Breaking News
Home / new delhi / ಡಿಜೆ ಹಳ್ಳಿ ಗಲಭೆ: ಸರ್ಕಾರದ ಕೈ ಸೇರಿದ ಘಟನೆಯ ಸತ್ಯಶೋಧನಾ ವರದಿ

ಡಿಜೆ ಹಳ್ಳಿ ಗಲಭೆ: ಸರ್ಕಾರದ ಕೈ ಸೇರಿದ ಘಟನೆಯ ಸತ್ಯಶೋಧನಾ ವರದಿ

Spread the love

ಬೆಂಗಳೂರು: ಡಿಜೆ ಹಳ್ಳಿ‌ ಮತ್ತು ಕೆಜಿ‌ ಹಳ್ಳಿ ಗಲಭೆ ಪ್ರಕರಣದ NIA ತನಿಖೆಗೆ ಬಿಜೆಪಿಯಲ್ಲಿ ಆಗ್ರಹ ವ್ಯಕ್ತವಾಗಿದೆ.‌ ಈ ಸಂಬಂಧ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದ್ದು, SDPI ನಿಷೇಧಕ್ಕೂ ಪಕ್ಷ ಒತ್ತಾಯಿಸಿದೆ.

ಡಿಜೆ ಹಳ್ಳಿಯಲ್ಲಿ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿರಾತಕರು, ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ವಾಹನವನ್ನ ಪಲ್ಟಿ ಮಾಡಿ ಬೆಂಕಿ ಹಚ್ಚಿದ್ರು. ಪೊಲೀಸ್ ಠಾಣೆ ಆವರಣದಲ್ಲಿ ನಿಂತಿದ್ದ ವಾಹನಗಳಿಗೆ ಬೆಂಕಿ ಇಟ್ಟು, ವಾಹನವನ್ನ ಜಖಂ ಮಾಡಿದ್ರು.

ಎರಡು ಪ್ರದೇಶಗಳನ್ನ ಕಟುಕರಪ ಅಕ್ಷರಶ: ಸ್ಮಶಾನ ಮಾಡಿದ್ರು. ಯಾರದೋ ಮೇಲಿನ ಸಿಟ್ಟಿಗೆ, ಇನ್ಯಾರದ್ದೋ ಮೇಲೆ ದಾಳಿ ಮಾಡಿ, ಸಾರ್ವಜನಿಕ ವಸ್ತುಗಳನ್ನ ನಾಶ ಮಾಡಿದ್ರು.

ಸತ್ಯ ಶೋಧನಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ!
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಸತ್ಯ ಶೋಧನಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.‌ ಬೆಂಗಳೂರಿನಲ್ಲಿ ನಿನ್ನೆ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿಎಂ ಯಡಿಯೂರಪ್ಪ ಅವರಿಗೆ ವರದಿ ಹಸ್ತಾಂತರ ಮಾಡಿದ್ದಾರೆ. ವರದಿಯಲ್ಲಿ ಸುಮಾರು ಆರು ಅಂಶಗಳನ್ನು ಉಲ್ಲೇಖಿಸಲ್ಪಟ್ಟಿದ್ದು, ಸರ್ಕಾರದಿಂದ ನಷ್ಟ ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ. ಇನ್ನು ಈ ವರದಿ ಆಧರಿಸಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಕೂಡಾ ನಡೆಸಲಾಗಿದ್ದು, ಪೊಲೀಸ್ ಇಲಾಖೆ ಮೂಲಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ‌.

‘ಎನ್‌ಐಎ ತ‌ನಿಖೆಗೆ ಒಳಪಡಿಸಬೇಕು’
ಇಡೀ‌ ಗಲಭೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ತ‌ನಿಖೆಗೆ ಒಳಪಡಿಸಬೇಕು ಎಂಬ ಒತ್ತಾಯ ನಿನ್ನೆಯ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದೆ.‌ ಇದಕ್ಕಾಗಿ ಪೂರ್ಣ ಎನ್ ಐ ಎ ತನಿಖೆಗೆ ಒಪ್ಪಿಸುವ ಸಂಬಂಧ ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಗಲಭೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಎಸ್ ಡಿಪಿಐ ನಿಷೇಧದ ಬಗ್ಗೆ ಕೂಡಾ ಬಿಜೆಪಿ ಕೋರ್ ಕಮಿಟಿ ಸಭೆ ಚರ್ಚಿಸಲಾಗಿದೆ. ಆದರೆ ಎಸ್ ಡಿಪಿಐ ಒಂದು ರಾಜಕೀಯ ಪಕ್ಷವಾಗಿರುವ ಕಾರಣ ನಿಷೇಧ ಸಂಬಂಧ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪಾಲಿಸಬೇಕಾಗಿದೆ. ಹಾಗಾಗಿ ಆ ಅಗತ್ಯ ಕಾನೂನಾತ್ಮಕ ಕ್ರಮಗಳತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದೂ ಒತ್ತಾಯಿಸಲಾಗಿದೆ.‌

ಈಗಾಗಲೇ ಗಲಭೆಯ ಎರಡು ಪ್ರಕರಣಗಳನ್ನು ‌ಎನ್ ಐಎ ತನಿಖೆ ನಡೆಸುತ್ತಿದೆ. ಉಳಿದ ಪ್ರಕರಣಗಳಲ್ಲಿ ಸಿಸಿಬಿ ತನಿಖೆ ಮುಂದುವರಿದಿದೆ.‌ ಹೀಗಾಗಿ ಈಗ ಇಡೀ ಗಲಭೆ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸುವ ಸಂಬಂಧ ಈಗ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಗಂಭೀರ ಒತ್ತಡ ಆರಂಭಿಸಿದೆ.‌ ಮುಂದೆ ಈ ಪ್ರಕರಣ ಯಾವ ತಿರುವು ಪಡೆಯುತ್ತೆ ಕಾದು ನೋಡ್ಬೇಕಿದೆ.


Spread the love

About Laxminews 24x7

Check Also

ಪುನಃ ನಾನೂರು ರೂಪಾಯಿ ದಾಟಿದೆ ಟೊಮ್ಯಾಟೊ ಬೆಲೆ ..!

Spread the loveಚಿಕ್ಕಬಳ್ಳಾಪುರ‌: ಟೊಮ್ಯಾಟೊ ಬೆಲೆ (tomato price) ಪುನಃ ನಾನೂರು ರೂಪಾಯಿ ದಾಟಿದೆ. ಹತ್ತು ಕೆಜಿ ಟೊಮ್ಯಾಟೊ ಬಾಕ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ