Breaking News
Home / ರಾಜ್ಯ / ಗಾಳಿ, ಮಳೆಯಿಂದ ಬೀದಿಗೆ ಬಿದ್ದ ಹಾವೇರಿ ಜನರ ಬದುಕು; ಶಾಶ್ವತ ಸೂರಿಗೆ ಸ್ಥಳೀಯರ ಆಗ್ರಹ

ಗಾಳಿ, ಮಳೆಯಿಂದ ಬೀದಿಗೆ ಬಿದ್ದ ಹಾವೇರಿ ಜನರ ಬದುಕು; ಶಾಶ್ವತ ಸೂರಿಗೆ ಸ್ಥಳೀಯರ ಆಗ್ರಹ

Spread the love

ಹಾವೇರಿ: ಜಿಲ್ಲೆಯ ಹಂದಿಗನೂರು, ಯಲಗಚ್ಚ, ಮೇಲ್ಮುರಿ ಸೇರಿದಂತೆ ಕೆಲವೆಡೆ ಬಿರುಗಾಳಿ ಸಮೇತ ಸುರಿದ ಮಳೆಗೆ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದರಿಂದ ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಕಟ್ಟಡದ ಮೇಲೆ ಮರವೊಂದು ಉರುಳಿ ಬಿದ್ದಿದೆ. ಶಾಲಾ ಆವರಣದಲ್ಲಿದ್ದ ಮರ ಉರುಳಿ ಬಿದ್ದಿದ್ದರಿಂದ ಶಾಲೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ. ಶಾಲೆಯಲ್ಲಿ ಯಾರೂ ಇಲ್ಲದಿರುವ ಸಮಯ ಆಗಿದ್ದರಿಂದ ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ.

ಬೀದಿಗೆ ಬಿದ್ದ ಬದುಕು
ಹಂದಿಗನೂರು ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿನ ಮನೆಗಳ ಮೇಲ್ಛಾವಣಿಗಳು ಬಿರುಗಾಳಿಗೆ ಹಾರಿ ಹೋಗಿವೆ. ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದರಿಂದ ಮಳೆಗೆ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಆಹಾರ ಪದಾರ್ಥಗಳು ಹಾನಿಯಾಗಿವೆ. ಬಿರುಗಾಳಿಯೊಂದಿಗೆ ಬಂದ ಮಳೆ ಗ್ರಾಮದ ಮೂರ್ನಾಲ್ಕು ಕುಟುಂಬಗಳನ್ನು ಬೀದಿಗೆ ಬೀಳುವಂತೆ ಮಾಡಿದೆ.

ಹಂದಿಗನೂರು, ಮೇಲ್ಮುರಿ ಸೇರಿದಂತೆ ಕೆಲವು ಗ್ರಾಮಗಳ ಜನರು 2019ರಲ್ಲಿ ಸಂಭವಿಸಿದ ನೆರೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅರ್ಧಂಬರ್ಧ ಬಿದ್ದ ಮನೆಗಳಲ್ಲೇ ಹೇಗೋ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಈಗ ಬಿರುಗಾಳಿಯೊಂದಿಗೆ ಬಂದ ಮಳೆ ಜನರನ್ನು ಮತ್ತೆ ಬೀದಿಗೆ ಬೀಳುವಂತೆ ಮಾಡಿದೆ. ಕೂಡಲೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯಾದವರಿಗೆ ಸೂಕ್ತ ಪರಿಹಾರ ನೀಡಬೇಕಿದೆ. ಜೊತೆಗೆ ಶಾಶ್ವತ ಸೂರಿನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಸ್ಥಳೀಯರಾದ ಮಲ್ಲಿಕಾರ್ಜುನ ಅರಳಿ ಆಗ್ರಹಿಸುತ್ತಿದ್ದಾರೆ.

ಶಾಲೆಯ ಕಟ್ಟಡದ ಮೇಲೆ ಬಿದ್ದಿರುವ ಮರ

2019ರಲ್ಲಿ ಬಂದ ವರದಾ ನದಿಯ ಪ್ರವಾಹದಿಂದ ಮೂವತ್ತಕ್ಕೂ ಅಧಿಕ ಕುಟುಂಬಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ತಾತ್ಕಾಲಿಕ ಸೂರಿನಲ್ಲಿ ವಾಸವಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬೀಸಿದ ಬಿರುಗಾಳಿ ಮತ್ತು ಮಳೆಗೆ ತಾತ್ಕಾಲಿಕ ಸೂರಿನ ಮೇಲ್ಛಾವಣಿಗಳು ಹಾರಿ ಹೋಗಿ ಹಾನಿಯಾಗಿತ್ತು. ಈಗ ಮತ್ತೆ ಬಿರುಗಾಳಿ ಸಮೇತ ಬಂದ ಮಳೆ ಮನೆಯಲ್ಲಿನ ವಸ್ತುಗಳನ್ನು ಹಾನಿ ಮಾಡಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸ್ಥಳೀಯ ಕೊಟ್ರೇಶ ತಿಳಿಸಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ