Breaking News
Home / ರಾಜ್ಯ / ಎರಡೂ ಕೈಗಳಿಲ್ಲದಿದ್ದರೂತನ್ನ ಕಾಲಿನಿಂದ ಮತ ಹಾಕಿದಲಕ್ಷ್ಮೀ

ಎರಡೂ ಕೈಗಳಿಲ್ಲದಿದ್ದರೂತನ್ನ ಕಾಲಿನಿಂದ ಮತ ಹಾಕಿದಲಕ್ಷ್ಮೀ

Spread the love

ಗುಂಡುಮುಣುಗು:ಕಾಲಿನಿಂದ ಮತ ಚಲಾಯಿಸುವ ಲಕ್ಷ್ಮೀ.!? ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಂಡು ಮುಣುಗು ಗ್ರಾಮದ, ವಿಶೇಷ ಚೇತನೆ ಲಕ್ಷ್ಮೀ ಇಂದು ತನ್ನ ಕಾಲಿನಿಂದ ಮತ ಹಾಕಿದಳು.ಎರಡೂ ಕೈಗಳಿಲ್ಲದ ಯುವತಿ ಲಕ್ಷ್ಮಿ ಮತದಾನದ ಹಕ್ಕು ಪಡೆದಾಗಿನಿಂದ,ಎಲ್ಲಾ ಚುನಾವಣೆಯಲ್ಲಿ ಭಾಗವಹಿಸಿ ಕಾಲಿನಿಂದಲೇ ಮತ ಚಲಾಯಿಸುತ್ತಿದ್ದಾಳೆ. ಇದು ಎಂತಹವರನ್ನೂ ನಿಬ್ಬೆರಗಾಗಿಸುವ ಸಂಗತಿ ಯಾಗಿದೆ,


ಗ್ರಾಮ ಪಂಚಾಯಿತಿಗೆ ಭಾನುವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ. ಗುಂಡುಮುಣುಗು ಗ್ರಾಮದ ಮತಗಟ್ಟೆ 47ರಲ್ಲಿ ಲಕ್ಷ್ಮೀದೇವಿ ಕಾಲಿನಿಂದ ಮತದಾನ ಮಾಡಿದರು,
ಪ್ರತಿ ಚುನಾವಣೆಯಲ್ಲೂ ಯಾರ ಸಹಾಯವೂ ಇಲ್ಲದೆ ಲಕ್ಷ್ಮೀದೇವಿ ಮತದಾನ ಮಾಡುವುದು ಮಾತ್ರ ತಪ್ಪುವುದಿಲ್ಲ.ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿ ಕಾರ್ಯಕ್ರಮದ ರಾಯಭಾರಿಯಾಗಿ ಲಕ್ಷ್ಮೀದೇವಿ ಅವರನ್ನು ಜಿಲ್ಲಾಡಳಿತ ಆಯ್ಕೆ ಮಾಡಿತ್ತು.
ಎರಡೂ ಕೈಗಳಿಲ್ಲದಿದ್ದರೂ ಬಿ.ಇಡಿ ಶಿಕ್ಷಣ ಪೂರೈಸಿ ಶಿಕ್ಷಕಿಯಾಗುವ ಕನಸು ಹೊತ್ತಿದ್ದಾರೆ ಲಕ್ಷ್ಮೀ. ಸ್ಥಳೀಯ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ,ಶಾಲೆಯ ತರಗತಿಯಲ್ಲಿ ಬೋರ್ಡ್ ಮೇಲೆ ತನ್ನ ಕಾಲಿನಿಂದಲೇ ಅಕ್ಷರಗಳನ್ನು ಬರೆದು ಪಾಠ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ.
ತನ್ನ ಮನೆಯಲ್ಲಿ ಕಾಲಿನಿಂದ ಕಸ ಗುಡಿಸುವುದು,ರಂಗೋಲಿ ಹಾಕುವುದು ಸೇರಿ ತರಕಾರಿಯನ್ನು ಕಟ್ ಮಾಡಿ ಕೊಡುವ ಮೂಲಕ ಮನೆಯವರಿಗೂ ನೆರವಾಗುತ್ತಾರೆ ಲಕ್ಷ್ಮೀದೇವಿ.ಇವರ “ಸ್ವಾಭಿಮಾನದ ಸ್ವಾವಲಂಭಿತನಕ್ಕೆ ಹಾಗೂ ಆದರ್ಶ ವ್ಯಕ್ತಿತ್ವಕ್ಕೆ,ಸಮಸ್ಥ ನಾಡಿನ ಜನತೆಯ ಪರವಾಗಿ ಈ ಮೂಲಕ “ಹ್ಯಾಟ್ಸಾಪ್” ಹೇಳೋಣ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ