Breaking News
Home / ಜಿಲ್ಲೆ / ದಾವಣಗೆರೆ (page 7)

ದಾವಣಗೆರೆ

ನೆಮ್ಮದಿಯಿಂದ ಇದ್ದ ಜನರು ಈಗ ಭಯದ ವಾತಾವರಣದಲ್ಲೇ ಜೀವನಸ್ವಯಂಪ್ರೇರಿತವಾಗಿ ಚನ್ನಗಿರಿ ಲಾಕ್‍ಡೌನ್

ದಾವಣಗೆರೆ: ಬೆಣ್ಣೆ ನಗರಿಯ ಕೊರೊನಾ ಸೋಂಕಿನ ಜಾಡು ಇದುವರೆಗೂ ಕಂಡು ಹಿಡಿಯಲು ಆಗುತ್ತಿಲ್ಲ. ಇಷ್ಟು ದಿನ ಕೇವಲ ಸಿಟಿಗೆ ಮಾತ್ರ ಸೀಮಿತವಾಗಿದ್ದ ಕೊರೊನಾ ಅಟ್ಟಹಾಸ ಈಗ ತಾಲೂಕು ಮಟ್ಟಕ್ಕೆ ತಲುಪಿದೆ. ನೆಮ್ಮದಿಯಿಂದ ಇದ್ದ ಜನರು ಈಗ ಭಯದ ವಾತಾವರಣದಲ್ಲೇ ಜೀವನ ನಡೆಸುವಂತಾಗಿದೆ. ಇದಕ್ಕೆ ಅಲ್ಲಿನ ಜನತೆಯೇ ಮದ್ದನ್ನು ಕಂಡುಕೊಂಡಿದ್ದಾರೆ. ದಾವಣಗೆರೆಯಲ್ಲಿ ಕೊರೊನಾರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ದಾವಣಗೆರೆ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಈ ಹಳ್ಳಿಗಳಿಂದ ತಾಲೂಕು …

Read More »

ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ……..

ದಾವಣಗೆರೆ: ಜೂಜಿನ ಪಾರಿವಾಳ ವಿಚಾರಕ್ಕೆ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಇಂದು ನಡೆದಿದೆ. ಶ್ರೀನಿವಾಸ್ ನಗರದ ನಿವಾಸಿ ನಟರಾಜ್ (30) ಹಲ್ಲೆಗೊಳಗಾದ ಯುವಕ. ಭಾರತ್ ಕಾಲೋನಿಯ ಸಂತೋಷ್ ಹಾಗೂ ಅವನ ಗೆಳೆಯರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಟರಾಜ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಟರಾಜ್ ಪಾರಿವಾಳಗಳನ್ನು ಸಾಕಿ ಅವುಗಳಿಗೆ ತರಬೇತಿ ನೀಡಿ ಜೂಜಿಗೆ ಬಿಡುತ್ತಿದ್ದ. ಹೀಗಾಗಿ ಸಂತೋಷ್ ಹಾಗೂ ಆತನ …

Read More »

ರ್‌ಎಕ್ಸ್ ಬೈಕ್ ಅನ್ನು ಕೊಡಿಸಲಿಲ್ಲವೆಂದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ

ದಾವಣಗೆರೆ: ತಾನು ಕೇಳಿದ ಆರ್‌ಎಕ್ಸ್ ಬೈಕ್ ಅನ್ನು ಕೊಡಿಸಲಿಲ್ಲವೆಂದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೆಟಿಜೆ ನಗರ ವ್ಯಾಪ್ತಿಯ ಅಂಬಿಕಾ ನಗರದಲ್ಲಿ ನಡೆದಿದೆ. ಅಂಬಿಕಾ ನಗರದ ಬಿ ಬ್ಲಾಕ್‍ನ ನಿವಾಸಿ ಮಂಜುನಾಥ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಜುನಾಥ್ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ. ಮೃತ ವಿದ್ಯಾರ್ಥಿ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಪೇಗೆ ದೇವೇಂದ್ರಪ್ಪ ಅವರ ಮಗ ಎನ್ನಲಾಗಿದೆ. ಮಂಜುನಾಥ್‍ಗೆ ಆಗಲೇ ರಾಯಲ್ ಎನ್‍ಫೀಲ್ಡ್ ಬೈಕ್ ಕೊಡಿಸಲಾಗಿತ್ತಾದರೂ …

Read More »

ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ- ಶಿಕ್ಷಣ ಇಲಾಖೆಯ 7 ಜನ ಸಿಬ್ಬಂದಿ ಅಮಾನತು

ದಾವಣಗೆರೆ: ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ ಆಡಿದ್ದ ಉತ್ತರ ವಲಯದ ಬಿಇಒ ಕಚೇರಿಯ 7 ಜನ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ಉತ್ತರ ವಲಯದ ಅಧೀಕ್ಷಕ ಎಚ್.ಎಸ್.ಬಸವರಾಜ್, ಪ್ರಥಮ ದರ್ಜೆ ಸಹಾಯಕ ಎಂ.ಸುಧಾಕರ್, ದ್ವಿತೀಯ ದರ್ಜೆ ಸಹಾಯಕ ಕೊಟ್ರೇಶ್, ದ್ವಿತೀಯ ದರ್ಜೆ ಸಹಾಯಕ ಬೆರಳಚ್ಚು ಗಾರ ಮಲ್ಲಿಕಾರ್ಜುನ್ ಮಠದ, ಶಿಕ್ಷಣ ಸಂಯೋಜಕ ಎಸ್.ಸೋಮಶೇಖರಪ್ಪ, ಡಿ.ಗ್ರೂಪ್ ನೌಕರ ಹರ್ಷವರ್ಧನ್, ಗುಮ್ಮನೂರು ಸರ್ಕಾರಿ ಹಿರಿಯ …

Read More »

ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆಯ ಬಾತ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ದಾವಣಗೆರೆ: ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಆಸ್ಪತ್ರೆಯ ಬಾತ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ದಾವಣಗೆರೆಯ ಬಸಾಪುರ ನಿವಾಸಿ ಕಂಟೈನ್ಮೆಂಟ್ ಏರಿಯಾದಲ್ಲಿ ವಾಸಿಸುತ್ತಿದ್ದರು. ಇವರಿಗೆ ಕೆಮ್ಮು ಜ್ವರದಂತಹ ಲಘು ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೊರೊನಾ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಜೊತೆಗೆ ಮೇ 20ರಂದು ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರವುದಕ್ಕೂ …

Read More »

ಕೊರೊನಾ ಸೋಂಕಿತನ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಆಗಿ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಜನರು ವಿರೋಧ ವ್ಯಕ್ತ

ದಾವಣಗೆರೆ: ಕೊರೊನಾ ಸೋಂಕಿತನ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಆಗಿ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಜನರು ವಿರೋಧ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಿವನಗರದಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲು ಜನರು ವಿರೋಧ ಮಾಡುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಯುವಕನ ಏರಿಯಾವನ್ನು ಕಂಟೈನ್‍ಮೆಂಟ್ ವಲಯವನ್ನಾಗಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ವೇಳೆ ಕಂಟೈನ್ಮೆಂಟ್ ಝೋನ್ ಮಾಡಬೇಡಿ ಎಂದು ನೂರಾರು ಜನರು ತಡೆದಿದ್ದಾರೆ. ಅಜ್ಮೀರ್‌ನಿಂದ ದಾವಣಗೆರೆಗೆ ಆಗಮಿಸಿದ್ದ 22 ವರ್ಷದ ಯುವಕನಿಗೆ …

Read More »

ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ಅಧಿಕಾರಿಗಳು ನಿಂತ್ರಾ ಅನ್ನೋ ಪ್ರಶ್ನೆ…..?

ದಾವಣಗೆರೆ: ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ಅಧಿಕಾರಿಗಳು ನಿಂತ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮೇಲೆ ದಾಳಿ ಮಾಡಿ ನಕಲಿ ಎಫ್‍ಐಆರ್ ಹಾಕಿದ್ದಾರೆಂಬ ಆರೋಪವೊಂದು ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿದೆ.   ದಾವಣಗೆರೆ ನಗರದ ಕೆ.ಆರ್ ರಸ್ತೆ ಬಳಿಯ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ವಿಚಾರ ತಿಳಿದ ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ ಹಾಗೂ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದು ಸುಮಾರು …

Read More »

ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್……….

ದಾವಣಗೆರೆ: ಹೆಮ್ಮಾರಿ ಕೊರೊನಾ ವೈರಸ್ ತಡೆಗಟ್ಟಲು ವೈದ್ಯರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದು, ಅವರ ಜೊತೆ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹ ಕೊರೊನಾ ವಾರಿಯರ್ಸ್ ಗಳ ಸರ್ಕಾರ ನಿರ್ಲಕ್ಷ್ಯವಹಿಸಿದೆ. 15 ತಿಂಗಳ ಶಿಷ್ಯವೇತನಕ್ಕೆ ಒತ್ತಾಯಿಸಿ ದಾವಣಗೆರೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಕೋವಿಡ್ ವಾರ್ಡ್‍ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದೆರಡು ದಿನದ ಹಿಂದಷ್ಟೇ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಸ್ಪತ್ರೆಯ ಮುಂಭಾಗ …

Read More »

ಗ್ರೀನ್‍ಝೋನ್ ದಾವಣಗೆರೆ ನಗರದಲ್ಲಿ 14 ದಿನ ಮದ್ಯ ನಿಷೇಧ!………

ದಾವಣಗೆರೆ: ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ನಿನ್ನೆಯಿಂದ ಮದ್ಯದಂಗಡಿಗಳು ಓಪನ್ ಆಗಿವೆ. ಆದರೆ ಗ್ರೀನ್ ಝೋನ್ ದಾವಣಗೆರೆಯಲ್ಲಿ ಮಾತ್ರ ಇನ್ನೂ 14 ದಿನ ಎಣ್ಣೆಗೆ ನಿಷೇಧ ಹೇರಲಾಗಿದೆ. ಹೌದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ದಾವಣಗೆರೆ ಮುಕ್ಕಾಲು ಪ್ರಮಾಣದಷ್ಟು ಓಪನ್ ಆಗಬೇಕಿತ್ತು. ಮೊದಲು 2 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅಷ್ಟೇ ಬೇಗ ಗುಣಮುಖರಾಗಿದ್ರು. ಅತ್ಯಂತ ಯಶಸ್ವಿಯಾಗಿ ಕೊರೊನಾ ನಿಭಾಯಿಸಿದ ಕೀರ್ತಿ ದಾವಣಗೆರೆ ಪಡೆದಿತ್ತು. ಆದರೆ ಆ ಎಲ್ಲಾ ಹೆಗ್ಗಳಿಕೆಯನ್ನು ಈಗಿನ …

Read More »

ದಾವಣಗೆರೆ ಸಂಪೂರ್ಣ ಲಾಕ್‍ಡೌನ್- 21 ಕೊರೊನಾ ಸೋಂಕಿತರ ಮಾಹಿತಿ ಇಲ್ಲಿದೆ…….

ದಾವಣಗೆರೆ: ಆರೆಂಜ್ ಝೋನ್‍ನಲ್ಲಿದ್ದ ದಾವಣಗೆರೆಯಲ್ಲಿ ಒಮ್ಮಿಂದೊಮ್ಮಲೆ ಕೊರಾನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಇಂದು ಒಂದೇ ದಿನ 21 ಪ್ರಕರಣಗಳು ಹೆಚ್ಚಾಗುವ ಮೂಲಕ ರೆಡ್ ಝೋನ್‍ಗೆ ತಿರುಗುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟು 330 ಸ್ಯಾಂಪಲ್ ಗಳ ಪೈಕಿ 37ರ ವರದಿ ಬಂದಿದ್ದು, ಇದರಲ್ಲಿ ಬರೋಬ್ಬರಿ 21 ಮಂದಿಗೆ ಕೊರೊನಾ ತಗುಲಿರೋದು ದೃಢಪಟ್ಟಿದೆ. ಇನ್ನೂ 293 ಜನರ ವರದಿ ಬರುವುದು ಬಾಕಿ ಇದೆ. ಇವರ ವರದಿ ಏನಾಗುತ್ತದೋ …

Read More »