Breaking News
Home / ರಾಜ್ಯ / ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ.

Spread the love

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ.

ರಾಷ್ಟ್ರಪತಿ ಕೋವಿಂದ್‌, ‘ಎಲ್ಲರಿಗೂ ಹೊಸವರ್ಷದ ಶುಭಾಶಯಗಳು. ಹೊಸ ಆರಂಭ ಮಾಡಲು, ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಗೆ ನೆರವಾಗಲು ಹೊಸವರ್ಷವು ಅವಕಾಶ ಮಾಡಿಕೊಡುತ್ತದೆ. ಕೋವಿಡ್-19 ಸನ್ನಿವೇಶದಲ್ಲಿ ಎದುರಾದ ಸವಾಲುಗಳು, ಒಗ್ಗಟ್ಟಿನೊಂದಿಗೆ ಮುನ್ನಡೆಯುವ ನಮ್ಮ ಸಂಕಲ್ಪವನ್ನು ಬಲಪಡಿಸಿವೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ನಿಮಗೆ 2021ರ ಶುಭಾಶಯಗಳು! ಈ ವರ್ಷ ಉತ್ತಮ ಆರೋಗ್ಯ, ಸಂತಸ ಮತ್ತು ಸಮೃದ್ಧಿ ತರಲಿ. ಭರವಸೆ ಮತ್ತು ಸ್ವಾಸ್ಥ್ಯದ ಮನೋಭಾವ ಮೇಲುಗೈ ಸಾಧಿಸಲಿ’ ಎಂದು ಪ್ರಧಾನಿ ಮೋದಿ ಶುಭಕೋರಿದ್ದಾರೆ.

‘ಹೊಸ ವರ್ಷದ ಆರಂಭವಾಗುತ್ತಿರುವಂತೆಯೇ ನಾವು ಕಳೆದುಕೊಂಡವನ್ನು ನೆನಪಿಸಿಕೊಳ್ಳುತ್ತಾ, ನಮಗಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಧನ್ಯವಾದಗಳನ್ನು ಹೇಳೋಣ. ನನ್ನ ಹೃದಯವು ಅನ್ಯಾಯದ ಶಕ್ತಿಗಳ ವಿರುದ್ಧ ಗೌರವ ಮತ್ತು ಘನತೆಯಿಂದ ಹೋರಾಟ ನಡೆಸುವ ರೈತರು ಮತ್ತು ಕಾರ್ಮಿಕರ ಜೊತೆಗಿದೆ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ‘ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ, ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ ಪಾಲನೆ ಮರೆಯದಿರಿ’ ಎಂದು ಕರೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜನತೆಯ ಬೇನೆ, ಬೇಸರ, ಸಂಕಷ್ಟಗಳು ದೂರವಾಗಲಿ. ಸುಖ-ಸಂತೋಷ-ಆರೋಗ್ಯ ಬದುಕಾಗಲಿ. ಜನತಂತ್ರವು ಉಳಿಯಲಿ ಬೆಳೆಯಲಿ. ಹೊಸ ವರ್ಷ ಸರ್ವರ ಬಾಳಲ್ಲಿ ಶಾಂತಿ, ನೆಮ್ಮದಿ ಬೆಳಗಲಿ’ ಎಂದು ಹಾರೈಸಿದ್ದಾರೆ.

‘2020 ಕೊರೋನಾ ಸಂಕಷ್ಟದಿಂದ ನಲುಗಿದ ವರ್ಷ, ಮನುಕುಲ ಬಸವಳಿದ ಈ ದಿನಗಳು ಇಂದಿಗೆ ಕೊನೆಗೊಳ್ಳಲಿ ಎಂದು ಧೀಶಕ್ತಿಯೇ ಆಗಿರುವ ಪ್ರಕೃತಿಯಲ್ಲಿ ಪ್ರಾರ್ಥಿಸುತ್ತೇನೆ. ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. 2021 ಹೊಸ ವರ್ಷವು ಎಲ್ಲರ ಬದುಕಿನಲಿ ಕಷ್ಟಗಳ ಕಳೆದು ಹೊಸತನವ ತರಲಿ. ಎಲ್ಲರ ಆರೋಗ್ಯ ಚೇತನಮಯವಾಗಲಿ’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಆಶಿಸಿದ್ದಾರೆ.

ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ, ‘ಹೊಸ ವರ್ಷವನ್ನು ಸ್ವಾಗತಿಸುವ ಜೊತೆಗೆ, ನಮ್ಮನ್ನು ರಕ್ಷಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಧನ್ಯವಾದಗಳನ್ನು ಹೇಳೋಣ. ಕಳೆದ ವರ್ಷ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗಾಗಿ ಪ್ರಾರ್ಥಿಸೋಣ. ಹೊಸ ವರ್ಷವು ಶಾಂತಿ ಮತ್ತು ಧೈರ್ಯವನ್ನು ತರಲಿ’ ಎಂದು ಟ್ವೀಟ್ ಮಾಡಿದ್ದಾರೆ.

ನಟರಾದ ಪುನೀತ್‌ ರಾಜ್‌ಕುಮಾರ್‌, ದರ್ಶನ್‌ ಅವರೂ ಹೊಸವರ್ಷಕ್ಕೆ ಶುಭಕೋರಿದ್ದಾರೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ