Breaking News
Home / new delhi / ರಾಜ್ಯದಲ್ಲಿಂದು ಹೊಸ 9140 ಕೋವಿಡ್ ಪ್ರಕರಣಗಳು ಪತ್ತೆ 94 ಜನ ಬಲಿ

ರಾಜ್ಯದಲ್ಲಿಂದು ಹೊಸ 9140 ಕೋವಿಡ್ ಪ್ರಕರಣಗಳು ಪತ್ತೆ 94 ಜನ ಬಲಿ

Spread the love

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮುಂದುವರೆತ್ತಿದ್ದು, ಇಂದು ಮತ್ತೆ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ 9140 ಜನರಿಗೆ ಕೊರೊನಾ ಸೋಂಕು ತಗುಲಿದೆ. 94 ಜನ ಬಲಿಯಾಗಿದ್ದಾರೆ. 9557 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶನಿವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ ಇಂದು ಮತ್ತೆ ಒಂದೇ ದಿನಕ್ಕೆ ಸೋಂಕಿತರಗಿಂತ ಹೆಚ್ಚು ದಾಖಲೆ ಪ್ರಮಾಣದಲ್ಲಿ ಕೋವಿಡ್ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ.

ನಿನ್ನೆಗಿಂತ ಇವತ್ತು ಕಡಿಮೆ ಪ್ರಮಾಣದಲ್ಲಿ ಕೊರೋನಾ ಸೋಂಕಿಗೆ 94 ಮಂದಿ ಮೃತಪಟ್ಟಿದ್ದಾರೆ. ಇಂದು ಕೊರೋನಾಗೆ ಮತ್ತೆ ಬೆಂಗಳೂರು ನಗರದಲ್ಲಿ ಹೆಚ್ಚು 21 ಮಂದಿ ಬಲಿಯಾಗಿದ್ದಾರೆ. ಇನ್ನು ಬಾಗಲಕೋಟೆಯಲ್ಲಿ 0, ಬಳ್ಳಾರಿ 8, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 21, ಬೀದರ್ 0, ಚಾಮರಾಜ ನಗರ 2, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 1, ಚಿತ್ರದುರ್ಗ 4, ದಕ್ಷಿಣ ಕನ್ನಡ 5, ದಾವಣಗೆರಿ 1, ಧಾರವಾಡ 9, ಗದಗ 1, ಹಾಸನ 1, ಹಾವೇರಿ 1, ಕಲಬುರಗಿ 3, ಕೊಡಗು 42, ಕೋಲಾರ 2, ಕೊಪ್ಪಳ 4, ಮಂಡ್ಯ 0, ಮೈಸೂರು 14, ರಾಯಚೂರು 2, ರಾಮನಗರ 0, ಶಿವಮೂಗ್ಗ 5, ತುಮಕೂರು 1, ಉಡಪಿ 2, ಉತ್ತರ ಕನ್ನಡ 2, ವಿಜಯಪೂರ 1, ಯಾದಗಿರಿ 0 ಜನ ಸೇರಿದಂತೆ ಹೀಗೆ ರಾಜ್ಯದಲ್ಲಿ ಇಂದು ಒಂದೇ ದಿನಕ್ಕೆ 130 ಜನರನ್ನು ಕೊರೋನಾ ಬಲಿ ತೆಗೆದುಕೊಂಡಿದೆ.

ಇನ್ನು ಬೆಂಗಳೂರು ನಗರದಲ್ಲಿ ಮತ್ತೆ ಹೆಚ್ಚು 3552 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದೇ ರೀತಿ ಬಾಗಲಕೋಟೆಯಲ್ಲಿ 175, ಬಳ್ಳಾರಿ 366, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 211, ಬೆಂಗಳೂರು ನಗರ 3552, ಬೀದರ್ 101, ಚಾಮರಾಜ ನಗರ 60, ಚಿಕ್ಕಬಳ್ಳಾಪೂರ 101, ಚಿಕ್ಕಮಗಳೂರು 159, ಚಿತ್ರದುರ್ಗ 227, ದಕ್ಷಿಣ ಕನ್ನಡ 401, ದಾವಣಗೆರೆ 267, ಧಾರವಾಡ 239, ಗದಗ 49, ಹಾಸನ 324, ಹಾವೇರಿ 213, ಕಲಬುರ್ಗಿ 222, ಕೊಡಗು 27, ಕೋಲಾರ 53, ಕೊಪ್ಪಳ 183, ಮಂಡ್ಯ 193, ಮೈಸೂರು 637, ರಾಯಚೂರು 131, ರಾಮನಗರ 81, ಶಿವಮೊಗ್ಗ 155, ತುಮಕೂರು 304, ಉಡುಪಿ 169, ಉತ್ತರ ಕನ್ನಡ 130, ವಿಜಯಪೂರ 58, ಯಾದಗಿರಿ 151 ಜನರಿಗೆ ಸೇರಿದಂತೆ ಹೀಗೆ ರಾಜ್ಯದಲ್ಲಿ ಇಂದು ಒಂದೇ ದಿನಕ್ಕೆ 9140 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತ ಸಂಖ್ಯೆ 449551ಕ್ಕೆ ಏರಿಕೆಯಾಗಿದೆ. ಇದರಲ್ಲಿ ಇಂದಿನ 9557 ಜನ ಸೇರಿ ಒಟ್ಟು 344556 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 7161ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇನ್ನೂ 97815 ಸಕ್ರಿಯ ಪ್ರಕರಣಗಳಿವೆ.

 

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಬೈಲಹೊಂಗಲ :ನರೇಗಾ ಕೆಲಸಕ್ಕೆ ಹೆಚ್ಚಿನ ಜನರು ಬರುವಂತೆ ಕರೆ- ವಿಜಯ ಪಾಟೀಲ.

Spread the loveಗ್ರಾಪಂ ಸುತಗಟ್ಟಿ ಮತ್ತು ದೇಶನೂರ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಗಳಿಗೆ ಇಂದು ಸಹಾಯಕ ನಿರ್ದೇಶಕ ವಿಜಯ ಪಾಟೀಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ