Breaking News
Home / ರಾಜ್ಯ / ಸರ್ಕಾರದ ನಿರ್ಬಂಧವನ್ನು ಪಕ್ಕಕ್ಕಿಟ್ಟು ಗಣೇಶೋತ್ಸವಕ್ಕೆ ಸಿದ್ಧತೆ, 21 ದಿನ ಗಣಪತಿ ಇಟ್ಟು ಅದ್ಧೂರಿ ಗಣೇಶ ಉತ್ಸವ ಮಾಡುತ್ತೇವೆ ಎಂದ ಸಂಘ ಪರಿವಾರ

ಸರ್ಕಾರದ ನಿರ್ಬಂಧವನ್ನು ಪಕ್ಕಕ್ಕಿಟ್ಟು ಗಣೇಶೋತ್ಸವಕ್ಕೆ ಸಿದ್ಧತೆ, 21 ದಿನ ಗಣಪತಿ ಇಟ್ಟು ಅದ್ಧೂರಿ ಗಣೇಶ ಉತ್ಸವ ಮಾಡುತ್ತೇವೆ ಎಂದ ಸಂಘ ಪರಿವಾರ

Spread the love

ರಾಜ್ಯ ಬಿಜೆಪಿ ಸರ್ಕಾರ ಗಣೇಶೋತ್ಸವಕ್ಕೆ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಆದ್ರೆ, ಸರ್ಕಾರದ ಆದೇಶಕ್ಕೆ ಸಂಘ ಪರಿವಾರವೇ ಸೆಡ್ಡು ಹೊಡೆಯಲು ಅಣಿಯಾಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೋಟೆನಾಡಿನಲ್ಲಿ ಅದ್ಧೂರಿ‌ ಗಣೇಶೋತ್ಸವಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.

ಚಿತ್ರದುರ್ಗ: ಪ್ರತಿ ವರ್ಷ ಕೋಟೆನಾಡಿನಲ್ಲಿ ಗಣೇಶೋತ್ಸವ ನಡೆಯುತ್ತಿತ್ತು. ಆದ್ರೆ ಈ ವರ್ಷ3ನೇ ಅಲೆ ಭೀತಿಯಿಂದ ಗಣೇಶೋತ್ಸವದ ಕೊರೊನಾ ಕರಿನೆರಳು ಬಿದ್ದಿದೆ. ಖಡಕ್ ರೂಲ್ಸ್ ಹೇರಿ ಅದ್ಧೂರಿ ಗಣೇಶೋತ್ಸವಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಹೀಗೆ ಸರ್ಕಾರದ ಟಫ್ ರೂಲ್ಸ್‌ ನಡುವೆ ಕೋಟೆನಾಡಿನ ಹಿಂದೂ ಮಹಾಸಭಾ ಗಣಪತಿ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಬೃಹತ್ ವೇದಿಕೆ ಗಣೇಶ ಉತ್ಸವಕ್ಕೆ ಸಜ್ಜಾಗುತ್ತಿದೆ. 7-8ಅಡಿಯ ಗಣೇಶ ಪ್ರತಿಷ್ಠಾಪನೆಗೆ ಸಿನಿಮಾ ಸೆಟ್‌ನಂತೆ ವೇದಿಕೆ ರೆಡಿಮಾಡಿಕೊಳ್ಳಲಾಗುತ್ತಿದೆ. ಇನ್ನು ಎಂದಿನಂತೆ ಸಾಂಪ್ರದಾಯಿಕ ಆಚರಣೆ ನಡೆಯಲಿದ್ದು, 21ನೇ ದಿನ ಗಣೇಶ ವಿಸರ್ಜನೆ ಮಾಡುತ್ತೇವೆ ಎಂದು ಭಜರಂಗದಳ ಮುಖ್ಯಸ್ಥ ಪ್ರಭಂಜನ್ ತಿಳಿಸಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆ‌ ಬೊಮ್ಮಾಯಿ ಸರ್ಕಾರ ಕೆಲ ನಿರ್ಬಂಧ ಹೇರಿ‌ ಆದೇಶ ಹೊರಡಿಸಿದೆ. ಗಣೇಶ ಮೂರ್ತಿ ಎತ್ತರ, ಐದು ದಿನ ಮಾತ್ರ ಅವಕಾಶ ಹಾಗೂ ನಿಯಮಿತ ಪೆಂಡಾಲ್ ಸ್ಥಳ‌ ಸೇರಿದಂತೆ ಇತರೆ ನಿರ್ಬಂಧಗಳನ್ನು ವಿಧಿಸಿದೆ. ಆದ್ರೆ, ಸಂಘ ಪರಿವಾರ ಮಾತ್ರ ನಾವು 21 ದಿನ ಗಣಪತಿ ಇಟ್ಟು ಅದ್ಧೂರಿಯಾಗಿ ಗಣೇಶ ಉತ್ಸವ ಮಾಡುತ್ತೇವೆ ಎನ್ನುತ್ತಿದೆ. ಸರ್ಕಾರ ನಿರ್ಬಂಧ ಸಡಿಲಿಸದಿದ್ದರೇ ಸಂಘ ಪರಿವಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ದದಲ್ಲಿ ಎಂದಿನಂತೆ ಅದ್ಧೂರಿ ಗಣೇಶೋತ್ಸವಕ್ಕೆ ಸಂಘ ಪರಿವಾರ ಸಿದ್ಧವಾಗಿದೆ. ಸರ್ಕಾರದ ಆದೇಶದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಗಣೇಶ ಹಬ್ಬಕ್ಕೆ ಸಜ್ಜಾಗುತ್ತಿದೆ. ಜಿಲ್ಲಾಡಳಿತ ಮತ್ತು ಸರ್ಕಾರ ಈ ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್ ಹಾಕುತ್ತಾ? ಅಥವಾ ಒತ್ತಡಕ್ಕೆ ಮಣಿದು ನಿಯಮಗಳನ್ನ ಸಡಿಲಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ