Breaking News
Home / ಜಿಲ್ಲೆ / ಬೆಂಗಳೂರಿನ ರಸ್ತೆಗುಂಡಿಗಳ ಚಿತ್ರವನ್ನು ವಾಟ್ಯಾಪ್ಪ್ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಿದರೆ ಚಿತ್ರಗಳು ಹೈಕೋರ್ಟ್ ತಲುಪಲಿವೆ.

ಬೆಂಗಳೂರಿನ ರಸ್ತೆಗುಂಡಿಗಳ ಚಿತ್ರವನ್ನು ವಾಟ್ಯಾಪ್ಪ್ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಿದರೆ ಚಿತ್ರಗಳು ಹೈಕೋರ್ಟ್ ತಲುಪಲಿವೆ.

Spread the love

ಬೆಂಗಳೂರು: ಬೆಂಗಳೂರಿನ ರಸ್ತೆಗುಂಡಿಗಳ ಚಿತ್ರವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಿದರೆ ಚಿತ್ರಗಳು ಹೈಕೋರ್ಟ್ ತಲುಪಲಿವೆ.

ಸಾರ್ವಜನಿಕರಿಂದಲೇ ನಗರದ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾಧಿಕಾರ ಮುಂದಾಗಿದೆ.

ಬಿಬಿಎಂಪಿ ನಡೆಸಿರುವ ರಸ್ತೆಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸಾಲ್ವ್ ನಿಂಜಾ ಎಂಬ ಸ್ವಯಂ ಸೇವಕ ಸಂಸ್ಥೆಯ ಸಹಕಾರದೊಂದಿಗೆ ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರಿಂದಲೇ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸಲಾಗುತ್ತದೆ. ಅದಕ್ಕಾಗಿ ವಾಟ್ಸಾಪ್‌ ಸಂಖ್ಯೆಯನ್ನು ನಿಗದಿಪಡಿಸಿದೆ.

ಜ.30ರವರೆಗೆ ಎಷ್ಟು ಸಾಧ್ಯವೋ ಅಷ್ಟು ರಸ್ತೆಗುಂಡಿಗಳ ಮಾಹಿತಿ ನೀಡಲು ಅವಕಾಶವಿದೆ. ಸಾರ್ವಜನಿಕರು ಒದಗಿಸುವ ಎಲ್ಲಾ ವಿವರಗಳನ್ನು ಒಟ್ಟುಗೂಡಿಸಿ, ಹೈಕೋರ್ಟ್‌ಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಾಧಿಕಾರ ನೀಡಲಾಗಿರುವ 8095500118 ವಾಟ್ಸಾಪ್ ಸಂಖ್ಯೆಗೆ ಸಾರ್ವಜನಿಕರು helpbengaluru ಎಂಬ ಕೋಡ್ ಕಳುಹಿಸಬೇಕು. ಕನ್ನಡ ಅಥವಾ ಇಂಗ್ಲಿಷ್ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಬರುವ ಸೂಚನೆಗಳನ್ನು ಅನುಸರಿಸಬೇಕು.

ಬಳಿಕ ರಸ್ತೆ ಗುಂಡಿಗಳು,ಪಾದಚಾರಿ ಮಾರ್ಗಗಳ ಸಮಸ್ಯೆ ಕುರಿತು ಫೋಟೊ ಲೊಕೇಷನ್‌ನೊಂದಿಗೆ ವರದಿ ಮಾಡಬಹುದಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ