Breaking News
Home / ಜಿಲ್ಲೆ / ಸ್ಮಾಟ್‍ಫೋನ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ಣುಗಳನ್ನು ಕಳಕೋತಿರಾ ಹುಷಾರ್ !

ಸ್ಮಾಟ್‍ಫೋನ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ಣುಗಳನ್ನು ಕಳಕೋತಿರಾ ಹುಷಾರ್ !

Spread the love

ಮಾನವನ ಕಣ್ಣಿನ ಸ್ವಾಭಾವಿಕ ನೋಡುವ ವಿಧಾನವೆಂದರೆ, ಯಾವುದಾದರೂ ವಸ್ತುವಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳನ್ನು ಆ ವಸ್ತುವು ಹೀರುವುದರಿಂದ ಹಾಗೂ ಅದರ ಪ್ರತಿಫಲನದಿಂದ ಉಂಟಾಗುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ. ಈ ಪ್ರಕ್ರಿಯೆಯಲ್ಲಿ ನಮ್ಮ ಅಕ್ಷಿಪಟಲದ ಮೇಲೆ ಬೀಳುವ ಬೆಳಕಿನ ಶಕ್ತಿಯು ಅಲ್ಪ ಪ್ರಮಾಣದ್ದಾಗಿರುತ್ತದೆ.

ಆದರೆ ವಿದ್ಯುನ್ಮಾನ ಪರದೆಗಳನ್ನು ವೀಕ್ಷಿಸುವಾಗ ಈ ಕಿರಣಗಳು ನೇರವಾಗಿ ಅಕ್ಷಿಪಟಲದ ಮೇಲೆ ಬೀಳುವುದರಿಂದ ಹೆಚ್ಚು ಪ್ರಮಾಣದ ಶಕ್ತಿಪಾತ ಕಣ್ಣಿನ ಮೇಲಾಗುತ್ತದೆ. ಫೋನಿನಲ್ಲಿ ಚಲನಚಿತ್ರ ವೀಕ್ಷಣೆ ಕಣ್ಣು ಹಾಗೂ ಕಿವಿ ಎರಡಕ್ಕೂ ಹಾನಿಕಾರಕ. ಹಾಗಾಗಿ ಚಾಳೀಸು ಬರಲು ಇನ್ನು 40 ವರ್ಷ ಕಾಯಬೇಕಿಲ್ಲ!

ಎಡೆಬಿಡದೆ ನಿರಂತರವಾಗಿ ಪರದೆ ಸ್ಮಾಟ್‍ಫೋನ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ರೆಪ್ಪೆಯನ್ನು ಬಡಿಯುವ ಗತಿ ನಿಧಾನವಾಗುತ್ತದೆ.

ಇದರಿಂದ ಕಣ್ಣಿನ ಹೊರಭಾಗದ ದ್ರವ ಆರಿಹೋಗಿ ಅನೇಕ ಕಣ್ಣಿನ ತೊಂದರೆಗಳು ಕಾಣಿಸುತ್ತವೆ.

ನಿದ್ದೆಗೆಡಿಸುವ  ಸ್ಮಾರ್ಟ್ ‘ ಫೋನ್

ತಾರುಣ್ಯದಲ್ಲಿ ಮನುಷ್ಯನಿಗೆ 8 ರಿಂದ 9 ಗಂಟೆ ನಿದ್ರೆಯ ಅಗತ್ಯ ಇದೆ. ಫೇಸ್‍ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹ, ಮಲಗುವಾಗಲೂ ಕಿವಿಗೆ ಹಾಕಿಕೊಂಡು ಹಾಡುಗಳನ್ನು ಕೇಳುವ ಚಟ, ಇವುಗಳಿಂದಾಗಿ ನಿದ್ರೆಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಮನುಷ್ಯನ ಸ್ಮರಣ ಸಾಮಥ್ರ್ಯವನ್ನು ಕುಂಠಿತಗೊಳಿಸುವುದಲ್ಲದೆ ನಿದ್ರಾಹೀನತೆ, ಖಿನ್ನತೆ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ