Home / ಜಿಲ್ಲೆ / ಬೆಂಗಳೂರು (page 349)

ಬೆಂಗಳೂರು

ಇಂದು ರಾಜ್ಯದಲ್ಲಿ `ಸಂಡೇ ಕರ್ಪ್ಯೂ’ : ಏನಿರುತ್ತೆ? ಏನಿರಲ್ಲ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯ್ಲಿ ರಾಜ್ಯ ಸರ್ಕಾರವು ಭಾನುವಾರ ಸಂಪೂರ್ಣ ಲಾಕ್ ಡೌನ್ ಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈಗಾಗಲೇ ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಪ್ಯೂ ಜಾರಿಯಲ್ಲಿದೆ. ಲಾಕ್ ಡೌನ್ ವೇಳೆ ಸುಖಾಸುಮ್ಮನೆ ಮನೆಯಿಂದ …

Read More »

ಸೋಮವಾರದ ಜಿಲ್ಲಾಧಿಕಾರಿಗಳ ಸಭೆಯ ನಂತರ ಮತ್ತೆ ಸಂಪೂರ್ಣ ಕರ್ನಾಟಕ ಲಾಕ್ ಡೌನ್ ಆಗತ್ತಾ..?

ಬೆಂಗಳೂರು: ಇಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಮಂಗಳವಾರದಿಂದ ಒಂದು ಲಾಕ್‍ಡೌನ್ ಆಗಲಿವೆ. ಇದೇ ರೀತಿ ಸೋಮವಾರ ಉಳಿದ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸುವ ಸಾಧ್ಯತೆಗಳಿವೆ. ಸೋಮವಾರ ಜಿಲ್ಲಾಧಿಕಾರಿಗಳ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಸಭೆಯಲ್ಲಿ ಜಿಲ್ಲೆಯ ಸ್ಥಿತಿ ಗತಿಗಳ ಬಗ್ಗೆ ಮಾಹಿತಿಯನ್ನು ಮುಖ್ಯಮಂತ್ರಿಗಳು ಪಡೆಯಲಿದ್ದಾರೆ. ಜಿಲ್ಲಾಧಿಕಾರಿಗಳು ನೀಡುವ ವರದಿ ಆಧರಿಸಿ ಸೋಮವಾರ ಸಂಜೆ ಲಾಕ್‍ಡೌನ್ ಘೋಷಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಹೆಚ್ಚು ಕೊರೊನಾ ಪ್ರಕರಣಗಳಿರುವ ಜಿಲ್ಲೆಗಳನ್ನು ಲಾಕ್‍ಡೌನ್ …

Read More »

ಮಂಗಳ ವಾರ ಎಂಟು ಗಂಟೆಯಿಂದ ಮತ್ತೆ ಲಾಕ್ ಡೌನ್… ….!

ಬೆಂಗಳೂರು: ಕಳೆದ 10 ದಿನಗಳಿಂದ ಎದ್ದಿರುವ ಕೊರೊನಾ ಮಹಾ ಸುನಾಮಿಗೆ ತತ್ತರಿಸಿರುವ ರಾಜ್ಯ ಸರ್ಕಾರ, ರಾಜಧಾನಿಯನ್ನು ಒಂದು ವಾರ ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದೆ. ಮಂಗಳವಾರದಿಂದ ಅಂದ್ರೆ ಜುಲೈ 14ರಿಂದ ರಾತ್ರಿ 8 ಗಂಟೆಯಿಂದ ಜುಲೈ 22ರ ನಸುಕಿನಜಾವ ಐದು ಗಂಟೆಯವರೆಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಲಾಕ್‍ಡೌನ್ ಆಗಲಿದೆ. ಈ ಸಂಬಂಧ ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಈ ಪ್ರಕಟಣೆ ಮಾಡಿದರು. ಸೋಂಕು ತಡೆಗೆ, ಸಂಡೇ …

Read More »

ಇಂದು ಒಂದೇ ದಿನ ರಾಜ್ಯದಲ್ಲಿ 2798 ಜನರಿಗೆ ಸೋಂಕು………..

ಬೆಂಗಳೂರು – ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತ ಸಾಗುತ್ತಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ 2798 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 1533 ಜನರಿಗೆ ಸೋಂಕು ತಗುಲಿದೆ. ಇಂದು ಒಟ್ಟೂ 70 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 23 ಜನರು ಸಾವಿಗೀಡಾಗಿದ್ದಾರೆ. ಈ ಮಧ್ಯೆ ಮಂಗಳವಾರ ರಾತ್ರಿಯಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಒಂದು ವಾರ ಲಾಕ್ ಡೌನ್ ಮಾಡಲು ಸರಕಾರ ನಿರ್ಧರಿಸಿದೆ.  ಇಡೀ ರಾಜ್ಯಕ್ಕೆ ಲಾಕ್ ಡೌನ್ ಮಾಡಬೇಕೋ …

Read More »

ಸಚಿವ ಸಿ.ಟಿ.ರವಿ ಅವರಿಗೆ ಕೊರೊನಾ ಸೋಂಕು

ಬೆಂಗಳೂರು: ಸಚಿವ ಸಿ.ಟಿ.ರವಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಪ್ರಾಣೇಶ್, ಅಜೇಯ್ ಸಿಂಗ್, ಪುಟ್ಟಣ್ಣಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ಕೊರೊನಾ ತಗುಲಿದೆ. ಎಲ್ಲರೂ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಬರುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ಸಿ.ಟಿ.ರವಿ ಸ್ವಯಂ ಕ್ವಾರಂಟೈನ್ …

Read More »

ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರು ಪ್ರಶ್ನೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾ ಖರ್ಚು ವೆಚ್ಚದ ಲೆಕ್ಕದ ಬಗ್ಗೆ ರಾಜ್ಯ ಸರ್ಕಾರಕ್ಕೆ ಆರು ಪ್ರಶ್ನೆಗಳನ್ನು ಕೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ 6 ಪ್ರಶ್ನೆಗಳನ್ನ ಕೇಳಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ ಟ್ವಿಟ್ಟರಿನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, “ಕೊರೊನಾ ನಿಯಂತ್ರಣದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್‍ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಶುರು ಮಾಡಲಾಗಿದೆ. ನಮ್ಮ ಪಕ್ಷದ ಎಲ್ಲ ಶಾಸಕರು, ಸಂಸದರು, …

Read More »

ಪೊಲೀಸ್ ಆಯುಕ್ತರ ಕಚೇರಿ ಮತ್ತೊಮ್ಮೆ ಸೀಲ್‍ಡೌನ್

ಬೆಂಗಳೂರು, ಜು.11- ನಗರದ ಇನ್‍ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯನ್ನು ಮತ್ತೊಮ್ಮೆ ಸೀಲ್‍ಡೌನ್ ಮಾಡಲಾಗಿದೆ. ನಿನ್ನೆ 9 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಯುಕ್ತರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಈ ಸಂಜೆಗೆ ತಿಳಿಸಿದ್ದಾರೆ. ಸೀಲ್‍ಡೌನ್ ಆಗಿರುವ ಆಯುಕ್ತರ ಕಚೇರಿಯನ್ನು ಮುಂದಿನ ಬುಧವಾರ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಹಿಂದೆಯೂ ಕಚೇರಿಯ ಸಿಬ್ಬಂದಿಗೆ ಕೊರೊನಾ …

Read More »

ಇಮ್ಯುನಿಟಿ ಪವರ್ ಹೆಚ್ಚಿಸುವ ಆಹಾರಕ್ಕೆ ಮೊರೆಹೋದ ಸಿಎಂ””””’

ಬೆಂಗಳೂರು,ಜು.11- ತಮ್ಮ ಆಪ್ತ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಸೆಲ್ಫ್ ಕ್ವಾರಂಟೈನ್‍ನಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಇದೀಗ ಇಮ್ಯುನಿಟಿ ಪವರ್ ಹೆಚ್ಚಿಸುವ ಆಹಾರದ ಮೊರೆ ಹೋಗಿದ್ದಾರೆ. ಕಾವೇರಿ ನಿವಾಸದಲ್ಲಿ ಸೆಲ್ಫ್ ಕ್ವಾರಂಟೈನ್‍ನಲ್ಲಿರುವ ಬಿಎಸ್‍ವೈ, ವಿಟಮಿನ್ ಎ ಮತ್ತು ಸಿ ಅಂಶ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಸೋಂಕು ಬಾರದಿರುವಂತೆ ಸಿಎಂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಲು ಪ್ರಾರಂಭಿಸಿದ್ದಾರೆ. ಈ ಸಂಬಂಧ ವೈದ್ಯರೂ ಸಲಹೆ ನೀಡಿದ್ದು, ಇಮ್ಯುನಿಟಿ …

Read More »

ಕೋವಿಡ್ ಆಸ್ಪತ್ರೆಯಲ್ಲೇ ಡೆಡ್ಲಿ ತಾಂಡವ-

ಬೆಂಗಳೂರು: ಚೀನಾ ವೈರಸ್ ರಾಜ್ಯದಲ್ಲಿ ರಣರಣಿಸುತ್ತಿದೆ. ದಿನದಿನವೂ ಉಗ್ರರೂಪ ತಾಳಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ರಾಜ್ಯದಲ್ಲಿ ಶುಕ್ರವಾರ ದಾಖಲೆಯ 2300ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬೆಂಗಳೂರಲ್ಲಂತೂ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಕೇವಲ ರಾಜಧಾನಿಯೊಂದರಲ್ಲೇ 1400ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಎರಡನೇ ಬಾರಿಗೆ ದಿನದಲ್ಲಿ 50ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದರಲ್ಲಿ ಬೆಂಗಳೂರಿನಲ್ಲೇ 29 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ 8 ಮಂದಿ, ಮೈಸೂರಲ್ಲಿ ನಾಲ್ವರು, ಬೀದರ್‍ನಲ್ಲಿ ಮೂವರು, …

Read More »

ತೀವ್ರ ಜ್ವರದಿಂದ ಬಳಲುತ್ತಿದ್ದ ಉದ್ಯಮಿಸಾವು ………….

ಬೆಂಗಳೂರು, – ತೀವ್ರ ಜ್ವರದಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ತಾವು ವಾಸವಾಗಿದ್ದ ಅಪಾರ್ಟ್‍ಮೆಂಟ್‍ನಲ್ಲೇ ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಿಲೀಪ್‍ಕುಮಾರ್ (35) ಮೃತಪಟ್ಟ ಉದ್ಯಮಿ. ನೆಲಮಂಗಲದ ಬಳಿ ದಿಲೀಪ್‍ಕುಮಾರ್ ಅವರು ಪೆಟ್ರೋಲ್ ಬಂಕ್ ಇಟ್ಟುಕೊಂಡಿದ್ದು, ಬ್ರಿಗೇಡ್ ಗೇಟ್‍ವೇ ಅಪಾರ್ಟ್‍ಮೆಂಟ್‍ನ ಫ್ಲಾಟ್‍ವೊಂದರಲ್ಲಿ ವಾಸವಾಗಿದ್ದರು. ಪತ್ನಿ ಇತ್ತೀಚೆಗೆ ತವರಿಗೆ ಹೋಗಿದ್ದರು. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಇವರು ಸ್ವಯಂ ಮಾತ್ರೆ ಹಾಗೂ ಔಷಧಿ ತೆಗೆದುಕೊಂಡು ಮನೆಯಲ್ಲೇ ಇದ್ದರು. ದಿಲೀಪ್‍ಕುಮಾರ್ …

Read More »