Home / ಜಿಲ್ಲೆ / ಕಲಬುರ್ಗಿ (page 5)

ಕಲಬುರ್ಗಿ

ಕಲಬುರಗಿಗೆ ಬಂದಿಳಿದ ಸಿಎಂ ಬಿಎಸ್ ವೈ: ಸಂಜೆ ಇಲ್ಲಿಂದಲೇ ದಿಲ್ಲಿ ಪ್ರವಾಸ ಆರಂಭ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ವಿಮಾನ ಮೂಲಕ ಗುರುವಾರ ಕಲಬುರಗಿಗೆ ಬಂದಿಳಿದರು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗಿಯಾಗಲು ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆಗೆ ಉಪ ಮುಖ್ಯಮಂತ್ರಿಗಳು ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹ ಆಗಮಿಸಿದರು.   ಆರ್ ಸಿ ಡಾ‌.ಎನ್.ವಿ.ಪ್ರಸಾದ, ಐ.ಜಿ.ಪಿ. ಮನೀಷ ಖರ್ಬಿಕರ್, ಡಿಸಿ …

Read More »

ರಾಜ್ಯ ಸರ್ಕಾರದಿಂದ `ಕಲ್ಯಾಣ ಕರ್ನಾಟಕಕ್ಕೆ’ ಬಂಪರ್ ಗಿಫ್ಟ್

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಘೋಷಿಸಿದ್ದು, ಇಂದು 73 ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ 1,300 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ರ ಪುತ್ತಳಿಗೆ ಪೂಜೆ ಸಲ್ಲಿಸಿ ಸಿಎಂ ಮಲಾರ್ಪಣೆ ಮಾಡಿದರು. ನಂತರ ಡಿಎಆರ್ ಮೈದಾನದಲ್ಲಿ ದ್ವಜಾರೋಹಣ ನೇರವೇರಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, …

Read More »

ಎಲ್ಲವನ್ನೂ ಬಿಎಸ್‌ವೈ ಮಾಡುವುದಾದರೆ ನಿಮ್ಮ ಕೆಲಸವೇನು: ಲಕ್ಷ್ಮಣ ದಸ್ತಿ ಪ್ರಶ್ನೆ

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ವರ್ಷವೇ ಹೇಳಿದ್ದರು. ಅವರನ್ನು ಭೇಟಿ ಮಾಡಿ ನಿರಂತರವಾಗಿ ಒತ್ತಡ ಹಾಕಿಲ್ಲ. ಎಲ್ಲವನ್ನೂ ಮುಖ್ಯಮಂತ್ರಿ ಮಾಡುವುದಾದರೆ ನಿಮ್ಮ ಕೆಲಸವೇನು ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಟೀಕಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರವಾಗಿ ಒತ್ತಡ ಹಾಕಿದರೆ ಮಾತ್ರ ಈ ಭಾಗದ ಜನತೆಯ ಬೇಡಿಕೆಗಳು …

Read More »

ವೈಜನಾಥ ಪಾಟೀಲ ಸಂಸ್ಮರಣ ಗ್ರಂಥ ಪ್ರಕಟಿಸಲು ನಿರ್ಧಾರ

ಕಲಬುರ್ಗಿ: ‘371 (ಜೆ) ತಿದ್ದುಪಡಿ ಹೋರಾಟದ ರೂವಾರಿ, ಮಾಜಿ ಸಚಿವ ವೈಜನಾಥ ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಸಂಸ್ಮರಣ ಗ್ರಂಥ ಹೊರತರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಂಪಾದಕೀಯ ಸಮಿತಿ ರಚನೆ ಮಾಡಲಾಗಿದೆ’ ಎಂದು ವೈಜನಾಥ ಪಾಟೀಲರ ಸಂಸ್ಮರಣಾ ಸಂಚಿಕೆ ಸಮಿತಿ ಸಂಚಾಲಕ ಎಂ.ಬಿ.ಅಂಬಲಗಿ ಮತ್ತು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ ತಿಳಿಸಿದರು. ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ವೈಜನಾಥ …

Read More »

ಸ್ಥಳೀಯ ಉದ್ಯಮಿಗಳೇ ಹೂಡಿಕೆಗೆ ಮುಂದಾಗಿ: ಸಚಿವ ಶೆಟ್ಟರ

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮ ವಲಯ ಅಭಿವೃದ್ಧಿಗಾಗಿ ಹೂಡಿಕೆದಾರರನ್ನು ಆಕರ್ಷಿಸಬೇಕು ಎಂಬ ಬೇಡಿಕೆ ಬಹುದಿನಗಳಿಂದ ಇದೆ. ಆದರೆ, ಹೊರಗಿನವರು ಬಂದು ಹೂಡಿಕೆ ಮಾಡಲಿ ಎಂದು ಕಾಯುವುದಕ್ಕಿಂತ ಸ್ಥಳೀಯರೇ ಮುಂದೆ ಬಂದರೆ ಹೆಚ್ಚು ಪ್ರಯೋಜನವಾಗಲಿದೆ. ಯಾವುದೇ ಪ್ರದೇಶದ ಅಭಿವೃದ್ಧಿಗೆ ಸ್ಥಳೀಯ ಹೂಡಿಕೆಯ ಪಾತ್ರ ದೊಡ್ಡದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಸಲಹೆ ನೀಡಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ …

Read More »

ಮಹಿಳಾ ಪೊಲೀಸ್ ಪೇದೆಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆ

ಕಲಬುರಗಿ: ಮಹಿಳಾ ಪೊಲೀಸ್ ಪೇದೆಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದಲ್ಲಿ ನಡೆದಿದೆ. 34 ವರ್ಷದ ಸುರೇಖಾ ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಹಿಳಾ ಪೇದೆ. ಮೃತ ಸುರೇಖಾ ಕಲಬುರಗಿ ನಗರದಲ್ಲಿ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ ಸಂಜೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲ ತಿಂಗಳ ಹಿಂದೆ ಸುರೇಖಾ ಪತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ಇದೀಗ ಮಹಿಳಾ ಪೇದೆ ಸುರೇಖಾ ಕೂಡ ಸಾವನ್ನಪ್ಪಿದ್ದಾರೆ. …

Read More »

ಹಳೆ ವೈಷಮ್ಯಕ್ಕೆ ಕಲಬುರಗಿಯಲ್ಲಿ ಯುವಕ ಬಲಿಯಾದ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ 23 ವರ್ಷ ವಯಸ್ಸಿನ ಯುವಕನೊಬ್ಬನನ್ನು ಹಾಡುಹಗಲೇ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಕೃತ್ಯ ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ನಡೆದಿದೆ . ಯುವಕನನ್ನು ನಗರದ ರಾಣೇಶ್ ಪೀರ್ ದರ್ಗಾ ಬಡಾವಣೆ ನಿವಾಸಿ ವಿರೇಶ್ ಕಡಗಂಚಿ ಎಂದು ಗುರುತಿಸಲಾಗಿದೆ . ಪಲ್ಸರ್ ಬೈಕ್​ನಲ್ಲಿ ಬಂದ ಮೂವರು ಹಂತಕರು ಕೃತ್ಯವೆಸಗಿ ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ . ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿರೇಶ್​ನನ್ನು ಅಂಬ್ಯಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ …

Read More »

ನದಿಗೆ ಈಜುಲು ಹೋಗಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿ

ಕಲಬುರಗಿ : ನದಿಗೆ ಈಜುಲು ಹೋಗಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾದ ಘಟನೆ ಕಲಬುರಗಿ ಜಿಲ್ಲೆಯ ಕಾಗಿಣಾ ನದಿಯಲ್ಲಿ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ಸಂಪತ್ ಸಂಕ(18) ಮೃತ ಯುವಕ. ಶಾಲೆ, ಕಾಲೇಜ್ ರಜೆ ಇರುವ ಹಿನ್ನೆಲೆಯಲ್ಲಿ ಪ್ರತಿದಿನ ಸ್ನೇಹಿತರೊಂದಿಗೆ ಕಾಗಿಣಾ ನದಿಗೆ ಈಜುಲು ಹೋಗುತ್ತಿದ್ದರು. ಅದೇ ರೀತಿ ಗುರುವಾರವೂ ಸಹ ಹೋಗಿದ್ದಾರೆ. ಈಜು ಬರುತ್ತಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರಿಗೆ ಧುಮುಕ್ಕಿದ್ದ ಯುವಕ, ದುರದೃಷ್ಟವಶಾತ್ …

Read More »

ನಾಲ್ಕು ಜಿಲ್ಲೆಗಳಿಗೆ ಸಚಿವ ಸ್ಥಾನ ಮರೀಚಿಕೆ?

ಕಲಬುರ್ಗಿ: ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದ ಮೂವರೂ ಸೇರಿದಂತೆ ಕಲ್ಯಾಣ ಕರ್ನಾಟಕದ ಐವರು ಶಾಸಕರನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿಗಮ-ಮಂಡಳಿಗೆ ನೇಮಕ ಮಾಡಿದ್ದಾರೆ. ಆ ಮೂಲಕ ಈ ಜಿಲ್ಲೆಗಳಿಗೆ ಸದ್ಯ ಸಚಿವ ಸ್ಥಾನ ದೊರೆಯುವುದಿಲ್ಲ ಎಂಬ ಸಂದೇಶವೂ ರವಾನೆಯಾದಂತಾಗಿದೆ. ಬಳ್ಳಾರಿ ಜಿಲ್ಲೆಯ ಆನಂದ ಸಿಂಗ್‌ ಹಾಗೂ ಬೀದರ್‌ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಅವರು ಸಚಿವರಾಗಿದ್ದಾರೆ. ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ …

Read More »

ಕಲಬುರಗಿಲಾಕ್‍ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ರವಿವಾರ ಆದೇಶ

ಕಲಬುರಗಿ: ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜು.14 ರಿಂದ 20 ವರೆಗೆ ಕಲಬುರಗಿ ನಗರ & ಜಿಲ್ಲೆಯ ನಗರ-ಸ್ಥಳೀಯ ಸಂಸ್ಥೆಗಳ ಪ್ರದೇಶದಲ್ಲಿ ವಿಧಿಸಲಾಗಿದ್ದ ಸಂಪೂರ್ಣ ಲಾಕ್‍ಡೌನ್ ಅವಧಿಯನ್ನು ಮತ್ತೆ ಜು.27ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ರವಿವಾರ ಆದೇಶ ಹೊರಡಿಸಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ತೆರೆದು ಮುಚ್ಚತಕ್ಕದು. ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಗೆ ಈ ಸಮಯದ ನಿರ್ಬಂಧ …

Read More »