Home / new delhi / ವಚನ ಪುಸ್ತಕ ಮಳಿಗೆ ಉದ್ಘಾಟನೆ

ವಚನ ಪುಸ್ತಕ ಮಳಿಗೆ ಉದ್ಘಾಟನೆ

Spread the love

ಬೆಳಗಾವಿ: ಇಲ್ಲಿನ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಕಾಲೇಜಿನ ಗೇಟ್‌ ನಂ.3ರ ಬಳಿಯ ವಚನ ಅಧ್ಯಯನ ಕೇಂದ್ರದಲ್ಲಿ ಆರಂಭಿಸಿರುವ ಪುಸ್ತಕ ಮಾರಾಟ ಮಳಿಗೆಯನ್ನು ಭಾನುವಾರ ಉದ್ಘಾಟಿಸಲಾಯಿತು.

ಡಂಬಳ-ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಟೇಪ್‌ ಕತ್ತರಿಸಿದರು. ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಜಿಬಿಐಟಿ ಪ್ರಾಂಶುಪಾಲ ಪ್ರೊ.ಸಿದ್ರಾಮಪ್ಪ ವಿ.ಇಟ್ಟಿ ಇದ್ದರು.

‘ಮಳಿಗೆಯಲ್ಲಿ ವಚನ ಸಾಹಿತ್ಯ, ಧರ್ಮ, ತತ್ತ್ವಶಾಸ್ತ್ರ, ಅಧ್ಯಾತ್ಮ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಮೌಲಿಕ ಗ್ರಂಥಗಳು, ಪೂಜಾ ಸಾಮಗ್ರಿಗಳು, ವಿಭೂತಿ, ಲಿಂಗಗಳು, ರುದ್ರಾಕ್ಷಿಗಳು, ಶರಣರ ಫೋಟೊಗಳು ಮಾರಾಟಕ್ಕೆ ಲಭ್ಯ ಇವೆ. ವಚನ ಸಾಹಿತ್ಯ ಅಧ್ಯಯನ ಮಾಡುವವರಿಗೆ ಇವು ಬಹಳ ಅನುಕೂಲವಾಗಲಿದೆ’ ಎಂದು ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದರು.

 


Spread the love

About Laxminews 24x7

Check Also

ಬತ್ತಿದ ಮಲಪ್ರಭೆ, ಈ ನಾಲ್ಕು ಜಿಲ್ಲೆಗೆ ಜಲಕಂಟಕ

Spread the loveಬೆಳಗಾವಿ, ಮೇ.15: ಬೆಳಗಾವಿ(Belagavi) ಜಿಲ್ಲೆಯ ಕಣಕುಂಬಿ ಗ್ರಾಮದಲ್ಲಿ ಹುಟ್ಟುವ ಮಲಪ್ರಭಾ ನದಿ(Malaprabha River). ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ