Breaking News
Home / Uncategorized / ಅತಿ ಕಡಿಮೆ ‘ಆಕ್ಟಿವ್ ಕೇಸ್’ ಹೊಂದಿರುವ ಕರ್ನಾಟಕದ ಐದು ಜಿಲ್ಲೆಗಳು..

ಅತಿ ಕಡಿಮೆ ‘ಆಕ್ಟಿವ್ ಕೇಸ್’ ಹೊಂದಿರುವ ಕರ್ನಾಟಕದ ಐದು ಜಿಲ್ಲೆಗಳು..

Spread the love

ಬೆಂಗಳೂರು, ಜುಲೈ 6: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಟಾಪ್ ಹತ್ತರೊಳಗೆ ಕರ್ನಾಟಕ ಗುರುತಿಸಿಕೊಂಡಿದೆ. ಒಂದು ಹಂತದಲ್ಲಿ ಇತರೆ ರಾಜ್ಯಗಳಿಗೆ ಮಾದರಿ ಎನಿಸಿಕೊಂಡಿದ್ದ ಕರ್ನಾಟಕ ಈಗ ಗಂಭೀರ ಸ್ಥಿತಿ ತಲುಪಿತ್ತಿದೆ.

ಈವರೆಗೂ ರಾಜ್ಯದಲ್ಲಿ 23,474 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ 9847 ಜನರು ಗುಣಮುಖರಾಗಿದ್ದು, 13,251 ಕೇಸ್‌ಗಳು ಸಕ್ರಿಯವಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲೇ 8167 ಕೇಸ್‌ ಆಕ್ಟಿವ್ ಆಗಿದೆ.
ಕೋಟೆನಾಡು ಚಿತ್ರದುರ್ಗ

ಕರ್ನಾಟಕದಲ್ಲಿ ಅತಿ ಕಡಿಮೆ ಆಕ್ಟಿವ್ ಕೇಸ್ ಹೊಂದಿರುವ ಜಿಲ್ಲೆ ಚಿತ್ರದುರ್ಗ. ಕೋಟೆನಾಡಿನಲ್ಲಿ ಜುಲೈ 5ರ ವರದಿಯಂತೆ 35 ಮಂದಿ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು 83 ಮಂದಿಗೆ ಸೋಂಕು ತಗುಲಿದೆ. 48 ಜನರು ಚೇತರಿಸಿಕೊಂಡಿದ್ದಾರೆ. ಈ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ಕಾಫಿನಾಡು ಚಿಕ್ಕಮಗಳೂರು ಎಷ್ಟಿದೆ?

ಚಿಕ್ಕಮಗಳೂರಿನಲ್ಲಿ ಒಟ್ಟು 42 ಕೇಸ್‌ಗಳು ಸಕ್ರಿಯವಾಗಿದೆ. ಈ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94. ಇದರಲ್ಲಿ 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮೂರನೇ ಜಿಲ್ಲೆ ದಾವಣಗೆರೆ

ದಾವಣಗೆರೆಯಲ್ಲಿ ಪ್ರಸ್ತುತ 44 ಸಕ್ರಿಯ ಕೇಸ್‌ಗಳು ವರದಿಯಲ್ಲಿವೆ. ನಿನ್ನೆಯವರೆಗೂ ಜಿಲ್ಲೆಯಲ್ಲಿ ಒಟ್ಟು 356 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 301 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 11 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.
ಕೊಪ್ಪಳದಲ್ಲಿ ಎಷ್ಟು ಆಕ್ಟಿವ್ ಕೇಸ್?

ಕೊಪ್ಪಳದಲ್ಲಿ ಇನ್ನೂ 51 ಕೇಸ್ ಸಕ್ರಿಯವಾಗಿದೆ. ಈವರೆಗೂ ಜಿಲ್ಲೆಯಲ್ಲಿ 130 ಜನರಿಗೆ ಮಹಾಮಾರಿ ವಕ್ಕರಿಸಿತ್ತು. ಅದರಲ್ಲಿ 77 ಜನರು ಗುಣಮುಖರಾಗಿದ್ದಾರೆ. ಇಬ್ಬರು ಕೊವಿಡ್‌ನಿಂದ ಸಾವನ್ನಪ್ಪಿದ್ದಾರೆ.
ಕೊಡಗಿನಲ್ಲಿ ಸಕ್ರಿಯ ಕೇಸ್ ಎಷ್ಟಿದೆ?

ಕೊಡಗಿನಲ್ಲಿ ಒಟ್ಟು 76 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಅದರಲ್ಲಿ ಕೇವಲ ಮೂರು ಜನ ಮಾತ್ರ ಚೇತರಿಸಿಕೊಂಡಿದ್ದಾರೆ. ಇನ್ನೂ 73 ಮಂದಿ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಡಗಿನಲ್ಲೂ ಯಾವುದೇ ಸಾವು ವರದಿಯಾಗಿಲ್ಲ. ಇನ್ನುಳಿದಂತೆ ಬೆಳಗಾವಿಯಲ್ಲಿ 75 ಕೇಸ್, ಚಿಕ್ಕಬಳ್ಳಾಪುರದಲ್ಲಿ 79 ಕೇಸ್, ಬಾಗಲಕೋಟೆಯಲ್ಲಿ 88 ಕೇಸ್ ಆಕ್ಟಿವ್ ಆಗಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ