Breaking News

ಇ-ಪಾಸ್​​ ಪಡೆದ ಅಂತರ್​​ ರಾಜ್ಯ ಪ್ರಯಾಣಿಕರಿಗೆ ಬಸ್​​ ವ್ಯವಸ್ಥೆ – ಕೆಎಸ್​ಆರ್​​ಟಿಸಿ ಸಂಸ್ಥೆ

Spread the love

ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್‌ನ ಅಟ್ಟಹಾಸ ಮುಂದುವರೆದಿದೆ. ಹೀಗಾಗಿ ಈ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ಲಾಕ್‌ಡೌನ್‌ ವಿಸ್ತರಣೆಯಾಗಿದೆ. ಎರಡು ಹಂತದ ಲಾಕ್‌ಡೌನ್‌ಗಳನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್‌ಡೌನ್‌ ಸಡಿಲಗೊಳಿಸಿ ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿದೆ. ಇದರಲ್ಲಿ ಅಂತರ್‌ ರಾಜ್ಯ ಪ್ರಯಾಣವೂ ಒಂದು.

ಹೌದು, ಅಂತರ್​ ರಾಜ್ಯ ಪ್ರಯಾಣಕ್ಕಾಗಿ ಜನ ಸರ್ಕಾರದಿಂದ ಇ- ಪಾಸ್‌ ಪಡೆಯಬೇಕಾದ ಅಗತ್ಯ ಇದೆ. ಯಾವುದೇ ಮುನ್ಸೂಚನೆ ಇಲ್ಲದೇ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದ ಕಾರಣ ಜನ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ. ಹಲವರು ತಮ್ಮ ರಾಜ್ಯಗಳಿಗೆ ಹೋಗಬೇಕಿದೆ. ಇಂತಹವರಿಗಾಗಿ ಸರಕಾರ ಒನ್‌ ಟೈಮ್‌ ಪಾಸ್‌ ನೀಡುತ್ತಿದ್ದು, ಒಂದು ಬಾರಿಯ ಪ್ರಯಾಣಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹೀಗಿರುವಾಗ ಕೆಎಸ್​​ಆರ್​ಟಿಸಿ ಸಾರಿಗೆ ಸಂಸ್ಥೆ ಅಂತರ್​​ ರಾಜ್ಯ ಪ್ರಯಾಣ ಬೆಳೆಸುವವರಿಗೆ ಷರತ್ತುಬದ್ದ ಸಾರಿಗೆ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತರರಾಜ್ಯ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೋಗಬೇಕಾದವರು ಟಿಕೆಟ್​​ ಬುಕ್​​ ಮಾಡಬಹುದು. ಈಗ ಟಿಕೆಟ್​​ ಕಾಯ್ದಿರಿಸಲು ಕೆಎಸ್​ಆರ್​​ಟಿಸಿ ಸಹಾಯ ವಾಣಿ ಕೇಂದ್ರ ಆರಂಭಿಸಿದೆ. ಶೇ.50ರಷ್ಟು ಬುಕ್ಕಿಂಗ್​​ ಆದಲ್ಲಿ ಸಾರಿಗೆ ಸೌಲಭ್ಯ ಮಾಡಲಾಗುವುದು ಎಂದು ಕೆಎಸ್​ಆರ್​​ಟಿಸಿ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ