Breaking News
Home / ರಾಜ್ಯ / ಜನವರಿ ವೇಳೆಗೆ ತುರ್ತು ಸಂದರ್ಭದ ಬಳಕೆಗೆ ಲಭ್ಯವಾಗಲಿವೆದೆ ಲಸಿಕೆ

ಜನವರಿ ವೇಳೆಗೆ ತುರ್ತು ಸಂದರ್ಭದ ಬಳಕೆಗೆ ಲಭ್ಯವಾಗಲಿವೆದೆ ಲಸಿಕೆ

Spread the love

ನವದೆಹಲಿ, ಡಿ.5- ಮೂರನೇ ಹಂತದ ಪರೀಕ್ಷೆ ಮುಗಿಸಿರುವ ಎರಡು ಕೊರೊನಾ ಲಸಿಕೆಗಳು ಮುಂದಿನ ವರ್ಷದ ಜನವರಿ ವೇಳೆಗೆ ತುರ್ತು ಸಂದರ್ಭದ ಬಳಕೆಗೆ ಲಭ್ಯವಾಗಲಿವೆ ಎಂದು ಹೇಳಿರುವ ಏಮ್ಸ್‍ನ ನಿರ್ದೇಶಕರಾದ ರಣದೀಪ್ ಗುಲೇರಿಯಾ ಅವರು, ಲಸಿಕೆಗಳು ಸಾರ್ವಜನಿಕರ ಬಳಕೆಗೆ 2022ರ ವೇಳೆಗೆ ದೊರೆಯಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್‍ನಿಂದ ಅಂಗೀಕಾರ ಪಡೆದಿರುವ ಫಿಝರ್ ಕೊರೊನಾ ಲಸಿಕೆ, ಸಂಕಟ ಸಮಯದಲ್ಲಿ ನೆರವಾಗುವ ಸ್ಪರ್ಧೆಯಲ್ಲಿ ಜಗತ್ತಿನ ಇತರೆ ಲಸಿಕೆಗಳಿಗಿಂತ ಮುಂದಿದೆ. ಭಾರತ ತನ್ನದೇ ಆದ ಲಸಿಕೆ ಹೊಂದಲು ಅಗತ್ಯವಾದ ತಯಾರಿಗಳು ಬಹುತೇಕ ಮುಗಿದಿವೆ. ಮೂರನೇ ಹಂತದ ಪ್ರಯೋಗಗಳು ನಡೆಯುತ್ತಿವೆ, ಜೊತೆಗೆ ಲಸಿಕೆಯ ಸಾಮಥ್ರ್ಯ ಪರೀಕ್ಷೆ ನಡೆಯುತ್ತಿದೆ.ವಿಜ್ಞಾನ ಮತ್ತು ಕೈಗಾರಿಕಾ ಪರಿಷತ್ ಮತ್ತು ಭಾರತೀಯ ಸಮಗ್ರ ಔಷಧಿ ಸಂಶೋಧನಾ ಸಂಸ್ಥೆಯ ರಾಮ್ ವಿಶ್ವಕರ್ಮ ಅವರು ಮಾತನಾಡಿ, ಅಮೆರಿಕಾ, ಯೂರೋಪ್, ಇಂಗ್ಲೆಂಡ್ ಸೇರಿದಂತೆ ಬಹುತೇಕ ದೇಶಗಳಲ್ಲಿ ಕೆಲವು ಔಷಧಿಗಳನ್ನು ತುರ್ತು ಬಳಕೆಗೆ ಅಗತ್ಯವಾದ ದೃಢೀಕರಣ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಫಿಝರ್ ಲಸಿಕೆಯನ್ನು ಭಾರತದಲ್ಲೂ ಬಳಕೆ ಮಾಡಲಾಗುವುದು ಎಂದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ