Breaking News
Home / ರಾಜ್ಯ / ಕಾಯ್ದೆ ಹಿಂದೆ ವಿದೇಶಿ ಕೈವಾಡ ಆರೋಪ: ಪರಿಸರ ಸಂಸ್ಥೆಗೆ ದಂಡ ಪಾವತಿಸಲು ಹೈಕೋರ್ಟ್ ಸೂಚನೆ

ಕಾಯ್ದೆ ಹಿಂದೆ ವಿದೇಶಿ ಕೈವಾಡ ಆರೋಪ: ಪರಿಸರ ಸಂಸ್ಥೆಗೆ ದಂಡ ಪಾವತಿಸಲು ಹೈಕೋರ್ಟ್ ಸೂಚನೆ

Spread the love

ಬೆಂಗಳೂರು, ಫೆ.3: ಪರಿಸರ ಸಂರಕ್ಷಣೆ ಕಾಯ್ದೆಯನ್ನು ವಿದೇಶಿ ಪ್ರಭಾವಕ್ಕೆ ಒಳಗಾಗಿ ರೂಪಿಸಲಾಗಿದೆ ಎಂದು ಆಕ್ಷೇಪಾರ್ಹ ಹೇಳಿಕೆ ಸಲ್ಲಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಂಡ ವಿಧಿಸಲು ತೀರ್ಮಾನಿಸಿರುವ ಹೈಕೋರ್ಟ್ ದಂಡದ ಹಣವನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗೆ ಪಾವತಿಸುವಂತೆ ಸೂಚಿಸಿದೆ.

ನೂರು ಕಿ.ಮೀ ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಪರಿಸರ ಪರಿಣಾಮ ಅಧ್ಯಯನ (ಇಐಎ) ಅನ್ವಯಿಸದಿರಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಹಿಂದಿನ ವಿಚಾರಣೆ ವೇಳೆ ಕಾಯ್ದೆ ರೂಪಿಸಿರುವುದರ ಹಿಂದೆ ವಿದೇಶಿ ಪ್ರಭಾವವಿದೆ ಎಂದು ಅಕ್ಷೇಪಾರ್ಹ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ಇಂತಹ ಹೇಳಿಕೆ ಸಲ್ಲಿಸಿರುವುದರ ಹಿಂದಿನ ಉದ್ದೇಶವನ್ನು ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿದ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ನಿರ್ದೇಶಿಸಿತ್ತು,

ಈ ಸಂಬಂಧ ಪ್ರಾಧಿಕಾರದ ಪರ ಹಿರಿಯ ವಕೀಲರು ನೀಡಿದ ಸಮಜಾಯಿಷಿಗಳು ನ್ಯಾಯಾಲಯಕ್ಕೆ ಒಪ್ಪಿಗೆಯಾಗಲಿಲ್ಲ. ಹೀಗಾಗಿ, ಎನ್‍ಎಚ್‍ಎಐಗೆ ದಂಡ ವಿಧಿಸುವುದನ್ನು ಖಚಿತಪಡಿಸಿದ ಪೀಠ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಸ್ಥಾನಮಾನಕ್ಕೆ ಅನುಗುಣವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗೆ ದಂಡವನ್ನು ದೇಣಿಗೆ ರೂಪದಲ್ಲಿ ಪಾವತಿಸಲಿ. ಎಷ್ಟು ಪಾವತಿಸಬೇಕು, ಯಾರಿಗೆ ಪಾವತಿಸಬೇಕು ಎಂಬುದನ್ನು ನ್ಯಾಯಾಲಯ ಸೂಚಿಸುವುದಿಲ್ಲ. ಆದರೆ, ಪಾವತಿಸುವ ಮೊತ್ತ ಸೂಕ್ತವೆನ್ನಿಸದಿದ್ದರೆ ನ್ಯಾಯಾಲಯವೇ ಎಷ್ಟು ದಂಡ ವಿಧಿಸಬೇಕೆಂಬುದನ್ನು ನಿರ್ಧರಿಸಲಿದೆ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಅಧಿಕಾರದಿಂದ ಇಳೀರಿ, 24 ಗಂಟೆಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. : ಆರ್. ಅಶೋಕ್ ಸವಾಲು

Spread the loveಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ