ಬರೋರಿಗೆ, ಬೆಂಗಳೂರಿಂದ ಹೋಗೋರಿಗೆ ಯಾವುದೇ ಅಡ್ಡಿ ಮಾಡಲ್ಲ. ಆದರೆ ಲಾಕ್‍ಡೌನ್ ಶುರುವಾದ ನಂತರ ಓಡಾಟ ಇರಬಾರದು. ಜನ ಮನೆಯಲ್ಲೇ ಇರಬೇಕು ಎಂದು ಸಚಿವ ಅಶೋಕ್ ಸರ್ಕಾರದ ಪರವಾಗಿ ಮನವಿ ಮಾಡಿಕೊಂಡಿದ್ದಾರೆ. ನಾಳೆ ಸಂಜೆ ಹೊತ್ತಿಗೆ ಲಾಕ್‍ಡೌನ್ ಮಾರ್ಗಸೂಚಿಯನ್ನು …

Read More »

ಸಂಡೇ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಊರುಗಳತ್ತ ಜನ- ಬೆಳ್ಳಂಬೆಳಗ್ಗೆ ಟ್ರಾಫಿಕ್

                                   ಸಂಡೇ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಊರುಗಳತ್ತ   ಜನ-  ಟ್ರಾಫಿಕ್   ಬೆಂಗಳೂರು: ಬೆಂಗಳೂರು ಲಾಕ್‍ಡೌನ್‍ಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ.  ಮಂಗಳವಾರ ರಾತ್ರಿ 8 ಗಂಟೆಯಿಂದ 7 ದಿನ ಕಾಲ ಲಾಕ್‍ಡೌನ್ ಜಾರಿಯಾಗಲಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಬ್ಧವಾಗಲಿದೆ. ಹೀಗಾಗಿ ಜನರು ಸಂಡೇ ಲಾಕ್‍ಡೌನ್ ಮುಗಿಯುತ್ತಿದ್ದಂತೆ ತಮ್ಮ ತಮ್ಮ ಗ್ರಾಮಗಳತ್ತ ಹೋಗುತ್ತಿದ್ದಾರೆ. ಸಂಡೇ ಲಾಕ್‍ಡೌನ್ ಸಮಯ ಮುಗಿದ ತಕ್ಷಣ ಬೈಕ್ ಮತ್ತು …

Read More »

ಮಯೂರಿ ಬರ್ತ್‍ಡೇ ಸಂಭ್ರಮಕ್ಕೆ ಕಿಕ್ಕೇರಿಸಿತು ‘ಆದ್ಯಂತ’ ಫಸ್ಟ್ ಲುಕ್!

ಕಿರುತೆಯಿಂದ ಕಲಾಯಾನ ಆರಂಭಿಸಿ ಹಿರಿತೆರೆಯಲ್ಲೂ ಯಶಸ್ವಿ ನಾಯಕಿಯಾಗಿ ನೆಲೆ ಕಂಡುಕೊಂಡಿರುವವರು ಮಯೂರಿ ಕ್ಯಾತರಿ. ಪ್ರಬುದ್ಧವಾದ ನಿರ್ಧಾರಗಳ ಮೂಲಕ ಚೆಂದದ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿರೋ ಮಯೂರಿ ಇತ್ತೀಚೆಗಷ್ಟೇ ಸಾಂಸಾರಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಆ ಖುಷಿಯಲ್ಲಿರೋ ಅವರ ಪಾಲಿಗೆ ಈ ಬಾರಿಯ ಹುಟ್ಟುಹಬ್ಬ ನಿಜಕ್ಕೂ ಸ್ಪೆಷಲ್ಲು. ಅದನ್ನು ಮತ್ತೂ ಕಳೆಗಟ್ಟಿಸುಯವಂತೆ ‘ಆದ್ಯಂತ’ ಚಿತ್ರದ ಚೆಂದದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ.   ಆದ್ಯಂತ ಮಯೂರಿ ನಾಯಕಿಯಾಗಿ ನಟಿಸಿರೋ ಚಿತ್ರ. ಅವರ ಪಾಲಿಗಿದು ಮಹತ್ವಾಕಾಕ್ಷೆಯ ಮೈಲಿಗಲ್ಲು. …

Read More »

ಆನ್ ಲೈನ್ ನಲ್ಲಿ ಪುಸ್ತಕ ಲೋಕಾರ್ಪಣೆ

ಬೆಂಗಳೂರು, ಜು.12- ಹಿರಿಯ ಸಾಹಿತಿ ಡಾ.ಜಿ.ಕೃಷ್ಣಪ್ಪ ಅವರು ರಚಿಸಿರುವ ಕುವೆಂಪು ಹನುಮದ್ದರ್ಶನ(ಶ್ರೀ ರಾಮಾಯಣ ದರ್ಶನಂ-ಒಂದು ಚಿತ್ರಣ) ಗ್ರಂಥ ವನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಲೋಕಾರ್ಪಣೆ ಮಾಡಿದರು. ನಗರದಲ್ಲಿಂದು ತಮ್ಮ ನಿವಾಸದಲ್ಲಿ ಆನ್ ಲೈನ್ ಮೂಲಕವೇ ಬಿಡುಗಡೆ ಮಾಡಿದ ಅವರು, ಶ್ರೀ ರಾಮಾಯಣ ದರ್ಶನಂ ವಿಶೇಷ ಗ್ರಂಥವಾಗಿದ್ದು, ಡಾ.ಜಿ.ಕೃಷ್ಣಪ್ಪ ಅವರು ಹನುಮದ್ದರ್ಶನ ಕುರಿತು ಹೆಚ್ಚಿನ ಮಾಹಿತಿ ಬೆಳಕು ಚೆಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ …

Read More »

ಸಂಡೆ ಲಾಕ್‌ಡೌನ್ : ಬೆಂಗಳೂರು ಸೇರಿ ಕರ್ನಾಟಕ ಸ್ಥಬ್ದ, ಎಲ್ಲೆಲ್ಲಿ ಏನೇನಾಯ್ತು..?

ಬೆಂಗಳೂರು : ಅಂಕೆ ಮೀರಿ ಶರವೇಗದಲ್ಲಿ ಹಬ್ಬುತ್ತಿರುವ ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಎರಡನೇ ಭಾನುವಾರದ ಲಾಕ್ ಡೌನ್ ಗೂ ಈ ವಾರವೂ ಬಹುತೇಕ ಯಶಸ್ವಿಯಾಗಿದೆ. ಕೆಲವು ಕಡೆ ಸಣ್ಣ ಪುಟ್ಟ ಗೊಂದಲ, ಹೊರತುಪಡಿಸಿದರೆ, ಈ ಭಾರಿ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ತಮ್ಮ ಪ್ರಯಾಣಕ್ಕೆ ನಿರ್ಬಂಧ ಹಾಕಿಕೊಂಡಿದ್ದು ವಿಶೇಷವಾಗಿತ್ತು. ಲಾಕ್ ಡೌನ್ ಶನಿವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿದ್ದು, ಭಾನುವಾರ ರಾಜ್ಯದಾದ್ಯಂತ ಬಹುತೇಕ ಎಲ್ಲಾ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. …

Read More »

ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ’- ಕ್ವಾರಂಟೈನ್‍ನಲ್ಲಿ ಪುಸ್ತಕದ ಮೊರೆಹೋದ ಸಿಎಂ

ಬೆಂಗಳೂರು: ಕೊರೊನಾ ಭೀತಿಯಿಂದ ಸ್ವಯಂ ಕ್ವಾರಂಟೈನ್ ಅಗಿರುವ ಸಿಎಂ ಯಡಿಯೂರಪ್ಪನವರು ಪುಸ್ತಕಗಳನ್ನು ಓದುವ ಮೂಲಕ ಕಾಲಕಳೆಯುತ್ತಿದ್ದಾರೆ. ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಅಧಿಕೃತ ನಿವಾಸ ಕಾವೇರಿ ಮತ್ತು ಅವರ ಧವಳಗಿರಿಯ ನಿವಾಸದಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ ಯಡಿಯೂರಪ್ಪನವರು ಶುಕ್ರವಾದಿಂದ ಐದು ದಿನಗಳ ಕಾಲ ತಮ್ಮ ಕಾವೇರಿ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ. ಈ ವೇಳೆ ಪುಸ್ತಕಗಳನ್ನು ಓದುತ್ತಾ ಸಮಯ ದೂಡುತ್ತಿರುವ ಬಿಎಸ್‍ವೈ, ಬಿಡುವಿನ …

Read More »

ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಹೆಚ್ಡಿಕೆ ಒತ್ತಾಯ…………..

ಬೆಂಗಳೂರು, ಜು.11-ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಗೆ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೊರೋನ ವೈರಸ್ ಸಮುದಾಯಕ್ಕೆ ಹಬ್ಬುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಮನಗಂಡು ಇತರೆ ಗಂಭೀರ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮತ್ತೆ ಜಾರಿಗೊಳಿಸಿದರೆ ಸಾರ್ವಜನಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ನಾನು …

Read More »

1 ವಾರ ಲಾಕ್‍ಡೌನ್‍ಗೂ ಮುನ್ನ ಎರಡು ದಿನ ಲಾಕ್ ಫ್ರೀ – 2 ದಿನ ಫ್ರೀ ನೀಡಿದ್ದು ಯಾಕೆ?

ಬೆಂಗಳೂರು: ಲಾಕ್‍ಡೌನ್ ಮಾಡಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ರಾತ್ರಿ ಒಂದು ವಾರಗಳ ಕಾಲ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಹೆಮ್ಮಾರಿಗೆ ಬ್ರೇಕ್ ಹಾಕಲು ಒಂದು ವಾರ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ ಆಗಲಿದೆ. ಜುಲೈ 14 ಮಂಗಳವಾರ ರಾತ್ರಿ 8 ಗಂಟೆಯಿಂದ ಕಂಪ್ಲೀಟ್ ಲಾಕ್ ಆಗಲಿದ್ದು, ಜುಲೈ 22 ಬುಧವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್‍ಡೌನ್ …

Read More »

ರಾಜ್ಯದಲ್ಲಿ ಶನಿವಾರ-ಭಾನುವಾರ ಲಾಕ್ ಡೌನ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಆರ್ಭಟ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ಮುಂದೆ ರಾಜ್ಯದಲ್ಲಿ ಶನಿವಾರ-ಭಾನುವಾರ ಲಾಕ್ ಡೌನ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಡಿಸಿಎಂ ಗೋವಿಂದ್ ಕಾರಜೋಳ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಾರಕ್ಕೆರಡು ದಿನಗಳ ಕಾಲ ಲಾಕ್ ಡೌನ್ ಮಾಡುವ ಸಂಬಂಧ ಸಿಎಂ ಯಡಿಯೂರಪ್ಪ ಅವರು ತಜ್ಞರ ಅಂತಿಮ ಮಾಹಿತಿಗಾಗಿ ಕಾಯುತ್ತಿದ್ದು, ಈ ನಿಟ್ಟಿನಲ್ಲಿ ಅವರು ಅಂತಿಮ ಮಾಹಿತಿ ಬಳಿಕ ಇನ್ಮುಂದೆ ರಾಜ್ಯದಲ್ಲಿ ಶನಿವಾರ-ಭಾನುವಾರ ಲಾಕ್ …

Read More »