Breaking News
Home / ಅಂತರಾಷ್ಟ್ರೀಯ (page 12)

ಅಂತರಾಷ್ಟ್ರೀಯ

ಉಮೇಶ್‌ ರೆಡ್ಡಿಗೆ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ: ಸುಪ್ರೀಂ ಕೋರ್ಟ್‌

ನವದೆಹಲಿ: ಬೆಳಗಾವಿ ಜೈಲಿನಲ್ಲಿರುವ ಸರಣಿ ಅತ್ಯಾಚಾರ, ದರೋಡೆ ಮತ್ತು ಕೊಲೆ ಪ್ರಕರಣಗಳ ಅಪರಾಧಿ ವಿಕೃತಕಾಮಿ ಉಮೇಶ್‌ ರೆಡ್ಡಿ ಅಲಿಯಾಸ್‌ ಬಿ.ಎ. ಉಮೇಶ್‌ಗೆ ಮರಣ ದಂಡನೆಯಿಂದ ವಿನಾಯಿತಿ ನೀಡಿರುವ ಸುಪ್ರೀಂ ಕೋರ್ಟ್‌, 30 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಶುಕ್ರವಾರ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್‌ ಮತ್ತು ಬೇಲಾ ಎಂ.ತ್ರಿವೇದಿ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲಯದಿಂದ ಮರಣ …

Read More »

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ : ಪಾಲಿಕೆ ಸದಸ್ಯರಿಗೆ ಸಿಎಂ ಬೊಮ್ಮಾಯಿ ಸನ್ಮಾನ

ಬೆಂಗಳೂರು : ಇತ್ತೀಚೆಗೆ ನಡೆದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಸದಸ್ಯರಿಗೆ ಸಿಎಂ ಬೊಮ್ಮಾಯಿ ಅಭಿನಂದಿಸಿ ಸನ್ಮಾನ ಮಾಡಿದ್ದಾರೆ.   ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ 35 ವಾರ್ಡ್ ಗಳ ಪೈಕಿ 17 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆ 17 ನೂತನ ಪಾಲಿಕೆ ಸದಸ್ಯರು ಹಾಗೂ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಇಂದು ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. …

Read More »

ನೌಕರಿ ಆಸೆ ಬಿಡಿಸಿದ ಮಿಶ್ರಕೃಷಿ

ನೇಸರಗಿ: ಬಿ.ಎಸ್.ಸಿ ಪದವಿ ಪಡೆದಿದ್ದರೂ ಸರ್ಕಾರ ನೌಕರಿಗಾಗಿ ಅಲೆದಾಡದೇ, ತಮ್ಮ ಹೊಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡ ಈ ಯುವಕ ಈಗ ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮದ ರವೀಂದ್ರ ಬಸಪ್ಪ ಶಿದ್ನಾಳ 15 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ 25 ಎಕರೆ ಹೊಲದಲ್ಲಿ ಸದ್ಯ ಕಬ್ಬು, ಸೇವಂತಿ ಹೂವು, ಚೆಂಡು ಹೂವು ಬೆಳೆದಿದ್ದಾರೆ. ಸೌತೆಕಾಯಿ, ಕಡಲೆ, ಜೋಳ, ಟೊಮೆಟೊ, ಮೆಣಶಿನಕಾಯಿ, ಕ್ಯಾಬೀಜ್, ಕುಂಬಳಕಾಯಿ ಕೂಡ ಅವರ ಕೈ …

Read More »

ಬೆಳಗಾವಿ: ಪ್ರೋತ್ಸಾಹಕ್ಕಾಗಿ ಕತೆ, ಚಿತ್ರಕಲೆ ಸ್ಪರ್ಧೆ

ಬೆಳಗಾವಿ: ಇಲ್ಲಿನ ಸಪ್ನಾ ಬುಕ್‌ಹೌಸ್‌ ಹಾಗೂ ರೋಷ್ಟ್ರಮ್‌ ಡಯರೀಸ್‌ ಸಂಘಟನೆ ಆಶ್ರಯದಲ್ಲಿ, ಈ ಭಾಗದ ಕಲಾವಿದರು- ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕತೆ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಅಭಿಷೇಕ ಬೆಂಡಿಗೇರಿ ಹೇಳಿದರು. ಚಿತ್ರಕಲೆ ಸ್ಪರ್ಧೆ 16 ವರ್ಷ ಕೆಳಗಿನ ಹಾಗೂ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ನಡೆಯಲಿದೆ. ಎಲ್ಲಿಯ ಕಲಾವಿದರೂ ಪಾಲ್ಗೊಳ್ಳಬಹುದು. ‘ಬೆಳಗಾವಿ’ ವಿಷಯದ ಬಗ್ಗೆ ಮಾತ್ರ ಪೇಂಟಿಂಗ್‌ ಬಿಡಿಸಬೇಕು. ನ. 30ರೊಳಗೆ ಸಪ್ನಾ ಬುಕ್‌ಹೌಸ್‌ನಲ್ಲಿ …

Read More »

BREAKING NEWS: ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಕೊಲೆ ಬೆದರಿಕೆ

ಬೆಂಗಳೂರು: ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ( Sri Ram Sene founder president Pramod Muthalik ) ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಬಂದಿರುವುದಾಗಿ ತಿಳಿದು ಬಂದಿದೆ. ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು – ಡಿ.ಕೆ. ಶಿವಕುಮಾರ್ ಪ್ರಶ್ನೆ ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಿನ್ನೆ ರಾತ್ರಿ ನಾಲ್ಕು ನಂಬರ್ ಗಳಿಂದ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಬೆಳಗಾವಿ …

Read More »

ಪ್ರಧಾನಿ ಮೋದಿ ಸೂಚನೆ ಮೇರೆಗೆ ಕರ್ನಾಟಕ – ಮಹಾರಾಷ್ಟ್ರ ರಾಜ್ಯಪಾಲರ ಸಭೆ

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಇಂದು ಕೊಲಾಪುರದಲ್ಲಿ ಉಭಯ ರಾಜ್ಯಗಳ ರಾಜ್ಯಪಾಲರ ಸಭೆ ನಡೆಯುತ್ತಿದ್ದು, ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಈ ಸಭೆ ನಡೆಯುತ್ತಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೊಲ್ಲಾಪುರಕ್ಕೆ ಆಗಮಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಾಯರಿ ಸ್ವಾಗತಿಸಿದರು. ಕೊಲ್ಲಾಪುರ ನಗರದ ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ …

Read More »

ಸಾವಿನ ತನಿಖೆ ಎಲ್ಲ ಆಯಾಮದಲ್ಲೂ ನಡೆಯುತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ: ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಬೆಳಗಾವಿ ಜಿಲ್ಲೆಗೆ ಗೃಹಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ, ಸಚಿವ ನಾರಾಯಣ ಗೌಡ ಹಂಪಿಯಿಂದ ನೇರವಾಗಿ ಬೆಳಗಾವಿ ಸುವರ್ಣ ಸೌಧದ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಈ ವೇಳೆ, ನಾಲ್ವರು ಸಚಿವರನ್ನು ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್ ಸ್ವಾಗತಿಸಿಕೊಂಡರು.   ಪ್ರಧಾನಿಯಿಂದ ಲೋಕಾರ್ಪಣೆ: ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಆರಗ …

Read More »

ಗೋಕಾಕ ತಾಲೂಕಿನ ಫಾಲ್ಸ್ ದಲ್ಲಿ ಕಾಣಿಸಿಕೊಂಡ ಮೊಸಳೆ.

ಗೋಕಾಕ ಫಾಲ್ಸ್ ದಲ್ಲಿ ಮೊಸಳೆ ಪ್ರತ್ಯೇಕ್ಷ. (ನೇಗಿನಾಳ ತೋಟ ( ತಡಸಲ ತೋಟ ) ಕೆಳೆದ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿತ್ತು ಮೊಸಳೆ. ಮೊಸಳೆ ಪತ್ತೆ ಹಚ್ಚಲು ಅಯೂಬ್ ಖಾನ್ ಟೀಂ ಹಾಗೂ ಅರಣ್ಯ ಇಲಾಖೆ ಸತತ ಪ್ರಯತ್ನ. ಇಂದು ಮತ್ತೆ ಪ್ರತ್ಯೇಕ್ಷವಾದ ಮೊಸಳೆ  ಗೋಕಾಕ ತಾಲೂಕಿನ ಫಾಲ್ಸ್ ದಲ್ಲಿ ಕಾಣಿಸಿಕೊಂಡ ಮೊಸಳೆ. ಮೊಸಳೆ ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರೆದಿದೆ.

Read More »

ತುಕ್ಕಾನಟ್ಟಿ-ಕಲ್ಲೋಳಿ ರಸ್ತೆ ಸುಧಾರಣೆಗೆ 9.60 ಕೋಟಿ ರೂ.: ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಸಾರ್ವಜನಿಕರ ಸುಗಮ ಸಂಚಾರಕ್ಕೆ ತುಕ್ಕಾನಟ್ಟಿಯಿಂದ ಕಲ್ಲೋಳಿವರೆಗಿನ ರಸ್ತೆ ಸುಧಾರಣಾ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದರು. ಗುರುವಾರದಂದು ಲೋಕೋಪಯೋಗಿ ಇಲಾಖೆಯಿಂದ 9.60 ಕೋಟಿ ರೂ. ವೆಚ್ಚದ ತುಕ್ಕಾನಟ್ಟಿ-ಕಲ್ಲೋಳಿ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಅಭಿವೃದ್ಧಿಯಿಂದ ಕಲ್ಲೋಳಿಯಿಂದ ಸಂಚರಿಸುವ ತುಕ್ಕಾನಟ್ಟಿ ಮತ್ತು ರಾಯಬಾಗ ತಾಲೂಕಿನ ಗ್ರಾಮಗಳಿಗೆ …

Read More »

ಎಂಎಲ್‌ಸಿ ಚುನಾವಣೆ: ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕಿಲ್ಲ: ಹೈಕೋರ್ಟ್‌

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಸಲ್ಲಿಸಿದ್ದ ಚುನಾವಣ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ …

Read More »