Breaking News
Home / ಜಿಲ್ಲೆ / ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ……..

ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ……..

Spread the love

ದಾವಣಗೆರೆ: ಜೂಜಿನ ಪಾರಿವಾಳ ವಿಚಾರಕ್ಕೆ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.

ಶ್ರೀನಿವಾಸ್ ನಗರದ ನಿವಾಸಿ ನಟರಾಜ್ (30) ಹಲ್ಲೆಗೊಳಗಾದ ಯುವಕ. ಭಾರತ್ ಕಾಲೋನಿಯ ಸಂತೋಷ್ ಹಾಗೂ ಅವನ ಗೆಳೆಯರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಟರಾಜ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಟರಾಜ್ ಪಾರಿವಾಳಗಳನ್ನು ಸಾಕಿ ಅವುಗಳಿಗೆ ತರಬೇತಿ ನೀಡಿ ಜೂಜಿಗೆ ಬಿಡುತ್ತಿದ್ದ. ಹೀಗಾಗಿ ಸಂತೋಷ್ ಹಾಗೂ ಆತನ ಗೆಳೆಯರು ಮದ್ಯ ಮತ್ತಿನಲ್ಲಿ ಪಾರಿವಾಳವನ್ನು ಖರೀದಿಸಲು ಇಂದು ನಟರಾಜ್ ಮನೆಗೆ ಬಂದಿದ್ದರು. ಆದರೆ ನಟರಾಜ್ ಪಾರಿವಾಳ ಮಾರಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಸಂತೋಷ್ ಗಲಾಟೆ ಆರಂಭಿಸಿದ್ದ. ಬಳಿಕ ನಟರಾಜ್‍ನನ್ನು ಚರಂಡಿಯಲ್ಲಿ ಕೂರಿಸಿ ಮನಬಂದಂತೆ ಥಳಿಸಿದ್ದಾರೆ.

ಸ್ಥಳೀಯರು ಹಾಗೂ ನಟರಾಜ್ ಕುಟುಂಬಸ್ಥರು ಬಿಡಿಸಲು ಬಂದರೂ ಸಂತೋಷ್ ಹಾಗೂ ಆತನ ಸ್ನೇಹಿತರು ನಟರಾಜ್‍ಗೆ ಚಾಕು ಇರಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಯುವಕರು ತಮ್ಮ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

ಹವಾಮಾನ ಪ್ರತಿಕೂಲ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ

Spread the loveನವದೆಹಲಿ: ರಾಷ್ಟ್ರದ ರಾಜಧಾನಿಯ ಹವಾಮಾನ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ. ಗಾಳಿಯ ಗುಣಮಟ್ಟ ಅಪಾಯಕಾರಿ ಹಂತ ತಲುಪಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ