Breaking News
Home / ಜಿಲ್ಲೆ / ಕಲಬುರ್ಗಿ (page 7)

ಕಲಬುರ್ಗಿ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ……….

ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿದ್ದ ಅಪ್ರಾಪ್ತೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪ್ರಾಪ್ತೆ ಅವಿವಾಹಿತಳಾಗಿದ್ದು, ಉದ್ಯೋಗ ಅರಸಿ ಕುಟುಂಬಸ್ಥರ ಜೊತೆ ಮಹಾರಾಷ್ಟ್ರದ ಮುಂಬೈಗೆ ಹೋಗಿದ್ದಳು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೇ 17ರಂದು ಮಹಾರಾಷ್ಟ್ರದಿಂದ ವಾಪಸ್ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಬೆಳಗ್ಗೆ ಅಪ್ರಾಪ್ತೆ ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರೋಗ್ಯಾಧಿಕಾರಿಗಳು ಅಪ್ರಾಪ್ತೆ ಮತ್ತು ಮಗುವನ್ನು ತಾಲೂಕು …

Read More »

ಚಿಕನ್ ಊಟ ಕೊಟ್ಟಿಲ್ಲವೆಂದು ಆಶಾಕಾರ್ಯಕರ್ತೆಯ ಕೈ ಮುರಿದ ಭೂಪ!

ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ. ರೇಣುಕಾ ಕುಡಕಿ ಗಾಯಗೊಂಡ ಆಶಾ ಕಾರ್ಯಕರ್ತೆಯಾಗಿದ್ದು ಇವರ ಮೇಲೆ ಸೋಮನಾಥ್ ಕಾಂಬಳೆ ಹಲ್ಲೆ ಮಾಡಿದ್ದಾನೆ. ಚಿಕನ್ ಊಟ ಕೊಡದಿದ್ದಕ್ಕೆ ಸಿಟ್ಟಿಗೆದ್ದ ಸೋಮನಾಥ್, ಆಶಾ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ರೇಣುಕಾ ಅವರ ಕೈ ಮುರಿದು ಆಳಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. …

Read More »

ಕಲಬುರಗಿಗೆ ತಬ್ಲಿಘಿ ಬಳಿಕ ಧಾರಾವಿ ಕಂಟಕ……….

ಕಲಬುರಗಿ: ಇಷ್ಟು ದಿನ ತಬ್ಲಿಘಿಗಳ ಸೋಂಕಿನಿಂದ ನರಳಿದ ಕಲಬುರಗಿ ಜಿಲ್ಲೆಗೆ ಇದೀಗ ಮುಂಬೈನ ಧಾರಾವಿ ಸ್ಲಂ ಪ್ರದೇಶ ಕಂಟಕವಾಗಿದ್ದು, ಬುಧವಾರ ದಾಖಲಾದ 8 ಪ್ರಕರಣಗಳಲ್ಲಿ 4 ಜನರಲ್ಲಿ ಮುಂಬೈ ವಲಸಿಗ ಕಾರ್ಮಿಕನಿಂದಲೇ ಬಂದಿದೆ. ಅದರಲ್ಲೂ ಜಿಲ್ಲೆಗೆ 10 ಸಾವಿರಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಬಂದಿದ್ದಾರೆ. ಇಡೀ ದೇಶದಲ್ಲಿ ಕೊರೊನಾದಿಂದ ಅತಿ ಹೆಚ್ಚು ನಲುಗಿದ ರಾಜ್ಯ ಅಂದರೆ ಅದು ಮಹಾರಾಷ್ಟ್ರ. ಮುಂಬೈನ ಧಾರಾವಿಯಲ್ಲಿ ನೆಲೆಸಿದ್ದ ಕಲಬುರಗಿ ಮೂಲದ 10 ಸಾವಿರಕ್ಕೂ ಹೆಚ್ಚು …

Read More »

ಕಲಬುರಗಿ: ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ

ಕಲಬುರಗಿ: ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಕಲಬುರಗಿ ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿದ್ದ ಖೂಬಾ ಫ್ಲಾಟ್ ಪ್ರದೇಶದ 45 ವರ್ಷದ ಪುರುಷ(ರೋಗಿ-926) ಮತ್ತು ಮೋಮಿನಪುರ ಕಂಟೈನ್‍ಮೆಂಟ್ ಝೋನ್‍ನಲ್ಲಿದ್ದ 60 ವರ್ಷದ ವೃದ್ಧ(ಮೃತ ರೋಗಿ-927) ಕೊರೊನಾ ಸೋಂಕಿಗೆ ತುತ್ತಾಗಿರುವುದು ವರದಿಯಾಗಿದೆ. ಮೋಮಿನಪುರ ಕಂಟೈನ್‍ಮೆಂಟ್ ಝೋನ್‍ನ ನಿವಾಸಿ 60 ವರ್ಷದ ವೃದ್ಧ ಮೇ 11ರಂದೇ ಆಸ್ಪತ್ರೆಗೆ ಬರುವ ಮುನ್ನವೆ ನಿಧನರಾಗಿದ್ದಾರೆ. ಆದರೆ …

Read More »

20 ಲಕ್ಷ ಕೋಟಿ ರೂ. ಮೊತ್ತದಲ್ಲಿ ಈ ಹಿಂದೆ ಘೋಷಿಸಲಾದ ಕೇಂದ್ರ ಸರಕಾರದ ಪ್ರಾಯೋಜಿತ ನಿಧಿಯೂ ಸೇರಿದೆಯೋ ಅಥವಾ ಇಲ್ಲವೋ:ಪ್ರಿಯಾಂಕ್ ಖರ್ಗೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಇದೊಂದು ಗಿಮಿಕ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಬಡ ಮಧ್ಯಮ ವರ್ಗದ ಜನರು ತೀವ್ರ ಸಂಕಟಕ್ಕೀಡಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ದೇಶದ ಬೆನ್ನೆಲುಬಾದ ರೈತಾಪಿ ವರ್ಗ …

Read More »

ಕಲಬುರಗಿಗೆ ಹೊಸ ಟೆನ್ಶನ್ – ಮುಂಬೈನಿಂದ 1,200ಕ್ಕೂ ಹೆಚ್ಚು ಕಾರ್ಮಿಕರು ರಿಟರ್ನ್

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ಹೆಚ್ಚಾದ ಹಿನ್ನೆಲೆಯಲ್ಲಿ ಜನ ಚಿಂತೆಗೀಡಾಗಿದ್ದಾರೆ. ಹೀಗಿರುವಾಗಲೇ ಮುಂಬೈನಿಂದ ಸಾವಿರಾರು ಕೂಲಿ ಕಾರ್ಮಿಕರು ವಿಶೇಷ ರೈಲು ಮೂಲಕ ಕಲಬುರಗಿಗೆ ತಡರಾತ್ರಿ ಆಗಮಿಸಿದ್ದಾರೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಹಾಟ್‍ಸ್ಪಾಟ್ ಕಲಬುರಗಿಗೆ ಹೊಸ ಟೆನ್ಶನ್ ಶುರುವಾಗಿದೆ. ಮುಂಬೈನಿಂದ ಸಾವಿರಾರು ವಲಸೆ ಕಾರ್ಮಿಕರು ಶ್ರಮಿಕ್ ಸ್ಪೆಷಲ್ ರೈಲಿನ ಮೂಲಕ ಕಲಬುರಗಿಗೆ ತಡರಾತ್ರಿ 2 ಗಂಟೆಗೆ ಬಂದಿಳಿದಿದ್ದಾರೆ. ಮುಂಬೈನಿಂದ ಬಂದಿಳಿದ ವಲಸಿಗ ಕಾರ್ಮಿಕರನ್ನು ಕಲಬುರಗಿ ಸಂಸದ …

Read More »

ಕಲಬುರಗಿ ನಗರದಲ್ಲಿ ತಾಯಿ-ಮಗು ಸೇರಿದಂತೆ ಮತ್ತೆ ಮೂವರು ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖ

ಕಲಬುರಗಿ: ಕಲಬುರಗಿ ನಗರದಲ್ಲಿ ತಾಯಿ-ಮಗು ಸೇರಿದಂತೆ ಮತ್ತೆ ಮೂವರು ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದ ಮೋಮಿನಪುರ ಪ್ರದೇಶದ 26 ವರ್ಷದ ಮಹಿಳೆ (ರೋಗಿ ಸಂಖ್ಯೆ-425) ಹಾಗೂ ಇವರ ನಾಲ್ಕು ತಿಂಗಳ ಗಂಡು ಮಗು (ರೋಗಿ ಸಂಖ್ಯೆ-424) ಹಾಗೂ ಮಾಣಿಕೇಶ್ವರಿ ನಗರದ 46 ವರ್ಷದ ಮಹಿಳೆ (ರೋಗಿ ಸಂಖ್ಯೆ-421) ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ. ಈ ಮೂವರಿಗೂ ಏ.22ರಂದು ಕೊರೊನಾ ಸೋಂಕು …

Read More »

ಕಲಬುರಗಿ:ಪೊಲೀಸ್ ಪೇದೆಗೂ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಜನರಲ್ಲಿ ಆತಂಕ

ಕಲಬುರಗಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಕಲಬುರಗಿಯಲ್ಲಿ ಇಂದು ಮತ್ತಿಬ್ಬರು ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಒರ್ವ ಪೊಲೀಸ್ ಪೇದೆಗೂ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಕಲಬುರಗಿಯ ಮಹೆಬೂಬ್ ನಗರದ 50 ವರ್ಷದ ಪುರುಷ (ರೋಗಿ ಸಂಖ್ಯೆ-394) ಹಾಗೂ ಮೋಮಿನಪುರ ಪ್ರದೇಶದ 19 ವರ್ಷದ ಯುವಕ (ರೋಗಿ ಸಂಖ್ಯೆ-395) ಕೊರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಬುಧವಾರ ಇಎಸ್‍ಐ ಆಸ್ಪತ್ರೆಯಿಂದ ಡಿಸ್ಚಾಜ್9 ಮಾಡಲಾಗಿದೆ ಎಂದು …

Read More »

ಕೊರೋನಾ ವಾರ್ಡ್​ನಲ್ಲಿ ಟ್ಯಾಬ್ ವ್ಯವಸ್ಥೆ: ರೋಗಿಗಳ ಜೊತೆ ಸಂಬಂಧಿಕರ ಸಂಪರ್ಕಕ್ಕೆ ವಿನೂತನ ತಂತ್ರ

ಕ ಲಬುರ್ಗಿ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 55ಕ್ಕೇರಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಮತ್ತೊಂದೆಡೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕೊರೋನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲವೆಂಬ ಆರೋಪ ನಿರಾಧಾರವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರಿಗೆ ಐಸೋಲೇಷನ್ ವಾರ್ಡ್​ಗೆ ಬಿಡಲಾಗಲ್ಲ. ಹೀಗಾಗಿ ಕೆಲವೊಬ್ಬರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವೆಲ್ಲ …

Read More »

ಲಾಕ್‍ಡೌನ್ ಮೀರಿ ಸಾಮೂಹಿಕ ಪ್ರಾರ್ಥನೆ- 15 ಜನರ ಬಂಧನ………..

ಕಲಬುರಗಿ: ಲಾಕ್‍ಡೌನ್ ನಿಯಮ ಮೀರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದವರಿಗೆ ಕಲಬುರಗಿಯ ಪೊಲೀಸರು ಬಿಸಿಮುಟ್ಟಿಸಿದ್ದಾರೆ. ಸೇಡಂ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮಸೀದಿಯಲ್ಲಿ ಸುಮಾರು 15 ಜನರು ನಮಾಜ್ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾಠಿ ರುಚಿ ತೋರಿಸಿ, ಎಲ್ಲ 15 ಮಂದಿಯನ್ನೂ ಬಂಧಿಸಿದ್ದಾರೆ. ಈ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ …

Read More »