Breaking News
Home / new delhi / ರಾಜ್ಯದ ಜನತೆಗೆ ಗುಡ್‌ ನ್ಯೂಸ್‌: ಇನ್ಮುಂದೆ ಗ್ರಾಮ ಪಂಚಾಯಿತಿಗಳಲ್ಲೇ ಸಿಗಲಿದೆ ‘ಜನನ- ಮರಣ ಪ್ರಮಾಣ ಪತ್ರ’

ರಾಜ್ಯದ ಜನತೆಗೆ ಗುಡ್‌ ನ್ಯೂಸ್‌: ಇನ್ಮುಂದೆ ಗ್ರಾಮ ಪಂಚಾಯಿತಿಗಳಲ್ಲೇ ಸಿಗಲಿದೆ ‘ಜನನ- ಮರಣ ಪ್ರಮಾಣ ಪತ್ರ’

Spread the love

ಮಂಗಳೂರು : ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಜನನ ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳನ್ನಾಗಿ ನೇಮಸಿ ಸರ್ಕಾರವು ಆದೇಶಿಸಿದೆ.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಆನ್‍ಲೈನ್ ಜನನ ಮರಣ ನೋಂದಣಿ ವ್ಯವಸ್ಥೆಯು 2015 ರ ಎಪ್ರಿಲ್ 1 ರಿಂದ ಜಾರಿಯಲ್ಲಿದ್ದು, ಸದರಿ ದಿನಾಂಕದ ನಂತರದಲ್ಲಿ ನೋಂದಣಿಯಾದ ದಾಖಲೆಗಳನ್ನು ಸರ್ಕಾರವು ನಿಗದಿಪಡಿಸಿದ ದರಗಳನ್ವಯ ಸೇವಾ ಶುಲ್ಕವನ್ನು ಪಾವತಿಸಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸಾರ್ವಜನಿಕರು ಪ್ರಮಾಣ ಪತ್ರಗಳನ್ನು ಪಡೆಯಬಹುದು. 2015 ಏಪ್ರಿಲ್ 1 ರ ಪೂರ್ವದಲ್ಲಿ ನೋಂದಣಿಯಾದ ಜನನ ಮರಣ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಘಟನೆಗಳು ನೋಂದಣಿಯಾದ ತಾಲೂಕು ಕಚೇರಿ, ನಗರ ಸ್ಥಳೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದು.

ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೋಂದಣಿಯಾದ ಜನನ ಮರಣ ಘಟನೆಗಳನ್ನು ಹೆಸರು, ದಿನಾಂಕ, ತಂದೆ, ತಾಯಿಯ ಹೆಸರು ನಮೂದಿಸಿ ಪ್ರಮಾಣ ಪತ್ರಗಳನ್ನು ಹುಡುಕಬಹುದು.

ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊರಗಡೆ ನೋಂದಣಿಯಾದ ಜನನ ಮರಣ ಘಟನೆಗಳ ಪ್ರಮಾಣ ಪತ್ರಗಳನ್ನು ಹುಡುಕಲು ನೋಂದಣಿ ಸಂಖ್ಯೆ ಕಡ್ಡಾಯವಾಗಿರುತ್ತದೆ. ಗ್ರಾಮ ಪಂಚಾಯತಿಗಳಲ್ಲಿ ಪ್ರತಿಯೊಂದು ಜನನ ಮರಣ ಪ್ರಮಾಣ ಪತ್ರದ ಪ್ರತಿಗಳಿಗೆ ರೂ. 5 ಶುಲ್ಕ ಪಾವತಿಸಬೇಕು ಎಂದು ದ.ಕ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಅಪರ ಜಿಲ್ಲಾ ಜನನ ಮರಣಗಳ ರಿಜಿಸ್ಟ್ರಾರ್ ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ