Home / Uncategorized / ಬಾಗಲಕೋಟೆ: ಕಬ್ಬಿನ ಗದ್ದೆಯಲ್ಲಿ 5 ನರಿ ಮರಿಗಳು ಪತ್ತೆ!

ಬಾಗಲಕೋಟೆ: ಕಬ್ಬಿನ ಗದ್ದೆಯಲ್ಲಿ 5 ನರಿ ಮರಿಗಳು ಪತ್ತೆ!

Spread the love

ಬಾಗಲಕೋಟೆ ಜಿಲ್ಲೆಯ ಹೆರಕಲ್ಲ ಗ್ರಾಮದ ಕಬ್ಬಿನ ಗದ್ದೆಯಲ್ಲಿ 5 ನರಿ ಮರಿಗಳು ಪತ್ತೆ. ಗ್ರಾಮದ ಯೋಧ ಈರಪ್ಪ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವಾಗ ಪತ್ತೆಯಾದ ನರಿ ಮರಿಗಳು.

 

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಹೆರಕಲ್ಲ ಗ್ರಾಮದ ಬಳಿ ಕಬ್ಬಿನ ಗದ್ದೆಯಲ್ಲಿ 5 ನರಿ ಮರಿಗಳು ಪತ್ತೆಯಾಗಿವೆ.

 

ಗ್ರಾಮದ ಯೋಧ ಈರಪ್ಪ ವಾರದ ಎಂಬುವವರ ಜಮೀನಿನಲ್ಲಿ ಮರಿಗಳು ಪತ್ತೆಯಾಗಿವೆ.

 

ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಈರಪ್ಪ ಅವರು ರಜೆ ಸಮಯದಲ್ಲಿ ಮನೆಗೆ ಬಂದಿದ್ದರು. ತಮ್ಮ ಜಮೀನು ಕಬ್ಬು ಕಟಾವು ಮಾಡುವಾಗ ನರಿ ಮರಿಗಳು ಪತ್ತೆಯಾಗಿವೆ. ಐದು ಮರಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಲು ನೀಡಿದ್ದಾರೆ. ಆದರೆ, ಕೇವಲ ಎರಡು ದಿನಗಳ ಮರಿ ಇರುವುದರಿಂದ ತಾಯಿಯ ಹಾಲನ್ನು ಬಿಟ್ಟು ಬೇರೆ ಯಾವುದೇ ಹಾಲನ್ನು ಕುಡಿಯುತ್ತಿಲ್ಲ.

 

ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ನರಿ ಮರಿಗಳು

 

ಹೀಗಾಗಿ ಈರಪ್ಪ ಮರಿಗಳನ್ನು ತಮ್ಮ‌ ಜಮೀನಿನಲ್ಲಿ ವಾಪಸ್​​ ಇಟ್ಟು ಬಂದಿದ್ದಾರೆ. ಆದರೆ ತಾಯಿ ನರಿ ಮರಿಗಳ ಹತ್ತಿರ ಇನ್ನೂ ಬಂದಿಲ್ಲ. ಹೀಗಾಗಿ ಮರಿಗಳನ್ನು ಏನು ಮಾಡಬೇಕು ಎಂಬ ಚಿಂತನೆಯಲ್ಲಿ ಯೋಧ ಈರಪ್ಪ ಇದ್ದಾರೆ. ಇಂದು ಮಧ್ಯಾಹ್ನ ತಮ್ಮ ಕೆಲಸಕ್ಕೆ ಕಾಶ್ಮೀರಕ್ಕೆ ಹೋಗುತ್ತಿರುವ ಈರಪ್ಪ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಆಗಮಿಸಿ ಸೂಕ್ತ ಮಾಹಿತಿ‌ ನೀಡುವಂತೆ ಮನವಿ ಮಾಡಿದ್ದಾರೆ.

 

ಈ ಬಗ್ಗೆ ಬೀಳಗಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮರಿಗಳು ಮೊದಲು ಇದ್ದ ಜಾಗಕ್ಕೆ ಬಿಡುವಂತೆ ಮಾಹಿತಿ ನೀಡಿದ್ದಾರೆ. ನರಿ ಮರಿಗಳನ್ನು ಹುಡುಕಿಕೊಂಡು ತಾಯಿ ನರಿ ಹತ್ತಿರ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

Spread the loveಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಕಂಟ್ರಿ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸೆಂಟ್ರಿಂಗ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ