Breaking News
Home / ಜಿಲ್ಲೆ / ಬೆಳಗಾವಿ ಜಿಲ್ಲೆಗೂ ಹತ್ತು ಸಾವಿರ ಕೋಟಿ ಬಂಡವಾಳ- ಜಗದೀಶ್ ಶೆಟ್ಟರ್

ಬೆಳಗಾವಿ ಜಿಲ್ಲೆಗೂ ಹತ್ತು ಸಾವಿರ ಕೋಟಿ ಬಂಡವಾಳ- ಜಗದೀಶ್ ಶೆಟ್ಟರ್

Spread the love

ಬೆಳಗಾವಿ-ಬೆಳಗಾವಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 162ಕಂಪನಿಗಳು ಭಾಗವಹಿಸಿವೆ 9,500 ಉದ್ಯೋಗವಕಾಶವಿದ್ದು ಹದಿನಾರು ಸಾವಿರಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದು ಯುವ ಬಂಧುಗಳು ಕಂಪನಿಗಳು ನಡೆಸುವ ಸಂದರ್ಶನಗಳನ್ನು ಎದುರಿಸಿ ಉದ್ಯೋಗಾವಕಾಶಗಳನ್ನು ಪಡೆಯಬೇಕೆಂದು ಬೃಹತ್ತ್ ಕೈಗಾರಿಕಾ,ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಶುಭ ಹಾರೈಸಿದರು

ಬೆಳಗಾವಿಯಲ್ಲಿ ಬೆಳಗಾವಿ,ಧಾರವಾಡ ವಿಭಾಗದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು ಕೈಗಾರಿಕೆಗಳು ಬೆಳೆದರೆ ಹೆಚ್ಚಿನ ಉದ್ಯೋಗವಾಕಾಶ ಸಿಗಲು ಸಾಧ್ಯ ಇದಕ್ಕೂ ಮೊದಲು ಕೈಗಾರಿಕೆಗಳು ಬೆಂಗಳೂರಿಗೆ ಸೀಮೀತವಾಗಿದ್ದವು,ಅನೇಕ ವಿರೋಧದ ಮದ್ಯ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಹೆಚ್ವಿನ,ರಿಯಾಯತಿಗಳನ್ನು ನೀಡಿ ಬಂಡವಾಳ ಹೂಡುವಂತೆ ಉದ್ಯಮಿಗಳನ್ನು ಆಕರ್ಷಿಸಲಾಗಿದೆ ,ಹುಬ್ಬಳ್ಳಿ ಯಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶ ದಲ್ಲಿ72 ಸಾವಿರ ಕೋಟಿ ಬಂಡವಾಳ ಹೂಡಲು ಉದ್ಯಮಿಗಳು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು

ಬೆಳಗಾವಿ ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ಬಂಡವಾಳ ಹೂಡಲು ಹತ್ತು ಜನ ಉದ್ಯಮಿಗಳು ಒಪ್ಪಂದ ಮಾಡಿಕೊಂಡಿದ್ದಾರೆ ಆದಷ್ಡು ಬೇಗನೆ ಎಲ್ಲ ಅರ್ಜಿಗಳ ಪರಶೀಲನೆ ಮಾಡಿ ಬಂಡವಾಳ ಹೂಡಲು ಎಲ್ಲ ರೀತಿಯ ಅನುಕೂಲತೆ ಕಲ್ಪಿಸುತ್ತೇವೆ ಎಂದು ಜಗದೀಶ್ ಶೆಟ್ಟರ್ ಭರವಸೆ ನೀಡಿದರು

ಮಹಾದಾಯಿ ಕುರಿತು ಹಲವಾರು ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ ,ಮುಖ್ಯಮಂತ್ರಿ ಯಡಿಯೂರಪ್ಪ ನವರ ಹುಟ್ಟು ಹಬ್ಬದ ದಿನ ಸಿಹಿ ಸುದ್ಧಿ ಹೊರಬಿದ್ದಿದೆ ,ಪ್ರದಾನಿ ನರೇಂದ್ರ ಮೋದಿ ಅವರ ವಿಶೇಷ ಕಾಳಜಿಯಿಂದಾಗಿ ಮಹಾದಾಯಿ ತೀರ್ಪಿನ ಗೆಜೆಟ್ ಹೊರಬಿದ್ದಿದೆ‌.ಆದಷ್ಟು ಬೇಗ ಮಹಾದಾಯಿಯ ನದಿಯ ನೀರು ಮಲಪ್ರಭೆಗೆ ಸೇರಲಿ ಎಂದು ಜಗದೀಶ್ ಶೆಟ್ಟರ್ ಆಶಯ ವ್ಯೆಕ್ತಪಡಿಸಿದರು.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ