Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / 129 ನೇ ವಿಶ್ವರತ್ನ ಡಾ||ಬಿ.ಆರ್.ಅಂಬೇಡ್ಕರರ ಜಯಂತಿ ಆಚರಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ.

129 ನೇ ವಿಶ್ವರತ್ನ ಡಾ||ಬಿ.ಆರ್.ಅಂಬೇಡ್ಕರರ ಜಯಂತಿ ಆಚರಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ.

Spread the love

 

ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮದಲ್ಲಿ 129 ನೇ ವಿಶ್ವರತ್ನ ಡಾ||ಬಿ.ಆರ್.ಅಂಬೇಡ್ಕರರ ಜಯಂತಿಯನ್ನು ಪೂಜೆ ಮಾಡುವ ಮೂಲಕ ಅತಿ ಸರಳವಾಗಿ ಆಚರಿಸಲಾಯಿತು.
ಪ್ರಸ್ತುತ ಕೋವಿಡ್—19 ವೈರೆಸ್ ಹರಡುವಿಕೆಯನ್ನು ತಡೆಗಟ್ಟವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಪಾಲಿಸುವ ನಿಟ್ಟಿನಲ್ಲಿ ಡಾ||ಬಿ.ಆರ್.ಅಂಬೇಡ್ಕರರ 129 ನೇ ಜಯಂತಿಯನ್ನು ಸುಲಧಾಳ ಗ್ರಾಮದಲ್ಲಿ ಅತಿ ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಸುಲಧಾಳ ಗ್ರಾಮದ ಅಧ್ಯಕ್ಷರಾದ ಎನ್.ವಾಯ್.ಸತ್ತೆನ್ನವರ ಅವರು ಮಾತನಾಡಿ ಕರೋನಾ ವೈರೆಸ್ ಜಗತ್ತಿಗೆ ದಿನೇ ದಿನೇ ಮಾರಕವಾಗಿ ಹರಡುತ್ತಿದೆ. ಆದ್ದರಿಂದ ಎಲ್ಲರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಮಾಸ್ಕ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಮ್ಮ ನಮ್ಮ ಊರುಗಳನ್ನು ˌಸ್ವಚ್ಛವಾಗಿಡಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಎನ್ ವಾಯ್ ಸತ್ತೆನ್ನವರ ಉಪಾಧ್ಯಕ್ಷರು ಅಡಿವೆಪ್ಪಾ ಕೆಂಪಣ್ಣವರ ಶಿವರಾಯಿ ನಾಯಿಕ ದೊಡ್ಡಪ್ಪಾ ಸನದಿ ಸಂತೋಷ ದಿಂಡಲಕುಂಪಿ ಮಹಾದೇವ ಸತ್ತೆನ್ನವರ ರಮೇಶ ಸತ್ತೆನ್ನವರ ರವಿ ಸತ್ಯನಾಯಿಕ ಸಂತೋಷ ಮಲ್ಲಣ್ಣವರ ಯೇಸು ಪೂಜೇರಿ ಹಿರಿಯರಾದ ಯಲ್ಲಪ್ಪಾ ಕೆಂಪಣ್ಣವರ ಅರ್ಜುನ ಮಲ್ಲಣ್ಣವರ ಲಕ್ಷ್ಮಣ ಪೂಜೇರಿ ಸಿದ್ದಪ್ಪಾ ಕೆಸರೂರ ಮಲಿಕಜಾನ ಜಮಾದಾರ ಸಿದ್ದಪ್ಪಾ ಸತ್ತೆನ್ನವರ ಬಸಪ್ಪಾ ಕೆಂಪಣ್ಣವರ ದುರ್ಗಪ್ಪಾ ಸತ್ತೆಣ್ಣವರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ