Breaking News

ಕಲಬುರಗಿ: ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ

Spread the love

ಕಲಬುರಗಿ: ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.

ಕಲಬುರಗಿ ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿದ್ದ ಖೂಬಾ ಫ್ಲಾಟ್ ಪ್ರದೇಶದ 45 ವರ್ಷದ ಪುರುಷ(ರೋಗಿ-926) ಮತ್ತು ಮೋಮಿನಪುರ ಕಂಟೈನ್‍ಮೆಂಟ್ ಝೋನ್‍ನಲ್ಲಿದ್ದ 60 ವರ್ಷದ ವೃದ್ಧ(ಮೃತ ರೋಗಿ-927) ಕೊರೊನಾ ಸೋಂಕಿಗೆ ತುತ್ತಾಗಿರುವುದು ವರದಿಯಾಗಿದೆ.

ಮೋಮಿನಪುರ ಕಂಟೈನ್‍ಮೆಂಟ್ ಝೋನ್‍ನ ನಿವಾಸಿ 60 ವರ್ಷದ ವೃದ್ಧ ಮೇ 11ರಂದೇ ಆಸ್ಪತ್ರೆಗೆ ಬರುವ ಮುನ್ನವೆ ನಿಧನರಾಗಿದ್ದಾರೆ. ಆದರೆ ಮರಣೋತ್ತರವಾಗಿ ಕೋವಿಡ್-19 ಪರೀಕ್ಷಿಸಲಾಗಿದ್ದು, ಇಂದು ಅವರ ವರದಿ ಕೊರೊನಾ ಪಾಸಿಟಿವ್ ಎಂದು ಬಂದಿದೆ.

ಜಿಲ್ಲೆಯಲ್ಲಿ ಕೊರೊನಾ ಪೀಡಿತ 75 ರೋಗಿಗಳಲ್ಲಿ 7 ಮಂದಿ ನಿಧನರಾಗಿದ್ದು, 44 ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಉಳಿದಂತೆ 24 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಇಂದು ಕರ್ನಾಟಕದಲ್ಲಿ 26 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 951ಕ್ಕೆ ಏರಿದೆ. ಈವರೆಗೆ 442 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಗುಣಮುಖರಾಗಿದ್ದು, ಸಾವಿನ ಸಂಖ್ಯೆ 32 ಕ್ಕೆ ತಲುಪಿದೆ.


Spread the love

About Laxminews 24x7

Check Also

ಹಳ್ಳಿಯಲ್ಲಿ ವಾಸಿಸಲು ಇಷ್ಟವಿಲ್ಲವೆಂದು ನವ ವಿವಾಹಿತೆ ಆತ್ಮಹತ್ಯೆ..!

Spread the loveಕಲಬುರಗಿ: ಪ್ರೀತಿಸಿ ಮದುವೆಯಾದ ನವ ವಿವಾಹಿತೆ ಎರಡೇ ತಿಂಗಳಲ್ಲಿ ನೇಣಿಗೆ ಶರಣಾದ ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ