Breaking News
Home / ಜಿಲ್ಲೆ / ಬೆಂಗಳೂರು / ರಾಮನಗರ : 68 ಸಿಬ್ಬಂದಿಯ 2ನೇ ಕಾವಿಡ್ -19 ಟೆಸ್ಟ್ ಕೂಡ ನೆಗೆಟಿವ್ …….

ರಾಮನಗರ : 68 ಸಿಬ್ಬಂದಿಯ 2ನೇ ಕಾವಿಡ್ -19 ಟೆಸ್ಟ್ ಕೂಡ ನೆಗೆಟಿವ್ …….

Spread the love

ಬೆಂಗಳೂರು: ಪಾದರಾಯನಪುರ ಗಲಭೆಯ ಆರೋಪಿಗಳು ರಾಮನಗರದ ಜಿಲ್ಲಾ ಕಾರಾಗೃಹದಲ್ಲಿದ್ದ ವೇಳೆ ಅವರ ಮೇಲೆ ನಿಗಾವಹಿಸಿದ್ದ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣಾ ಫಲಿತಾಂಶ ನೆಗಟಿವ್ ಬಂದಿದೆ.

“ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜಿಲ್ಲೆ ಈಗಲೂ ಗ್ರೀನ್‌ ಝೋನ್‌ ಆಗಿ ಉಳಿದಿದೆ ಎಂಬ ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಖುಷಿ ಆಗುತ್ತಿದೆ, ” ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬುಧವಾರ ತಿಳಿಸಿದ್ದಾರೆ.

“ಪಾದರಾಯನಪುರದ ಆರೋಪಿಗಳ ನೇರ ಸಂಪರ್ಕಕ್ಕೆ ಬಂದಿದ್ದ ರಾಮನಗರದ ಜೈಲು ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಚಾಲಕರು ಸೇರಿದಂತೆ ಒಟ್ಟು ಸಂಪರ್ಕಕ್ಕೆ ಬಂದಿದ್ದ ಎಲ್ಲ 68 ಮಂದಿಯನ್ನು ಎರಡನೇ ಬಾರಿಗೆ ತಪಾಸಣೆಗೆ ಒಳಪಡಿಸಲಾಗಿತ್ತು. ಎಲ್ಲರಿಗೆ ನೆಗೆಟಿವ್ ಫಲಿತಾಂಶ ಬಂದಿರುವುದು ನನಗೆ ತುಂಬಾ ಸಮಾಧಾನ ತಂದಿದೆ,”ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.

ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸಿದ್ದ ಆರೋಪಿಗಳಲ್ಲಿ ಐವರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಜೈಲನ್ನೇ ಸೀಲ್‌ಡೌನ್ 100 ಮೀಟರ್‌ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಿ, ಎಚ್ಚರವಹಿಸಲಾಗಿತ್ತು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ