Breaking News
Home / ಅಂತರಾಷ್ಟ್ರೀಯ / ಮನೀಷ್ ಶೆಟ್ಟಿ ಕೊಲೆ ಪ್ರಕರಣ: ಬಾರ್ ಮಾಲೀಕನ ಹತ್ಯೆಗೆ ನಡೆದಿತ್ತು ಭರ್ಜರಿ ಸ್ಕೆಚ್​!

ಮನೀಷ್ ಶೆಟ್ಟಿ ಕೊಲೆ ಪ್ರಕರಣ: ಬಾರ್ ಮಾಲೀಕನ ಹತ್ಯೆಗೆ ನಡೆದಿತ್ತು ಭರ್ಜರಿ ಸ್ಕೆಚ್​!

Spread the love

ಬೆಂಗಳೂರು: ಬಾರ್ ಮಾಲೀಕ ಮನೀಷ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳ ಪತ್ತೆಗೆ 9 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಘಟನಾ ಸ್ಥಳದ ಮಾಹಿತಿ ಆಧರಿಸಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಜೊತೆಗೆ, ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ, ಸಿಸಿಬಿ ಮತ್ತು ಕೇಂದ್ರ ವಿಭಾಗ ಪೊಲೀಸರಿಂದ ಹಂತಕರಿಗೆ ಶೋಧ ನಡೆಸಲಾಗುತ್ತಿದೆ.
 ಇತ್ತ, ಮನೀಷ್ ಶೆಟ್ಟಿ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಹಾಗೂ ಬಂದೂಕು ಪತ್ತೆಯಾಗಿದೆ.

ಕೊಲೆ ನಡೆದ ಸ್ಥಳದಿಂದ ಕೂಗಳತೆ ದೂರದಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಇದಲ್ಲದೆ, ಹಂತಕರು ಬಳಸಿದ್ದ ಬೈಕ್​ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ, ಖಾಕಿ ಪಡೆ ಕೃತ್ಯಕ್ಕೆ ಬಳಸಲಾಗಿದ್ದ ಗನ್​ ಯಾರ ಹೆಸರಲ್ಲಿದೆ ಎಂದು ಪತ್ತೆಹಚ್ಚಲು ಮುಂದಾಗಿದ್ದಾರೆ. ಜೊತೆಗೆ, ಅಲ್ಲೇ ಇದ್ದ ಮೂರು ಜಾಕೆಟ್, ಒಂದು ಟೋಪಿ, ಬ್ಯಾಗ್ ಹಾಗೂ ಕೃತ್ಯಕ್ಕೆ ಬಳಸಿದ್ದ ಇತರೆ ವಸ್ತುಗಳನ್ನು FSL ಅಧಿಕಾರಿಗಳ ತಂಡವು ಪರಿಶೀಲನೆ ನಡೆಸುತ್ತಿದೆ.

ಮನೀಷ್ ಶೆಟ್ಟಿ ಕೊಲೆಗೆ ನಡೆದಿತ್ತು ಪೂರ್ವ ನಿಯೋಜಿತ ಪ್ಲ್ಯಾನ್
ಬಾರ್​ ಮಾಲೀಕ ಮನೀಷ್ ಶೆಟ್ಟಿ ಕೊಲೆಗೆ ಹಂತಕರು ಪಕ್ಕ ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದರು ಎಂದು ಹೇಳಲಾಗಿದೆ. ಪೂರ್ವ ನಿಯೋಜಿತವಾಗಿ ಪ್ಲ್ಯಾನ್ ಮಾಡಿದ್ದ ಹಂತಕರು ಮನೀಷ್ ಚಲನವಲನಗಳನ್ನು ಗಮನಿಸಿ ಪಕ್ಕಾ ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ. ಹಾಗಾಗಿ, ಮನೀಷ್​ ಬಾರ್ ಬಳಿ ಬರೋದನ್ನೇ ಕಾದುಕುಳಿತ ಹಂತಕರು ಅಲ್ಲೇ ಶೆಟ್ಟಿಯ ಹತ್ಯೆ ಮಾಡಿದ್ದಾರೆ.

ಮನೀಷ್ ಶೆಟ್ಟಿ ಕೊಲೆಗೆ ಬಂದಿದ್ದು ಮೂವರು ಹಂತಕರ ತಂಡ ಎಂದು ಹೇಳಲಾಗಿದೆ. ಆ ಮೂವರಿಂದ‌ಲೇ ಮನೀಷ್ ಶೆಟ್ಟಿಯ ಭೀಕರ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಜೊತೆಗೆ, ಹಂತಕರು ಒಂದೇ ಸುಜುಕಿ ಸಮುರಾಯ್ ಬೈಕ್​ನಲ್ಲಿ ಬಂದಿದ್ದರು ಎಂದು ಸಹ ಹೇಳಲಾಗಿದೆ.

ಭೂಗತ ಪಾತಕಿಯ ಆಪ್ತವಲಯದಲ್ಲಿದ್ದ ಮನೀಷ್ ಶೆಟ್ಟಿ
ಅಸಲಿಗೆ ಬಾರ್​ ಮಾಲೀಕ ಮನೀಷ್ ಶೆಟ್ಟಿ ಮಂಗಳೂರಿನಲ್ಲಿ ಹೆಚ್ಚು ಕಾಂಟ್ಯಾಕ್ಟ್ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ. ಭೂಗತ ಪಾತಕಿ ಬನ್ನಂಜೆ ರಾಜನ ಆಪ್ತವಲಯದಲ್ಲಿದ್ದ ಮನೀಷ್ ಶೆಟ್ಟಿ ಈ ಹಿಂದೆ ಜೈಲುವಾಸ ಸಹ ಅನುಭವಿಸಿ ಬಂದಿದ್ದ. ಆತನ ವಿರುದ್ಧ ರೌಡಿಶೀಟ್​ ಸಹ ಓಪನ್ ಆಗಿತ್ತು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ